ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ವಿಶೇಷ ಗಮನಹರಿಸುತ್ತಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಭಾರತವನ್ನು ಜಾಗತಿಕ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ ಅಭಿಯಾನದಡಿ ವಿದೇಶಿ ವಾಹನ ಉತ್ಪಾದನಾ ಕಂಪನಿಗಳು ಭಾರತಕ್ಕೆ ಆಹ್ವಾನಿಸುತ್ತಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಸಿದ್ದವಾಗಿರುವ ಟೆಸ್ಲಾ ಕಂಪನಿಗೂ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಕೈಗೊಳ್ಳುವಂತೆ ವಿಶೇಷ ಆಹ್ವಾನ ನೀಡಲಾಗಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಅಮೆರಿಕ ದೈತ್ಯ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯಾಗಿರುವ ಟೆಸ್ಲಾ ಶೀಘ್ರದಲ್ಲೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ಕಾರು ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿದ್ದು, ಭಾರತದಲ್ಲಿ ವಾಹನ ಮರಾಟಕ್ಕಾಗಿ ಈಗಾಗಲೇ ಅಂತಿಮ ಹಂತದ ಸಿದ್ದೆತೆಯಲ್ಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳನ್ನು ವಿವಿಧ ಆಟೋ ಕಂಪನಿಳು ಭಾರತಕ್ಕೆ ಆಮದು ಮಾಡಿಕೊಳ್ಳಲು ಸಿಬಿಯು ಮತ್ತು ಸಿಕೆಡಿ ಎನ್ನುವ ಎರಡು ಮಾದರಿಯ ಆಮದು ನೀತಿಯನ್ನು ಅನುಸರಿಸುತ್ತಿದ್ದು, ಟೆಸ್ಲಾ ಕಂಪನಿಯು ಕೂಡಾ ಸದ್ಯಕ್ಕೆ ಸಿಬಿಯು(ಕಂಪ್ಲಿಟ್ಲಿ ಬಿಲ್ಟ್ ಯುನಿಟ್) ಮಾದರಿಯಾಗಿ ಮಾರಾಟಗೊಳಿಸುವ ಯೋಜನೆಯಲ್ಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಸಿಬಿಯು ನೀತಿ ಅಡಿ ಆಮದುಗೊಳ್ಳುವ ವಾಹನಗಳು ಪೂರ್ಣ ಪ್ರಮಾಣದಲ್ಲಿ ಸಿದ್ದಗೊಂಡು ದೇಶಿಯ ಮಾರುಕಟ್ಟೆಗೆ ಪ್ರವೇಶಿಸುತ್ತವೆ ಹಾಗೆಯೇ ಸಿಕೆಡಿ ಆಮದು ನೀತಿ ಅಡಿಯಲ್ಲಿ ವಿದೇಶಿಯ ಮಾರುಕಟ್ಟೆಯಲ್ಲಿನ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾಡುವ ಕಂಪನಿಗಳು ಪ್ರಮುಖ ಬಿಡಿಭಾಗಗಳನ್ನು ಆಮದುಮಾಡಿಕೊಂಡು ಇಲ್ಲಿಯೇ ಮರುಜೋಡಣೆ ಮಾಡಿ ಮಾಡಲಾಗಲಾಗುತ್ತದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಹೀಗಾಗಿ ಸಿಕೆಡಿ ಮಾದರಿಗಳಿಂತ ಸಿಬಿಯು ವಾಹನಗಳ ಮೇಲೆ ಹೆಚ್ಚಿನ ಮಟ್ಟದ ಆಮದು ಸುಂಕ ವಿಧಿಸುವುದರಿಂದ ಬೆಲೆಯಲ್ಲೂ ಕೂಡಾ ದುಬಾರಿ ಎನ್ನಸಿಲಿದ್ದು, ಬೆಲೆ ದುಬಾರಿಯಾಗುವ ಕಾರಣಕ್ಕೆ ಹಲವು ವಿದೇಶಿ ವಾಹನ ಉತ್ಪಾದನಾ ಕಂಪನಿಗಳು ಭಾರತದಲ್ಲಿ ಅಸೆಂಬ್ಲಿ ಘಟಕಗಳನ್ನು ಹೊಂದಿವೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿ ಅಸೆಂಬ್ಲಿ ಘಟಕಗಳನ್ನು ಹೊಂದುವುದರಿಂದ ಭಾರತದಲ್ಲಿ ಉತ್ಪಾದನಾ ಚಟುವಟಿಕೆಗೆ ವಿಫುಲ ಅವಕಾಶ ದೊರಕುವುದರಿಂದ ಉದ್ಯೋಗ ಅವಕಾಶಗಳ ಪ್ರಮಾಣ ಕೂಡಾ ಹೆಚ್ಚಳವಾಗಲಿದ್ದು, ಪೂರ್ಣ ಪ್ರಮಾಣದಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆಗೆ ಒತ್ತು ನೀಡಿದ್ದಲ್ಲಿ ಭಾರತದಲ್ಲೇ ವಾಹನ ಉತ್ಪದನಾ ಪ್ರಕ್ರಿಯೆ ಹೆಚ್ಚಳವಾಗುತ್ತದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಇದೇ ಕಾರಣಕ್ಕೆ ಟೆಸ್ಲಾ ಕಂಪನಿಯೊಂದಿಗೆ ಹಲವು ಸುತ್ತಿನ ವಿಡಿಯೋ ಕಾನ್ಪೆರೆನ್ಸ್‌ ಮಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಭಾರತದಲ್ಲೇ ಪೂರ್ಣಪ್ರಮಾಣ ಉತ್ಪಾದನೆ ಮಾಡುವಂತೆ ಆಹ್ವಾನಿಸಿದ್ದು, ಭಾರತದಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆಗೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಭಾರತ ಸರ್ಕಾರವು ಬದ್ದವಾಗಿದೆ ಎಂದಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಈ ಕುರಿತು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವರು ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲೇ ಹೇಗೆ ಬದಲಾವಣೆಗೆ ಕಾರಣವಾಗಲಿವೆ ಎನ್ನುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಬಿಡಿಭಾಗಗಳ ಪ್ರಮುಖ ಕೇಂದ್ರವಾಗಿರುವ ಚೀನಾದ ಮೇಲೆ ಅವಲಂಬನೆ ತಗ್ಗಿಸಿ ಸಾಧ್ಯವಾದ ಸ್ವದೇಶಿ ವಾಹನ ಬಿಡಿಭಾಗಳನ್ನೇ ಬಳಕೆಗೂ ಆಟೋ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಇನ್ನು ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲೇ ಹೊಸ ಉದ್ಯಮ ಘಟಕವನ್ನು ತೆರೆಯುವ ಬಗ್ಗೆ ಇತ್ತೀಚೆಗೆ ಮಾಹಿತಿ ಬಹಿರಂಗಪಡಿಸಿದ್ದು, ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ಒಟ್ಟು ಮೂರು ಹೊಸ ಶೋರೂಂಗಳನ್ನು ತೆರೆಯಲು ಸ್ಥಳ ಹುಡುಕಾಟ ನಡೆಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಗಾಗಿ ಟೆಸ್ಲಾ ಕಂಪನಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಮೇಲಿನ ಮೂರು ಮಾಹಾನಗರಗಳಲ್ಲಿ 20,000ದಿಂದ 30,000 ಚದರ ಅಡಿ ವಾಣಿಜ್ಯ ಜಾಗವನ್ನು ಹುಡುಕುತ್ತಿರುವ ಕಂಪನಿಯು ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡವನ್ನು ನೇಮಿಸಿದ್ದು, ಟೆಸ್ಲಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಮಾಡೆಲ್ 3 ಆವೃತ್ತಿಯನ್ನು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಟೆಸ್ಲಾ tesla
English summary
Nitin Gadkari Ask Tesla To Start Production In India Soon, All Details Here.
Story first published: Saturday, April 17, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X