ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಕೇಂದ್ರ ಮತ್ತ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ವಾಹನ ಕಂಪನಿಗಳು ಕೂಡಾ ವಿವಿಧ ಮಾದರಿಯ ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ದುಬಾರಿಯಾಗಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಧನ ಘೋಷಿಸಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಸಾಂಪ್ರಾದಾಯಿಕ ವಾಹನ ಉತ್ಪಾದನಾ ಕಂಪನಿಗಳ ಜೊತೆ ಸ್ಟಾರ್ಟ್ ಕಂಪನಿಗಳು ಕೂಡಾ ಗ್ರಾಹಕರನ್ನು ಸೆಳೆಯುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಣೆಯಲ್ಲಿರುವ ಚೀನಿ ಮೂಲದ ಜನಪ್ರಿಯ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾದ ಬಿವೈಡಿ ಕೂಡಾ ತನ್ನ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಭಾರತದಲ್ಲೂ ಬಿಡುಗಡೆಯ ಯೋಜನೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಹೊಸ ಯೋಜನೆಗಾಗಿ ಈಗಾಗಲೇ ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ವಿವಿಧ ವಾಣಿಜ್ಯ ವಾಹನಗಳ ಕಂಪನಿಗಳೊಂದಿಗೆ ಸಹಭಾಗೀತ್ವ ಯೋಜನೆ ಹೊಂದಿರುವ ಬಿವೈಡಿ ಕಂಪನಿಯು ಎಲೆಕ್ಟ್ರಿಕ್ ಬಸ್‌ಗಳನ್ನು ಸಿದ್ದಪಡಿಸುತ್ತಿದ್ದು, ವಾಣಿಜ್ಯ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆಯಲ್ಲಿರುವ ಬಿವೈಡಿ ಕಂಪನಿಯು ಚೀನಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಇ6 ಎಂಪಿವಿ ಮಾದರಿಯನ್ನು ಭಾರತದಲ್ಲೂ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಕೈಗೊಂಡಿದ್ದು, ಹೊಸ ಇ6 ಎಲೆಕ್ಟಿಕ್ ಕಾರು ಇತ್ತೀಚೆಗೆ ಬೆಂಗಳರು ಟು ಚೆನ್ನೈ ಹೆದ್ದಾರಿಯಲ್ಲಿ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಹೊಸ ಕಾರಿನ ಹಲವು ಮಾಹಿತಿಗಳು ಲಭ್ಯವಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆಗಾಗಿ ಸಂಪೂರ್ಣ ಆಮದು ನೀತಿ ಅನುಸರಿಸಲಿರುವ ಬಿವೈಡಿ ಕಂಪನಿಯು ಮುಂದಿನ ಕೆಲವು ವರ್ಷಗಳ ನಂತರ ಭಾರತದಲ್ಲಿ ನಿರ್ಮಾಣ ಮಾಡುವ ಗುರಿಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಕೇಂದ್ರ ಸರ್ಕಾರದ ಹೊಸ ಆಮದು ನೀತಿ ಅಡಿ ವಿದೇಶಿ ವಾಹನ ಕಂಪನಿಗಳು ಪ್ರತಿ ವರ್ಷ 2,500 ಯುನಿಟ್ ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳಬಹುದಾದ ಹಿನ್ನೆಲೆಯಲ್ಲಿ ಹೊಸ ಕಾರು ಮಾರಾಟಕ್ಕೆ ಬಿವೈಡಿ ಕೂಡಾ ಸಿದ್ದತೆ ನಡೆಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಚೀನಿ ಮಾರುಕಟ್ಟೆಯಲ್ಲಿ ತನ್ನದೇ ಉತ್ಪಾದನೆಯ ಬ್ಯಾಟರಿ ಸೌಲಭ್ಯ ಹೊಂದಿರುವ ಬಿವೈಡಿ ಕಾರು ಮಾದರಿಗಳು ಭಾರತದಲ್ಲೂ ಗ್ರಾಹಕರನ್ನು ಸೆಳೆಯುವ ಸಿದ್ದತೆಯಲ್ಲಿದ್ದು, ಇ6 ಎಂಪಿವಿ ಕಾರು ಮಾದರಿಯು 41kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 522 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ಮತ್ತು ಐಷಾರಾಮಿ ಫೀಚರ್ಸ್ ಒಳಗೊಂಡಿರುವ ಹೊಸ ಕಾರು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.20 ಲಕ್ಷದಿಂದ ರೂ.25 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಲ್ಲಿದ್ದು, ಭಾರತದಲ್ಲೇ ಪೂರ್ಣ ಪ್ರಮಾಣದ ಉತ್ಪಾದನೆ ನಂತರವಷ್ಟೇ ಹೊಸ ಕಾರಿನ ಬೆಲೆಗಳು ತುಸು ಕಡಿಮೆಯಾಗಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸಾಧನವು ದುಬಾರಿ ಬೆಲೆ ಹೊಂದಿದ್ದು, ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗಾಗಿ ಬಿವೈಡಿ ಸಂಸ್ಥೆಯು ಸ್ಥಳೀಯವಾಗಿಯೇ ಸಂಪನ್ಮೂಲ ಬಳಸಿಕೊಂಡು ವಾಹನ ನಿರ್ಮಾಣ ಮಾಡಲು ಯೋಜನೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 522 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇವಿ ಕಾರು

ಸದ್ಯ ಹೈದ್ರಾಬಾದ್ ಮೂಲದ ಒಲೆಕ್ಟ್ರಾ ಜೊತೆಗೂಡಿ ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದನೆ ಕೈಗೊಳ್ಳುತ್ತಿರುವ ಬಿವೈಡಿ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಚೆನ್ನೈ ಬಳಿ ಹೊಸ ಘಟಕ ತೆರೆಯುವ ಸಂಬಂಧ ತಮಿಳುನಾಡು ಸರ್ಕಾರದ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದೆ.

Most Read Articles

Kannada
English summary
BYD e6 Electric MPV Spied Testing Again Ahead Of Expected India Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X