ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಮಾರುತಿ ಸುಜುಕಿ ಕಂಪನಿಯು ಇತ್ತೀಚಿಗೆ ತನ್ನ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಕಾರ್ ಅನ್ನು ಹಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಕಾರ್ ಅನ್ನು ಕಳೆದ 15 ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಈಗ ಮಾರುಕಟ್ಟೆಯಲ್ಲಿರುವ ಮಾದರಿಯನ್ನು 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಸ್ವಿಫ್ಟ್ ಫೇಸ್‌ಲಿಫ್ಟ್‌ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.5.73 ಲಕ್ಷಗಳಾಗಿದೆ. ಈ ಕಾರ್ ಅನ್ನು ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಟಾಪ್ ಎಂಡ್ ಮಾದರಿಯಾದ ಝಡ್‌ಎಕ್ಸ್‌ಐ ಪ್ಲಸ್ ಡ್ಯುಯಲ್ ಟೋನ್ (ಎಎಂಟಿ) ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.8.41 ಲಕ್ಷಗಳಾಗಿದೆ. ಹೊಸ ಕಾರಿನ ಬುಕ್ಕಿಂಗ್ ಆರಂಭಿಸಲಾಗಿದ್ದು, ವಿತರಣೆಯು ಶೀಘ್ರದಲ್ಲೇ ಶುರುವಾಗಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಎಂಜಿನ್

ಹೊಸ ಕಾರಿನಲ್ಲಿರುವ ಹೊಸ ಎಂಜಿನ್ ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಸ್ವಿಫ್ಟ್ ಫೇಸ್‌ಲಿಫ್ಟ್‌ ಕಾರಿನಲ್ಲಿ 1.2-ಲೀಟರ್ ಡ್ಯುಯಲ್ ಜೆಟ್ 12 ಎನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಮಾರುಕಟ್ಟೆಯಲ್ಲಿರುವ ಮಾದರಿಯು 12 ಎಂ ಎಂಜಿನ್ ಹೊಂದಿದೆ. ಈ ಎಂಜಿನ್ 82 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಹಾಗೂ 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಫೀಚರ್'ಗಳು

ಮಾರುತಿ ಸುಜುಕಿ ಕಂಪನಿಯು 2021ರ ಸ್ವಿಫ್ಟ್‌ ಕಾರಿನಲ್ಲಿ ಹಲವಾರು ಹೊಸ ಫೀಚರ್'ಗಳನ್ನು ಅಳವಡಿಸಿದೆ. ಹೊಸ ಕಾರು ಕ್ರೂಸ್ ಕಂಟ್ರೋಲ್ ಹೊಂದಿದ್ದು ಹೆದ್ದಾರಿಯಲ್ಲಿನ ಚಾಲನೆಯನ್ನು ಸುಲಭಗೊಳಿಸುತ್ತದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಹೊಸ ಎಂಐ‌ಡಿಯನ್ನು ಅನಲಾಗ್ ಡಯಲ್ ನಡುವೆ ಇಡಲಾಗಿದೆ. ಫೋಬ್ ಒಆರ್‌ವಿಎಂನೊಂದಿಗೆ ಸಿಂಕ್ ಆಗಿರುವುದರಿಂದ, ಕಾರನ್ನು ಲಾಕ್ ಮಾಡಿದಾಗ ಒಆರ್‌ವಿಎಂ ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳ್ಳುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಹೊಸ ಸ್ವಿಫ್ಟ್‌ನ ಎಎಂಟಿ ಮಾದರಿಯು ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹಾಗೂ ಎಲ್ಇಡಿ ಡಿ‌ಆರ್‌ಎಲ್'ಗಳನ್ನು ಹೊಂದಿದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಎಕ್ಸ್'ಟಿರಿಯರ್

2021ರ ಸ್ವಿಫ್ಟ್‌ನ ಹೊರಭಾಗವನ್ನು ಸಾಮಾನ್ಯ ಸ್ಥಿತಿಯಲ್ಲಿ ಅಪ್ ಡೇಟ್ ಮಾಡಲಾಗಿದೆ. ಈ ಕಾರಿನ ಮುಂಭಾಗವು ವಿಭಿನ್ನ ಆಕಾರದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಜೊತೆಗೆ ಹೊಸ ಹನಿಕೂಂಬ್ ಮೆಶ್ ಗ್ರಿಲ್ ಹಾಗೂ ಮಧ್ಯದಲ್ಲಿ ಕ್ರೋಮ್ ಸ್ಲೇಟ್ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಸೈಡ್'ನಲ್ಲಿ ಹೊಸ ಆಕಾರದ ಹೆಡ್‌ಲ್ಯಾಂಪ್ ಕ್ಲಸ್ಟರ್ ನೀಡಲಾಗಿದೆ. ಫಾಗ್ ಲ್ಯಾಂಪ್'ಗಳನ್ನು ಹೊರತುಪಡಿಸಿ, ಮುಂಭಾಗದ ಬಂಪರ್ ಹೊಸ ಲುಕ್ ಹೊಂದಿದೆ. ಇದರ ಹೊರತಾಗಿ ಬೇರೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಹೆಚ್ಚು ಮೈಲೇಜ್

2021ರ ಸ್ವಿಫ್ಟ್ ಮಾದರಿಯು ಹಳೆಯ ಮಾದರಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರುವ ಹೊಸ ಸ್ವಿಫ್ಟ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲಿಗೆ 23.20 ಕಿ.ಮೀ ಮೈಲೇಜ್ ನೀಡಿದರೆ, ಎಎಂಟಿ ಗೇರ್‌ಬಾಕ್ಸ್‌ ಹೊಂದಿರುವ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲಿಗೆ 23.76 ಕಿ.ಮೀ ಮೈಲೇಜ್ ನೀಡುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಹಳೆಯ ಸ್ವಿಫ್ಟ್ ಕಾರು ಪ್ರತಿ ಲೀಟರ್‌ಗೆ 21.21 ಕಿ.ಮೀ ಮೈಲೇಜ್ ನೀಡುತ್ತದೆ. ಮೈಲೇಜ್ ಸುಧಾರಿಸಲು ಫೇಸ್‌ಲಿಫ್ಟ್‌ ಕಾರಿನಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಅನ್ನು ಸೇರಿಸಲಾಗಿದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಹೊಸ ಬಣ್ಣಗಳು

2021ರ ಸ್ವಿಫ್ಟ್‌ ಕಾರಿಗೆ ಹೊಸ ನೋಟವನ್ನು ನೀಡಲು ಹಲವಾರು ಹೊಸ ಬಣ್ಣಗಳನ್ನು ನೀಡಲಾಗಿದೆ. ಹೊಸ ಸ್ವಿಫ್ಟ್ ಕಾರ್ ಅನ್ನು ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಮಿಡ್ ನೈಟ್ ಬ್ಲೂ, ಪರ್ಲ್ ಮೆಟಾಲಿಕ್ ಲ್ಯೂಸೆಂಟ್ ಆರೆಂಜ್ ಹಾಗೂ ಪರ್ಲ್ ಆರ್ಕ್ಟಿಕ್ ವೈಟ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಇವುಗಳಿಗೆ ಡ್ಯುಯಲ್ ಟೋನ್ ಬಣ್ಣವನ್ನು ಸೇರಿಸಲಾಗಿದೆ. ಹೊಸ ಸ್ವಿಫ್ಟ್ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮೆಟಾಲಿಕ್ ಮಿಡ್ನೈಟ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್ ರೂಫ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್ ರೂಫ್ ವಿತ್ ಸಾಲಿಡ್ ಫೈರ್ ರೆಡ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್ ರೂಫ್ ಬಣ್ಣಗಳಲ್ಲಿಯೂ ಲಭ್ಯವಿದೆ.

ಹಳೆಯ ಸ್ವಿಫ್ಟ್ ಹಾಗೂ ಫೇಸ್‌ಲಿಫ್ಟ್‌ ಸ್ವಿಫ್ಟ್ ಕಾರಿನ ನಡುವಿನ ವ್ಯತ್ಯಾಸಗಳಿವು

ಹಳೆಯ ಸ್ವಿಫ್ಟ್‌ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.5.19 ಲಕ್ಷದಿಂದ ರೂ.8.02 ಲಕ್ಷಗಳಾದರೆ, ಹೊಸ ಸ್ವಿಫ್ಟ್‌ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.5.73 ಲಕ್ಷದಿಂದ ರೂ.8.41 ಲಕ್ಷಗಳಾಗಿದೆ.

Most Read Articles

Kannada
English summary
Comparison between old Swift car and facelift Swift car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X