ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿರುವ ಮುಂಚೂಣಿಯಲ್ಲಿರುವ ಬಿವೈಡಿ ಕಂಪನಿಯು ಭಾರತದಲ್ಲಿ ಪ್ರಮುಖ ವಾಹನಗಳ ಕಂಪನಿಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಇಂಧನ ಆಧರಿತ ವಾಹನಗಳನ್ನು ತಗ್ಗಿಸಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಕೇಂದ್ರ ಮತ್ತ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ವಾಹನ ಕಂಪನಿಗಳು ಕೂಡಾ ವಿವಿಧ ಮಾದರಿಯ ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ದುಬಾರಿಯಾಗಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಧನ ಘೋಷಿಸಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಸಾಂಪ್ರಾದಾಯಿಕ ವಾಹನ ಉತ್ಪಾದನಾ ಕಂಪನಿಗಳ ಜೊತೆ ಸ್ಟಾರ್ಟ್ ಕಂಪನಿಗಳು ಕೂಡಾ ಗ್ರಾಹಕರನ್ನು ಸೆಳೆಯುತ್ತಿದ್ದು, ವಿದೇಶಿಯ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಭಾರತದಲ್ಲಿನ ಎಲೆಕ್ಟ್ರಿಕ್ ವಾಹನ ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಣೆಯಲ್ಲಿರುವ ಚೀನಿ ಮೂಲದ ಜನಪ್ರಿಯ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿಯಾದ ಬಿವೈಡಿ ಕೂಡಾ ತನ್ನ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಭಾರತದಲ್ಲೂ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಹೊಸ ಯೋಜನೆಗಾಗಿ ಈಗಾಗಲೇ ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ವಿವಿಧ ವಾಣಿಜ್ಯ ವಾಹನಗಳ ಕಂಪನಿಗಳೊಂದಿಗೆ ಸಹಭಾಗೀತ್ವ ಯೋಜನೆ ಹೊಂದಿರುವ ಬಿವೈಡಿ ಕಂಪನಿಯು ಎಲೆಕ್ಟ್ರಿಕ್ ಬಸ್‌ಗಳನ್ನು ಸಿದ್ದಪಡಿಸುತ್ತಿದ್ದು, ವಾಣಿಜ್ಯ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆಯಲ್ಲಿರುವ ಬಿವೈಡಿ ಕಂಪನಿಯು ಚೀನಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಯನ್ನು ಭಾರತದಲ್ಲೂ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಕೈಗೊಂಡಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಇತ್ತೀಚೆಗೆ ಇ6 ಎಂಪಿವಿ ಮಾದರಿಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ್ದ ಬಿವೈಡಿ ಕಂಪನಿಯು ಇದೀಗ ಕಾರ್ಗೊ ಉದ್ದೇಶಗಳಿಗಾಗಿ ತನ್ನ ಮತ್ತೊಂದು ಜನಪ್ರಿಯ ಟಿ3 ವ್ಯಾನ್ ಅನ್ನು ಕೂಡಾ ರೋಡ್

ಟೆಸ್ಟಿಂಗ್ ನಡೆಸುತ್ತಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಡಿಸಿ ಚಾರ್ಜರ್‌ ಸೌಲಭ್ಯದೊಂದಿಗೆ ಕೇವಲ 90 ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಪಡೆದುಕೊಳ್ಳುವ ಟಿ3 ವ್ಯಾನ್ ಪ್ರತಿ ಚಾರ್ಜ್‌ಗೆ ಗರಿಷ್ಠ 300 ಕಿ.ಮೀ ಮೈಲೇಜ್ ಹಿಂದಿರುಗಸಲಿದ್ದು, ಅತ್ಯುತ್ತಮ ಒಳಾಂಗಣ ಸೌಲಭ್ಯದೊಂದಿಗೆ ಗರಿಷ್ಠ ಸರಕು ಸಾಗಿಸಲು ಅನುಕೂಲಕರವಾಗಿದೆ.

ಭಾರತದಲ್ಲಿ ಟಿ3 ಎಲೆಕ್ಟ್ರಿಕ್ ಕಾರ್ಗೊ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಿದ ಬಿವೈಡಿ

ಪೋಸ್ಟಲ್ ಸಾಗಾಣಿಕೆಗಾಗಿ, ಬೇಕರಿ ಉದ್ಯಮಗಳಿಗೆ, ಆ್ಯಂಬುಲೆನ್ಸ್ ಬಳಕೆಯ ಉದ್ದೇಶಕ್ಕಾಗಿ ಟಿ3 ವ್ಯಾನ್ ಉತ್ತಮ ಬಾಡಿ ವಿನ್ಯಾಸ ಹೊಂದಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಹೆಚ್ಚಿನ ಮಟ್ಟದ ಉಳಿತಾಯಗಳಿಗಾಗಿ ಹೊಸ ಎಲೆಕ್ಟ್ರಿಕ್ ವ್ಯಾನ್ ಉತ್ತಮವಾಗಿದೆ.

Most Read Articles

Kannada
English summary
BYD T3 Electric Cargo Van Spotted On Test In India.
Story first published: Saturday, June 19, 2021, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X