ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಆಟೋ ಉತ್ಪಾದನಾ ಕಂಪನಿಗಳಿಗೆ ಪ್ರಮುಖ ಬಿಡಿಭಾಗಗಳನ್ನು ಒದಗಿಸುವ ಬಾಷ್ ಕಂಪನಿಯು ದೇಶಾದ್ಯಂತ ಸುಮಾರು 250 ಸರ್ವಿಸ್ ಸೆಂಟರ್‌ಗಳನ್ನು ಹೊಂದಿದ್ದು, ಇದೀಗ ಮಲ್ಟಿ ಬ್ರಾಂಡ್ ಕಾರುಗಳಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸಲು ಅತಿ ದೊಡ್ಡ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಿದೆ.

ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಬಾಷ್ ಕಂಪನಿಯ ಹೊಸ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಅನ್ನು ಆಟೋಮೊಟಿವ್ ಹಬ್ ಹರಿಯಾಣದ ಪಂಚಕುಲದಲ್ಲಿ ತೆರೆಯಲಾಗಿದ್ದು, ಹೊಸ ಸೆಂಟರ್ ಮೂಲಕ ಚಂಡಿಘಡ್ ಮತ್ತು ಮೊಹಾಲಿ ನಗರಗಳಲ್ಲಿ ಗ್ರಾಹಕರಿಗೆ ಅನುಕೂಲಕವಾಗುವಂತೆ ಹೊಸ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬಾಷ್ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್‌ನಲ್ಲಿ ಒಂದೇ ಬಾರಿಗೆ 40 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದ್ದು, 36,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.

ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಹೊಸ ಕಾರ್ಯಾಗಾರದಲ್ಲಿ ಬಾಷ್ ಕಂಪನಿಯು ಇಎಸ್‌ಐ ಸಾಫ್ಟ್‌ವೇರ್‌ನೊಂದಿಗೆ ಇಸಿಯು ಡಯಾಗ್ನೋಸ್ಟಿಕ್ ಸ್ಕ್ಯಾನರ್ ಅನ್ನು ಅಳವಡಿಸಿದ್ದು, 28 ಜನ ವೃತ್ತಿಪರ ತಂತ್ರಜ್ಞರನ್ನು ನೇಮಕಗೊಳಿಸಲಾಗಿದೆ.

ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಬಾಷ್ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಕಂಪನಿಯೇ ನೇರವಾಗಿ ನಿರ್ವಹಣೆ ಮಾಡುವುದರಿಂದ ಬಿಡಿಭಾಗಗಳ ಲಭ್ಯತೆ ಸರಿಯಾದ ಸಮಯಕ್ಕೆ ಪೂರೈಕೆಯಾಗಲಿದ್ದು, ಕಾರುಗಳ ಸೇವೆಗಳಿಗೆ ಹೆಚ್ಚಿನ ಯಾವುದೇ ಕಾಯುವಿಕೆ ಅವಧಿ ಇರುವುದಿಲ್ಲ.

ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಮತ್ತೊಂದು ವಿಶೇಷತೆಯೆಂದರೆ ಸರ್ವಿಸ್ ಸೆಂಟರ್‌ಗಳಿಗೆ ಬರುವ ಕಾರುಗಳ ತಾಂತ್ರಿಕ ಸಮಸ್ಯೆಗಳ ಆಧಾರದ ಮೇಲೆ ಪ್ರತ್ಯೇಕ ವಿಭಾಗಗಳನ್ನು ತೆರೆದಿರುವ ಬಾಷ್ ಕಂಪನಿಯು ಸಾಮಾನ್ಯ ತಾಂತ್ರಿಕ ತಾಂತ್ರಿಕ ಅಂಶಗಳ ಪರಿಶೀಲನೆಯೊಂದಿಗೆ ಇಸಿಯು ಡಯಾಗ್ನೋಸ್ಟಿಕ್ಸ್‌, ಬ್ರೇಕ್ ಸರ್ವಿಸ್, ಕೂಲಂಕುಶವಾದ ಕ್ಲಚ್ ಪರೀಕ್ಷೆ, ಸಸ್ಪೆಷನ್ ಸಿಸ್ಟಂ ಚೆಕ್ಅಪ್, ಎಸಿ ಡಯಾಗ್ನೋಸ್ಟಿಕ್ಸ್. ಬಾಡಿ ರಿಪೇರಿ, ವೀಲ್ಹ್ ಬ್ಯಾಲೆನ್ಸ್, ಟೈರ್ ಸರ್ವಿಸ್, ಕಾರ್ ವಾಶ್ ಸೇವೆಗಳನ್ನು ಇಲ್ಲಿ ನೀಡಲಾಗುತ್ತದೆ.

ಇದರೊಂದಿಗೆ ಹೊಸ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಮೂಲಕ ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ರೋಡ್ ಸೈಡ್ ಅಸಿಸ್ಟ್, ಪಿಕ್ ಅಪ್ ಮತ್ತು ಡ್ರಾಪ್ ಸೇವೆಗಳು, ಕ್ಯಾಶ್‌ಲೆಸ್ ಇನ್ಸುರೆನ್ಸ್ ಮತ್ತು ವಾರ್ಷಿಕ ಸೇವಾ ನಿರ್ವಹಣಾ ಸೇವೆಗಳನ್ನು ನೀಡುತ್ತದೆ.

ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಆಕರ್ಷಕ ಪ್ಯಾಕೇಜ್‌ನೊಂದಿಗೆ ವಾರ್ಷಿಕ ಸೇವಾ ನಿರ್ವಹಣಾ ಸೇವೆಗಳನ್ನು ಬಾಷ್ ಕಂಪನಿಯು ದೇಶಾದ್ಯಂತ ತನ್ನ ಎಲ್ಲಾ ಕಾರ್ ಸರ್ವಿಸ್ ಸೆಂಟರ್‌ಗಳಲ್ಲೂ ನೀಡುತ್ತಿದ್ದು, ಇದು ಉತ್ಪಾದಕ ಕಂಪನಿಗಳು ನೀಡುವ ಕಂಪನಿ ವಾರಂಟಿ ಪ್ಯಾಕೇಜ್‌‌ನೊಂದಿಗೆ ಸಂಯೋಜನೆಗೊಂಡಿರುವುದಿಲ್ಲ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್

ಕಾರು ಉತ್ಪಾದನಾ ಕಂಪನಿಗಳ ವಾರಂಟಿ ಸೇವೆಗಳನ್ನು ಹೊರತುಪಡಿಸಿ ಪ್ರತ್ಯೇಕ ಪ್ಯಾಕೇಜ್ ಪಡೆದುಕೊಳ್ಳಬೇಕಿದ್ದು, ಇತರೆ ಮೌಲ್ಯವರ್ಧಿತ ಸೇವೆಗಳನ್ನು ಬಾಷ್ ಕಂಪನಿಯು ಗ್ರಾಹಕರಿಗೆ ಆಕರ್ಷಕ ಬೆಲೆಯೊಂದಿಗೆ ಆಫರ್‌ಗಳನ್ನು ನೀಡುತ್ತಿದೆ.

Note: Images are representative purpose only.

Most Read Articles

Kannada
English summary
Bosch Opens India’s Largest Multi-Brand Car Service Facility. Read in Kannada.
Story first published: Tuesday, January 19, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X