ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ತನ್ನ ಮೊದಲ ಎಸ್‌ಯುವಿಯನ್ನು ಫೆಬ್ರವರಿ 1ರಂದು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಈ ಎಸ್‌ಯುವಿಯ ಮಾರಾಟವು ಮುಂಬರುವ ತಿಂಗಳುಗಳಲ್ಲಿ ಆರಂಭವಾಗಬಹುದು.

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಮಾರಾಟವನ್ನು ಆರಂಭಿಸುವ ಮೊದಲು ಕಂಪನಿಯು ಅಹಮದಾಬಾದ್ ಸೇರಿದಂತೆ ಹತ್ತು ನಗರಗಳಲ್ಲಿ ಶೋರೂಂಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಶೋರೂಂ ಅನ್ನು ಮೊದಲು ದೆಹಲಿಯಲ್ಲಿ ತೆರೆಯಲಾಗುವುದು. ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಸಿಟ್ರನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮೊದಲ ಮಾದರಿಯಾಗಲಿದೆ.

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಕಂಪನಿಯು ಮುಂಬರುವ ದಿನಗಳಲ್ಲಿ ಹ್ಯಾಚ್‌ಬ್ಯಾಕ್, ಎಂಪಿವಿ ಸೇರಿದಂತೆ ಹಲವಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಮುಂಬರುವ ಎರಡು ವರ್ಷಗಳಲ್ಲಿ ಕಂಪನಿಯು ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಇದಕ್ಕಾಗಿ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಶೋರೂಂಗಳನ್ನು ತೆರೆಯುವಲ್ಲಿ ನಿರತವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಲಾ ಮೇಸನ್ ಸಿಟ್ರನ್ ಹೆಸರಿನ ಮೊದಲ ಶೋರೂಂ ಅನ್ನು ತೆರೆದಿದೆ. ಕಳೆದ ವರ್ಷವಷ್ಟೇ ಈ ಶೋರೂಂ ಅನ್ನು ಪೈಲಟ್ ಶೋರೂಂ ಆಗಿ ತೆರೆದು, ನಿರ್ವಹಿಸಲಾಯಿತು.

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಕಂಪನಿಯು ಈಗ ಈ ಶೋರೂಂನಲ್ಲಿ ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡುತ್ತಿದೆ. ಇದಕ್ಕಾಗಿ, ಈ ಶೋರೂಂನಲ್ಲಿ 3 ಡಿ ಕಾನ್ಫಿಗರರೇಟರ್ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಂಪನಿಯ ಸಂಪೂರ್ಣ ಸರಣಿಯನ್ನು ತನ್ನದೇ ಆದ ರೀತಿಯಲ್ಲಿ ತಯಾರಿಸಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಬಿಡುಗಡೆಯ ನಂತರ ಕಾರಿನ ಮಾದರಿಗಳನ್ನು ಇಡಲಾಗುವುದು. ಜೊತೆಗೆ ಕಂಪನಿಯ 101 ವರ್ಷಗಳ ಪರಂಪರೆಯನ್ನು ವಿವರಿಸಲು ವಿಂಟೇಜ್ ಮಾದರಿಯನ್ನು ಸಹ ಪ್ರದರ್ಶಿಸಲಾಗುತ್ತದೆ. ಈ ಶೋರೂಂನಲ್ಲಿ ಪ್ರತ್ಯೇಕವಾದ ವಿತರಣಾ ಪ್ರದೇಶವನ್ನು ಸಹ ಸಿದ್ಧಪಡಿಸಲಾಗಿದೆ.

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಇದರಿಂದಾಗಿ ಗ್ರಾಹಕರು ಕಾರಿನ ವಿತರಣೆ ಪಡೆಯುವ ವೇಳೆ ವಿಭಿನ್ನ ಅನುಭವವನ್ನು ಪಡೆಯಬಹುದು. ಸಿಟ್ರನ್‌ನ ವರ್ಚುವಲ್ ಮ್ಯೂಸಿಯಂ ಅನ್ನು ವಿಶೇಷ ಟಚ್‌ಸ್ಕ್ರೀನ್ ಸಹಾಯದಿಂದ ಚಲಾಯಿಸಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಇದರ ನಂತರ ಕಂಪನಿಯು ದೆಹಲಿಯಲ್ಲಿ ಶೋರೂಂ ತೆರೆಯಲು ಮುಂದಾಗಿದೆ. ಈ ಶೋರೂಂನ ಚಿತ್ರಗಳೂ ಸಹ ಬಹಿರಂಗಗೊಂಡಿವೆ. ಅದಾದ ನಂತರ ಬೆಂಗಳೂರು, ಗುರುಗ್ರಾಮ, ಮುಂಬೈ, ಪುಣೆ, ಕೊಚ್ಚಿನ್, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಎಂಟು ಶೋರೂಂಗಳನ್ನು ತೆರೆಯಲಾಗುವುದು.

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಅಲ್ಲಿ ನಾಲ್ಕು ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಸಿಟ್ರನ್ ಕಂಪನಿಯು ಕಳೆದ ವರ್ಷವಷ್ಟೇ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಲು ನಿರ್ಧರಿಸಿತು. ಆದರೆ ಕರೋನಾ ಕಾರಣದಿಂದ ವಿಳಂಬವಾಗಿದೆ. ಕಂಪನಿಯು ಈಗ ಅದ್ದೂರಿಯಾಗಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್

ಕಂಪನಿಯು ಬೆಲೆ, ಸರ್ವೀಸ್ ವಿಷಯಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಎಸ್‌ಯುವಿಯ ಬೆಲೆ ರೂ.25 ಲಕ್ಷಗಳಾಗುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಈ ಎಸ್‌ಯುವಿಯು ಜೀಪ್ ಕಂಪಾಸ್, ಸ್ಕೋಡಾ ಕೈರೋಕ್ ಹಾಗೂ ಹ್ಯುಂಡೈ ಟಕ್ಸನ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Citroen company opening ten showrooms across India. Read in Kannada.
Story first published: Thursday, January 21, 2021, 19:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X