ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಬ್ರಿಡ್ಜ್‌ಸ್ಟೋನ್ ಇಂಡಿಯಾ ಕಂಪನಿಯು ವಾಣಿಜ್ಯ ವಾಹನ ಮಾದರಿಗಳಿಗಾಗಿ ಹೊಸ ಟೈರ್ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಹೊಸ ಟೈರ್ ಮಾದರಿಯು ಸಾಮಾನ್ಯ ಟೈರ್‌ಗಿಂತಲೂ ಹೆಚ್ಚಿನ ಮಟ್ಟದ ಕಾರ್ಯಕ್ಷಮತೆಯೊಂದಿಗೆ ಮೈಲೇಜ್‌ ಹೆಚ್ಚಳಕ್ಕೆ ಪೂರಕವಾದ ಅಂಶಗಳನ್ನು ಹೊಂದಿದೆ.

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿರುವ ವಿ-ಸ್ಟೀಲ್ ಮಿಕ್ಸ್ ಎಂ721 ಟೈರ್ ಮಾದರಿಯು ಬ್ರಿಡ್ಜ್‌ಸ್ಟೋನ್ ಸಿದ್ದಪಡಿಸಿರುವ ಹೊಸ ಟೈರ್ ಮಾದರಿಯಾಗಿದ್ದು, ವಾಣಿಜ್ಯ ವಾಹನಗಳ ಕಾರ್ಯಾಚರಣೆಗೆ ಪೂರಕವಾದ ಅಂಶಗಳೊಂದಿಗೆ ಅಭಿವೃದ್ದಿಗೊಂಡಿದೆ. ವಾಣಿಜ್ಯ ವಾಹನಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಪೂರಕವಾದ ಅಂಶಗಳನ್ನು ಹೊಂದಿರುವ ವಿ-ಸ್ಟೀಲ್ ಮಿಕ್ಸ್ ಎಂ721 ಟೈರ್ ಮಾದರಿಯು ಸಾಮಾನ್ಯ ಟೈರ್‌ಗಿಂತ ಶೇ.15ರಷ್ಟು ಇಂಧನ ಉಳಿತಾಯಕ್ಕೆ ಸಹಕರಿಸಲಿದೆ.

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಇಂಧನ ಉಳಿತಾಯದಿಂದ ಪ್ರತಿ ಕಿಲೋ ಮೀಟರ್ ನಿರ್ವಹಣಾ ವೆಚ್ಚದಲ್ಲಿ ಇಳಿಕೆಯಾಗುವುದರಿಂದ ಮಾಲೀಕರಿಗೆ ಸಾಕಷ್ಟು ಸಹಕಾರಿಯಾಗಲಿದ್ದು, ಉತ್ತಮ ಗುಣಮಟ್ಟದಿಂದಾಗಿ ಬಾಳ್ವಿಕೆ ಅವಧಿ ಕೂಡಾ ಹೆಚ್ಚಿರುತ್ತದೆ.

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ವಾಣಿಜ್ಯ ವಾಹನ ನಿರ್ವಹಣಾ ಸಂಸ್ಥೆಗಳ ಅಭಿಪ್ರಾಯ ಸಂಗ್ರಹದ ಮೇಲೆ ಹೊಸ ಟೈರ್ ಉತ್ಪನ್ನವನ್ನು ಸಿದ್ದಪಡಿಸಿರುವ ಬ್ರಿಡ್ಜ್‌ಸ್ಟೋನ್ ಕಂಪನಿಯು ಆಕ್ಸೆಲ್ ಟೈರ್ ಮಾರಾಟ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಲಾಭದಾಯಕ ಅಂಶಗಳನ್ನು ನೀರಿಕ್ಷಿಸುವ ವಾಣಿಜ್ಯ ವಾಣಿಜ್ಯ ನಿರ್ವಹಣಾ ಸಂಸ್ಥೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿಯೇ ಹೊಸ ವಿ-ಸ್ಟೀಲ್ ಮಿಕ್ಸ್ ಎಂ721 ಟೈರ್ ಮಾದರಿಯನ್ನು ಸಿದ್ದಪಡಿಸಿರುವ ಬ್ರಿಡ್ಜ್‌ಸ್ಟೋನ್ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಹೊಸ ಟೈರ್ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಟೈರ್ ಬೆಲೆ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಇನ್ನು ವಾಣಿಜ್ಯ ವಾಹನಗಳ ಟೈರ್ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಬ್ರಿಡ್ಜ್ ಸ್ಟೋನ್ ಕಂಪನಿಯು ಭಾರತದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಮುಂದಿನ 5 ವರ್ಷಗಳಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಭಾರತದಲ್ಲಿ ಈಗಾಗಲೇ ಹಲವಾರು ಜನಪ್ರಿಯ ಟೈರ್ ಉತ್ಪಾದಕರಿದ್ದು, ಈ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಬ್ರಿಡ್ಜ್ ಸ್ಟೋನ್ ಭಾರತದಲ್ಲೂ ಪೂರ್ಣ ಪ್ರಮಾಣದ ಕಾರ್ಯಚರಣೆ ಆರಂಭಿಸುವ ಮೂಲಕ ದೇಶಿಯವಾಗಿ ಉತ್ಪಾದನೆ ಕೈಗೊಳ್ಳುತ್ತಿದೆ.

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ಹೊಸ ಯೋಜನೆ ಅಡಿ ಇಂಧೋರ್ ಮತ್ತು ಪುಣೆಯಲ್ಲಿ ಪ್ರತಿದಿನ 15 ಸಾವಿರ ಟೈರ್‌ಗಳನ್ನು ಉತ್ಪಾದನಾ ಸಾಮರ್ಥ್ಯದ ಎರಡು ಉತ್ಪಾದನಾ ಘಟಕಗಳನ್ನು ತೆರೆಯುತ್ತಿರುವ ಬ್ರಿಡ್ಜ್ ಸ್ಟೋನ್ ಕಂಪನಿಯು ಇದಕ್ಕಾಗಿ 2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್‌ಸ್ಟೋನ್

ರೂ. 2 ಸಾವಿರ ಕೋಟಿ ಬಂಡವಾಳವನ್ನು ಮುಂದಿನ 5 ವರ್ಷಗಳ ಕಾಲ ವಿವಿಧ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಬ್ರಿಡ್ಜ್ ಸ್ಟೋನ್, 2022ರ ವೇಳೆಗೆ ಪ್ರತಿದಿನಕ್ಕೆ 41 ಸಾವಿರ ಟೈರ್ ಉತ್ಪಾದನೆ ಮಾಡುವ ಗುರಿ ಹೊಂದಿದೆ.

Most Read Articles

Kannada
English summary
Bridgestone Launches New Tyre For CVs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X