ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಭಾರತದ ಪ್ರಮುಖ ಟಯರ್ ತಯಾರಕ ಕಂಪನಿಯಾದ ಸಿಯೆಟ್ ಟಯರ್ಸ್ ಲಿಮಿಟೆಡ್, ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕಾಗಿ ಸೆಕ್ಯುರಾಡ್ರೈವ್ ಎಸ್‌ಯುವಿ ಎಂಬ ಹೊಸ ಪ್ರೀಮಿಯಂ ಟಯರ್ ಸರಣಿಯನ್ನು ಬಿಡುಗಡೆಗೊಳಿಸಿದೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಹೊಸ ಸರಣಿಯ ಟಯರ್‌ಗಳು ನಿರಂತರವಾಗಿ ಬೆಳೆಯುತ್ತಿರುವ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಟಯರ್‌ಗಳನ್ನು ಪೂರೈಸುತ್ತವೆ. ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ ಈ ಹೊಸ ಟಯರ್, ತನ್ನ ಹೆಸರನ್ನು ಸೆಕ್ಯುರಾಡ್ರೈವ್ ಪ್ಲಾಟ್‌ಫಾರಂನಿಂದ ಪಡೆದಿದೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಸೆಕ್ಯುರಾಡ್ರೈವ್ ಪ್ಲಾಟ್‌ಫಾರಂ ಟಯರ್‌ಗಳನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್‌ ಕಾರುಗಳಿಗೆ ಬಳಸಲಾಗುತ್ತದೆ. ಹೊಸ ಸೆಕ್ಯುರಾಡ್ರೈವ್ ಎಸ್‌ಯುವಿ ಟಯರ್‌ಗಳು ವಿಶಿಷ್ಟ ಚಾಲನಾ ಅನುಭವವನ್ನು ನೀಡಲು ನೆರವಾಗುತ್ತವೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಟಯರ್‌ಗಳು ನಗರದ ರಸ್ತೆಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಈ ಹೊಸ ಸರಣಿಯ ಟಯರ್‌ಗಳು ನವೀನ 3ಡಿ ಗ್ರೂವ್ ವಾಲ್ ತಂತ್ರಜ್ಞಾನದಿಂದಾಗಿ ನಿಖರವಾದ ಸ್ಟೀಯರಿಂಗ್ ಕಂಟ್ರೋಲ್ ನೀಡುತ್ತವೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಟಯರ್‌ಗಳ ಮಾದರಿಯಲ್ಲಿರುವ ದ್ರವರೂಪದ ಸಿಪ್ ವಿನ್ಯಾಸವು ಅಕ್ವಾಪ್ಲೇನಿಂಗ್‌ಗೆ ನೆರವಾಗುವುದರ ಜೊತೆಗೆ ಉತ್ತಮ ಬ್ರೇಕಿಂಗ್ ನೀಡುತ್ತದೆ. ಚಕ್ರದ ಹೊರಮೈ ಪಿಚ್ ವಿನ್ಯಾಸಕ್ಕಾಗಿ ಬಳಸಲಾಗುವ ವಿಶಿಷ್ಟ ಕ್ಯಾಕ್ಟಸ್ ಅಲ್ಗಾರಿದಮ್ ಮೂಲಕ ಇನ್-ಕ್ಯಾಬಿನ್ ಶಬ್ದವನ್ನು ಕಡಿಮೆ ಮಾಡಿ, ಆರಾಮದಾಯಕ ಡ್ರೈವ್ ನೀಡುತ್ತದೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಟಯರ್‌ಗಳನ್ನು ಪ್ರತ್ಯೇಕಿಸುವ ಮತ್ತೊಂದು ವೈಶಿಷ್ಟ್ಯವೆಂದರೆ ಅವು ಸ್ಟಯಲಿಶ್ ಸೈಡ್‌ವಾಲ್‌ ಹಾಗೂ ಚಕ್ರದ ಹೊರಮೈ ಮಾದರಿಯನ್ನು ಹೊಂದಿವೆ. ಇದುಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಆಕರ್ಷವಾದ ನೋಟವನ್ನು ನೀಡುತ್ತದೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಹೊಸ ಸರಣಿಯ ಟಯರ್‌ಗಳನ್ನು ಸಿಯೆಟ್ ಟಯರ್‌ ಸಿಎಂಒ ಅಮಿತ್ ಟೋಲಾನಿ ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆಯ ಸಮಯದಲ್ಲಿ ಮಾತನಾಡಿದ ಅವರು, ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಕಳೆದ ಐದು ವರ್ಷಗಳಲ್ಲಿ 50%ಗಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಮುಂದಿನ 3 - 4 ವರ್ಷಗಳಲ್ಲಿ 20%ನಷ್ಟು ಸಿಎಜಿಆರ್‌ನಲ್ಲಿ ಬೆಳೆಯುವ ನಿರೀಕ್ಷೆಗಳಿವೆ. ಇದನ್ನು ನಾವು ವಿಶೇಷ ಟಯರ್ ಸರಣಿಯಂತೆ ಗುರುತಿಸಿದ್ದೇವೆ. ಇದರ ಸಾಮರ್ಥ್ಯವನ್ನು ನೋಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಹೊಸ ಟಯರ್‌ಗಳು ಕಂಫರ್ಟ್ ಹಾಗೂ ಪರ್ಫಾಮೆನ್ಸ್'ನ ಅತ್ಯುತ್ತಮ ಸಂಯೋಜನೆಯನ್ನು ನೀಡುತ್ತವೆ. ಈ ಹೊಸ ಸೆಕ್ಯುರಾಡ್ರೈವ್ ಎಸ್‌ಯುವಿ ಸರಣಿಯ ಟಯರ್‌ಗಳು ಈ ವಿಭಾಗದಲ್ಲಿ ಅತ್ಯುತ್ತಮ ದರ್ಜೆಯ ಸವಾರಿ ಅನುಭವವನ್ನು ನೀಡುತ್ತವೆ ಎಂದು ನಾವು ನಂಬಿದ್ದೇವೆ ಎಂದು ಅವರು ಹೇಳಿದರು.

ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ಹೊಸ ಸರಣಿಯ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್ ಸೆಕ್ಯುರಾಡ್ರೈವ್ ಎಸ್‌ಯುವಿ ಟಯರ್‌ಗಳು ಆರಂಭದಲ್ಲಿ ಎಲ್ಲಾ ಸಿಯೆಟ್ ಅಂಗಡಿಗಳಲ್ಲಿ, ನಂತರ ದೇಶದಾದ್ಯಂತವಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ವಿತರಕರಿಗೆ ಲಭ್ಯವಾಗಲಿವೆ ಎಂದು ಕಂಪನಿ ತಿಳಿಸಿದೆ. ಸಿಯೆಟ್ ಕಂಪನಿಯು ಟಯರ್ ಜಗತ್ತಿನಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ.

Most Read Articles

Kannada
English summary
Ceat launches new Tyre range for compact SUV segment. Read in Kannada.
Story first published: Thursday, June 24, 2021, 19:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X