ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಸಿಟ್ರನ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯಾಗಿ ಸಿ5 ಏರ್‌ಕ್ರಾಸ್ ಐಷಾರಾಮಿ ಎಸ್‌ಯುವಿ ಮಾದರಿಯ ಬಿಡುಗಡೆಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಿದ್ದು, ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಸಿಟ್ರನ್ ಕಂಪನಿಯು ವಿವಿಧ ಮಾದರಿಯ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಸಿ5 ಏರ್‌ಕ್ರಾಸ್ ಎಸ್‌ಯುವಿ ನಂತರ ಹೊಸ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಮತ್ತೊಂದು ಮೈಕ್ರೊ ಎಸ್‌ಯುವಿ ಮಾದರಿಗಳ ಬಿಡುಗಡೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸಿಟ್ರನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟಗೊಂದಿಗೆ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಆಟೋ ಉತ್ಪಾದನೆಯಲ್ಲಿ ಸುಮಾರು 100 ವರ್ಷಗಳ ಅನುಭವವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಆಟೋ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಇದೀಗ ಸಿಟ್ರನ್ ಕಂಪನಿಯು ತನ್ನ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಹೊಸ ಕಾರುಗಳ ಉತ್ಪಾದನೆಗಾಗಿ ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ಹೊಸ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವು ಯೋಜನೆ ಹೊಂದಿರುವ ಸಿಟ್ರನ್ ಕಂಪನಿಯು ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಸಿಸಿ21 ಕೋಡ್ ನೆಮ್ ಆಧರಿಸಿರುವ ಮೈಕ್ರೊ ಎಸ್‌ಯುವಿ ಮಾದರಿಯನ್ನು ರೋಡ್ ಟೆಸ್ಟಿಂಗ್ ನಡೆಸಿರುವುದು ಬಹಿರಂಗವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಹೊಸ ಕಾರನ್ನು ಮಾರುತಿ ಇಗ್ನಿಸ್, ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಮತ್ತು ಬಿಡುಗಡೆಯಾಗಲಿರುವ ಟಾಟಾ ಹೆಬಿಎಕ್ಸ್ ಮೈಕ್ರೊ ಎಸ್‌ಯುವಿ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಭಾರತದಲ್ಲೇ ಮೊದಲ ಬಾರಿಗೆ ಫ್ಲೆಕ್ಸ್ ಫ್ಯೂಲ್ ಎಂಜಿನ್ ಆಧರಿಸಿ ಬಿಡುಗಡೆಯಾಗಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಫ್ಲೆಕ್ಸ್ ಫ್ಯೂಲ್ ಎಂಜಿನ್ ಹೊಂದಲಿರುವ ಸಿಟ್ರನ್ ಹೊಸ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಟರ್ಬೊ ಅಳವಡಿಸಲಾಗುತ್ತಿದ್ದು, ಹೊಸ ಎಂಜಿನ್ ಅನ್ನು ಪೆಟ್ರೋಲ್ ಜೊತೆಗೆ ಆಯ್ಕೆ ಮಾದರಿಯಲ್ಲಿ ಎನೆಥಾಲ್ ಮೂಲಕವೂ ಓಡಿಸಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಫ್ಲೆಕ್ಸ್ ಫ್ಯೂಲ್ ಎಂಜಿನ್ ಹೊಂದಿರುವ ಸಿಸಿ21 ಮಾದರಿಯು ಮಂಗಳೂರು ಮತ್ತು ಗೋವಾ ಹೆದ್ದಾರಿಯಲ್ಲಿ ಪರೀಕ್ಷಿಸುವಾಗ ಕಂಡುಬಂದಿದ್ದು, ಹೊಸ ಮಾದರಿಯ ಎಂಜಿನ್ ಆಯ್ಕೆಯು ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಭಾರತದಲ್ಲಿ ಬಿಡುಗಡೆಯಾಗಲಿದೆ ಬಜೆಟ್ ಬೆಲೆಯ ಸಿಟ್ರನ್ ಮೈಕ್ರೊ ಎಸ್‌ಯುವಿ

ಯುರೋಪಿನ್ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವಾರು ಕಾರು ಕಂಪನಿಗಳು ಫ್ಲೆಕ್ಸ್ ಫ್ಯೂಲ್ ಎಂಜಿನ್ ಅಳವಡಿಕೆಯಲ್ಲಿ ಯಶಸ್ವಿ ಸಾಧಿಸಿದ್ದು, ಸಿಟ್ರನ್ ಕೂಡಾ ತನ್ನ ಹೊಸ ಮೈಕ್ರೊ ಎಸ್‌ಯುವಿ ಮಾದರಿಯನ್ನು ಕಂಪ್ಯಾಕ್ಟ್ ಎಸ್‌ಯವಿ ಬಿಡುಗಡಯ ನಂತರವಷ್ಟೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

Most Read Articles

Kannada
English summary
Citroen CC21 Spied Tesing Again In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X