ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಹೊಸ ವಾಹನಗಳ ಖರೀದಿಗಾಗಿ ಗ್ರಾಹಕರು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿದ್ದು, ಮನೆಯಲ್ಲಿಯೇ ಕುಳಿತು ಶೋರೂಂಗಳಿಗೆ ಭೇಟಿ ನೀಡಿದ ಅನುಭವ ನೀಡಲು ವರ್ಚುವಲ್ ಶೋರೂಂಗಳು ವಾಹನ ಮಾರಾಟಗಾರರಿಗೆ ಸಾಕಷ್ಟು ಅನುಕೂಲಕರವಾಗಿವೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಇದರ ನಡುವೆ ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದು ಆಟೋ ಕಂಪನಿಗಳಿಗೆ ಕುಸಿದಿರುವ ವಾಹನ ಮಾರಾಟವನ್ನು ಸುಧಾರಿಸಲು ಪರಿಣಾಮಕಾರಿಯಾದ ಸುಧಾರಣಾ ಕ್ರಮವಾಗಿದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಹೌದು, ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಾಕಷ್ಟು ಪ್ರಯೋಜಕಾರಿಯಾಗಿದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ವಿವಿಧ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಸಹ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಅಗತ್ಯವಾಯಿತೋ ಆಗಿನಿಂದಲೂ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಯ್ತು.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಅದರಲ್ಲೂ ವಾಹನಗಳ ಕುರಿತಾಗಿ ಸಂಪೂರ್ಣ ಮಾಹಿತಿಗಾಗಿ ವರ್ಚುವಲ್ ಶೋರೂಂಗಳು ಕೂಡಾ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಸಿಟ್ರನ್ ಕಂಪನಿಯು ಇದೀಗ ತನ್ನ ಗ್ರಾಹಕರಿಗೆ ಹೊಸ ಉತ್ಪನ್ನಗಳ ಕುರಿತು ನಿಖರ ಮಾಹಿತಿ ತಿಳಿಯಲು 3ಡಿ ವ್ಯೂ ಹೊಂದಿರುವ ವರ್ಚುವಲ್ ಶೋರೂಂ ತೆರೆದಿದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಹೊಸ ವಾಹನ ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಭೇಟಿ ನೀಡಿದ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದ್ದು, 3ಡಿ ತಂತ್ರಜ್ಞಾನದ ಮೂಲಕ ನಿಮ್ಮ ಆಯ್ಕೆ ಮಾಡಿದ ವಾಹನದ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಹೊಸ ತಂತ್ರಜ್ಞಾನ ಸೌಲಭ್ಯದ ಮೂಲಕ ವಾಹನಗಳ ವಿವಿಧ ವೆರಿಯೆಂಟ್, ತಾಂತ್ರಿಕ ಅಂಶಗಳು, ದರ ಮಾಹಿತಿ, ಬಣ್ಣಗಳ ಆಯ್ಕೆ ಮತ್ತು ಆಕ್ಸೆಸರಿಸ್ ಸೌಲಭ್ಯಗಳ ಬಗೆಗೆ ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದ್ದು, ವಾಹನಗಳ ಮಾರಾಟವನ್ನು ಸರಳ ಮತ್ತು ಸುರಕ್ಷಿತವಾಗಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಕೋವಿಡ್ ಪರಿಣಾಮ 3ಡಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ ಸಿಟ್ರನ್

ಸಿಟ್ರನ್ ಕಂಪನಿಯು ಹೊಸ 3ಡಿ ವರ್ಚುವಲ್ ಶೋರೂಂ ಸೌಲಭ್ಯವನ್ನು ಎಸೆನ್ಟ್ರಿಕ್ ಎಂಜಿನ್ ಕಂಪನಿ ಸಹಭಾಗಿತ್ವದೊಂದಿಗೆ ಆರಂಭಿಸಿದ್ದು, ಹೊಸ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದೆ.

Most Read Articles

Kannada
English summary
Citroen India Starts 3D Car Buying Experience From Home. Read in Kannada.
Story first published: Thursday, June 24, 2021, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X