ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಬಿವೈಡಿ ಇಂಡಿಯಾ ಕಂಪನಿಯು ತನ್ನ ಹೊಸ ಇ6 ಎಲೆಕ್ಟ್ರಿಕ್ ಎಂಪಿವಿ ಬಿಡುಗಡೆಯ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಬಿವೈಡಿ ಕಂಪನಿಯು ಇವಿ ಕಾರುವನ್ನು ವಿವಿಧ ನಗರಗಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಪ್ರಕಟಿಸಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಗ್ರೂಪ್ ಲ್ಯಾಂಡ್‌ಮಾರ್ಕ್ ಸಂಸ್ಥೆಯು ಭಾರತದ ಪ್ರಮುಖ 32 ನಗರಗಳಲ್ಲಿ ಕಾರು ಮಾರಾಟ ಜಾಲವನ್ನು ಹೊಂದಿದ್ದು, ಗ್ರೂಪ್ ಲ್ಯಾಂಡ್‌ಮಾರ್ಕ್ ಸಂಸ್ಥೆಯು ಮರ್ಸಿಡಿಸ್ ಬೆಂಝ್, ಹೋಂಡಾ ಕಾರ್ಸ್, ಜೀಪ್, ಫೋಕ್ಸ್‌ವ್ಯಾಗನ್, ರೆನಾಲ್ಟ್ ಸೇರಿದಂತೆ ಪ್ರಮುಖ ಕಾರು ಮಾದರಿಗಳ ಮಾರಾಟ ಜಾಲ ಹೊಂದಿದೆ. ಇದೀಗ ಬಿವೈಡಿ ಕಂಪನಿಯು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆಗೆ ಹೊಸ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಗೆ ಉತ್ತಮ ಮಾರುಕಟ್ಟೆ ಒದಗಿಸಲಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಕಾರು ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅತ್ಯಧಿಕ ಮೈಲೇಜ್ ರೇಂಜ್ ಫೀಚರ್ಸ್ ಹೊಂದಿದ್ದು, ಹೊಸ ಕಾರು ಸದ್ಯ ದೇಶದ ಪ್ರಮುಖ ಎಂಟು ನಗರಗಳಲ್ಲಿ ಖರೀದಿಗೆ ಲಭ್ಯವಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಬಿವೈಡಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಗ್ರೂಪ್ಸ್ ಜೊತೆಗೂಡಿ ಹೊಸ ಕಾರು ಮಾರಾಟ ಆರಂಭಿಸಿದ್ದು, ಚೆನ್ನೈನಲ್ಲಿ ಕೆಯುಎನ್ ಆಟೋ ಗ್ರೂಪ್, ಹೈದ್ರಾಬಾದ್‌ನಲ್ಲಿ ಮ್ಯಾಡಿ ಗ್ರೂಪ್, ಅಹಮದಾಬಾದ್‌ನಲ್ಲಿ ಕಾರ್ಗೊ ಮೋಟಾರ್ಸ್, ಕೊಚ್ಚಿಯಲ್ಲಿ ಇವಿಎಂ ಆಟೋಕಾರ್ಫ್ಟ್ ಸಂಸ್ಥೆಗಳ ಜೊತೆ ಪಾಲುದಾರಿಕೆ ಹೊಂದಿದೆ.

ದೆಹಲಿಯಲ್ಲಿ ಈಗಾಗಲೇ ಲ್ಯಾಂಡ್‌ಮಾರ್ಕ್ ಆಟೋಮೊಬೈಲ್ಸ್ ಸಂಸ್ಥೆಯೊಂದಿಗೆ ಬಿವೈಡಿ ಇವಿ ಕಾರು ಮಾರಾಟ ಆರಂಭಿಸಿದ್ದು, ಗ್ರೂಪ್ ಲ್ಯಾಂಡ್‌ಮಾರ್ಕ್ ಇದೀಗ ದೇಶದ ಪ್ರಮುಖ ನಗರಗಳಲ್ಲಿ ಬಿವೈಡಿ ಇವಿ ಕಾರುಗಳಿಗೆ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಬಿವೈಡಿ ಇವಿ ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 29.15 ಲಕ್ಷ ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಆರಂಭಿಕವಾಗಿ ಬಿ2ಬಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಬಿ2ಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗಾಗಿ ಮಾತ್ರವೇ ಪರಿಚಯಿಸಲಾಗಿರುವ ಹೊಸ ಇ6 ಕಾರನ್ನು ಫ್ಲೀಟ್ ಆಪರೇಟರ್‌ಗಳು ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಖರೀದಿಸಬಹುದಾಗಿದ್ದು, ಮುಂಬರುವ ಕೆಲ ತಿಂಗಳ ನಂತರ ಹೊಸ ಕಾರನ್ನು ವ್ಯಯಕ್ತಿಕ ಕಾರು ಬಳಕೆದಾರರು ಕೂಡಾ ಖರೀದಿಸಬಹುದಾಗಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿದೆ. ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ AC ಮತ್ತು DC ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ. ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಹಾಗೆಯೇ ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಇ6 ಎಂಪಿವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್‌, ಕ್ರೋಮ್ ಬಾರ್‌ ಒಳಗೊಂಡ ಬಿವೈಡಿ ಲೊಗೊ, ಆಕರ್ಷಕ ಸ್ಪಾಯ್ಲರ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್‌ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಹೊಸ ಕಾರಿನಲ್ಲಿ ಹೊರಭಾಗದಲ್ಲಿರುವಂತೆ ಒಳಭಾಗದಲ್ಲಿರುವ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಲೆದರ್ ಸೀಟ್‌ಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಂ ಹೊಂದಿದೆ.

ಇವಿ ಕಾರು ಮಾರಾಟ ಮಳಿಗೆ ವಿಸ್ತರಿಸಲು ಗ್ರೂಪ್ ಲ್ಯಾಂಡ್‌ಮಾರ್ಕ್ ಜೊತೆ ಕೈಜೋಡಿಸಿದ ಬಿವೈಡಿ

ಇನ್ನು ಹೊಸ ಕಾರಿನಲ್ಲಿ ಹಲವಾರು ಸುರಕ್ಷತಾ ವೈಶಿಷ್ಟ್ಯತೆಗಳಿದ್ದು, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ.

ಹಾಗೆಯೇ ಹೊಸ ಕಾರಿನ ಖರೀದಿ ಮೇಲೆ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ಕಾಲ ವಾರಂಟಿ ನೀಡಿದೆ.

Most Read Articles

Kannada
Read more on ಬಿವೈಡಿ byd
English summary
Byd e6 india sales expansion with group landmark details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X