ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಸುಮಾರು 20 ವರ್ಷಗಳ ಹಿಂದೆ ಕಾರನ್ನು ಖರೀದಿಸುವವರು ಮುಖ್ಯವಾಗಿ ಅದರ ಮೈಲೇಜ್ ಹಾಗೂ ಎಂಜಿನ್ ಆಯ್ಕೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾರು ಖರೀದಿಸುವಾಗ ಕಾರಿನ ಇಂಟಿರಿಯರ್ ಕ್ಯಾಬಿನ್‌ನಲ್ಲಿರುವ ಫೀಚರ್'ಗಳನ್ನು ಇತರ ಕಾರುಗಳ ಫೀಚರ್'ಗಳಿಗೆ ಹೋಲಿಸಿ ನೋಡಲಾಗುತ್ತದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಅದರಲ್ಲೂ ಕೆಲವು ಗ್ರಾಹಕರು ಡ್ಯಾಶ್‌ಬೋರ್ಡ್‌ನಲ್ಲಿರುವ ಟಚ್ ಸ್ಕ್ರೀನ್ ಅನ್ನು ಹೆಚ್ಚು ಗಮನಿಸುತ್ತಾರೆ. ಅಂತಹ ಜನರಿಗೆ ಸಹಾಯ ಮಾಡುವ ಸಲುವಾಗಿ ಎರಡು ಪ್ರಮುಖ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಾದ ಮಾರುತಿ ಸುಜುಕಿ ಬಲೆನೊ ಹಾಗೂ ಹ್ಯುಂಡೈ ಐ 20 ಕಾರುಗಳಲ್ಲಿ ನೀಡಲಾಗುವ ಟಚ್ ಸ್ಕ್ರೀನ್‌ಗಳ ನಡುವಿನ ವ್ಯತ್ಯಾಸಗಳು ಹಾಗೂ ಸಾಮ್ಯತೆಗಳನ್ನು ಈ ಲೇಖನದ ಮೂಲಕ ನೀಡುತ್ತಿದ್ದೇವೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ದೊಡ್ಡ ಗಾತ್ರದ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿಸಲು ಬಯಸಿದರೆ, ಈ ಎರಡು ಕಾರುಗಳಲ್ಲಿ ಯಾವುದಾದರೂ ಒಂದು ಕಾರ್ ಅನ್ನು ಆಯ್ಕೆ ಮಾಡಬಹುದು. ಬಲೆನೊ ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಕಳೆದ ಜುಲೈ ತಿಂಗಳಿನಲ್ಲಿ ಬಲೆನೊ ಕಾರಿನ 14,729 ಯುನಿಟ್'ಗಳನ್ನು ಮಾರಾಟ ಮಾಡಲಾಗಿದೆ. ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಐ 20 ಕಾರ್ ಅನ್ನು 2020 ರ ಕೊನೆಯಲ್ಲಿ ಬಿಡುಗಡೆಗೊಳಿಸಿತು.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಬಿಡುಗಡೆಯಾದಾಗಿನಿಂದ ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಸಹ ಗಣನೀಯ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಹೊಸ ತಲೆಮಾರಿನ ಹ್ಯುಂಡೈ ಐ 20 ಕಾರಿನಲ್ಲಿ ದೊಡ್ಡ ಗಾತ್ರದ 10.2 ಇಂಚಿನ ಟಚ್‌ಸ್ಕ್ರೀನ್ ನೀಡಲಾಗುತ್ತದೆ. ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿ ಕೇವಲ 7 ಇಂಚಿನ ಟಚ್‌ಸ್ಕ್ರೀನ್ ನೀಡಲಾಗುತ್ತದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಈ ಎರಡೂ ಸ್ಕ್ರೀನ್'ಗಳನ್ನು ಟಚ್ ಮೂಲಕ ನಿಯಂತ್ರಿಸಬೇಕು. ಇವುಗಳಲ್ಲಿ ಯಾವುದೇ ಫಿಸಿಕಲ್ ಬಟನ್'ಗಳಿಲ್ಲ. ಇನ್ಫೋಟೇನ್‌ಮೆಂಟ್ ಸಿಸ್ಟಂನಲ್ಲಿ ವಾಲ್ಯೂಮ್ ಕಡಿಮೆ ಮಾಡಲು ಹಾಗೂ ಹೆಚ್ಚಿಸಲು ಎರಡು ಟಚ್ ಕಂಟ್ರೋಲ್'ಗಳನ್ನು ನೀಡಲಾಗಿದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಬಲೆನೊ ಕಾರಿನಲ್ಲಿ ವಾಲ್ಯೂಮ್ ಅನ್ನು ಸ್ಲೈಡರ್ ಅಥವಾ +/- ಟಚ್ ಪಾಯಿಂಟ್‌ಗಳೊಂದಿಗೆ ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದರೆ ಐ 20 ಕಾರು ಸ್ಲೈಡರ್ ಫೀಚರ್ ಆನ್ನು ಹೊಂದಿಲ್ಲ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಈ ಕಾರಿನಲ್ಲಿ + ಹಾಗೂ - ಬಟನ್'ಗಳನ್ನು ಸ್ಪರ್ಶಿಸುವ ಮೂಲಕ ವಾಲ್ಯೂಮ್ ಲೆವೆಲ್ ಅನ್ನು ನಿಯಂತ್ರಿಸಬಹುದು. ಆದರೆ ಐ 20 ಕಾರು ಬೋಸ್ ಬ್ರಾಂಡ್ ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ. ಈ ಕಾರಿನ ಟಾಪ್ ಎಂಡ್ ಮಾದರಿಗಳಲ್ಲಿ 7 ಸ್ಪೀಕರ್‌ಗಳನ್ನು ನೀಡಲಾಗಿದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

2015 ರಲ್ಲಿ ಬಿಡುಗಡೆಗೊಂಡ ಬಲೆನೊ ಕಾರಿನ ಟಾಪ್ ಎಂಡ್ ಮಾದರಿಗಳಲ್ಲಿ ಕೇವಲ 6-ಸ್ಪೀಕರ್‌ಗಳನ್ನು ಮಾತ್ರ ಅಳವಡಿಸಲಾಗಿದೆ. ಮಾರುತಿ ಬಲೆನೊ ಯುಎಸ್‌ಬಿ ಪೋರ್ಟ್ ಹಾಗೂ 12 ವೋಲ್ಟ್ ಸಾಕೆಟ್'ಗಳನ್ನು ಹೊಂದಿದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಆದರೆ ಐ 20 ಮಾದರಿಯು ಎರಡು ಯುಎಸ್‌ಬಿ ಪೋರ್ಟ್‌ ಹಾಗೂ ಎರಡು 12 ವೋಲ್ಟ್‌ ಸಾಕೆಟ್‌ಗಳನ್ನು ಹೊಂದಿದೆ. ಇವುಗಳ ಜೊತೆಗೆ ಐ 20 ಕಾರು ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಹೊಂದಿದೆ. ಬಲೆನೊ ಕಾರು ವೈರ್‌ಲೆಸ್ ಚಾರ್ಜರ್‌ಗಳನ್ನು ಹೆಚ್ಚುವರಿ ಆಕ್ಸೆಸರಿಸ್ ಆಗಿ ಹೊಂದಿದೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಈ ಫೀಚರ್ ಪಡೆಯಲು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಈಗ ಈ ಫೀಚರ್ ಅನ್ನು ಬಲೆನೊ ಕಾರಿನಲ್ಲಿ ಹೆಚ್ಚುವರಿ ಆಕ್ಸೆಸರಿಸ್ ಆಗಿ ನೀಡಲಾಗುವುದಿಲ್ಲ. ಈ ಎರಡೂ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳು ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿವೆ.

ಬಲೆನೊ ಹಾಗೂ ಐ 20 ಕಾರುಗಳಲ್ಲಿರುವ ಟಚ್‌ಸ್ಕ್ರೀನ್‌ಗಳ ನಡುವಿನ ಸಾಮ್ಯತೆಗಳಿವು

ಬಲೆನೊ ತನ್ನ ಟಾಪ್ ಎಂಡ್ ಮಾದರಿಗಳಲ್ಲಿ ಇಂತಹ ಫೀಚರ್ ಅನ್ನು ಮೊದಲು ಪಡೆದು ಕೊಂಡಿತ್ತು. ಐ 20 ಮಾದರಿಯು ಮೊಬೈಲ್ ಫೋನ್ ಅನ್ನು ವೈರ್‌ಲೆಸ್ ಆಗಿ ಇನ್ಫೋಟೇನ್ಮೆಂಟ್ ಸಿಸ್ಟಂಗೆ ಕನೆಕ್ಟ್ ಮಾಡುವ ಸೌಲಭ್ಯವನ್ನು ಹೊಂದಿದೆ. ಆದರೆ ಈ ವೈರ್‌ಲೆಸ್ ಕನೆಕ್ಟಿವಿಟಿ ಫೀಚರ್ ಅನ್ನು ಐ 20 ಕಾರಿನ ಮಿಡ್ ರೇಂಜ್ ಸ್ಪೋರ್ಟ್ಸ್ ಮಾದರಿಗಳಲ್ಲಿ ಮಾತ್ರ ನೀಡಲಾಗುತ್ತದೆ.

Most Read Articles

Kannada
English summary
Comparison between touchscreen in maruti suzuki baleno and hyundai i20 details
Story first published: Wednesday, August 4, 2021, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X