Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಭಾರತದ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರಾದ ಅದಾರ್ ಪೂನಾವಾಲಾ ಅವರು ಕಾರುಗಳ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದಾರೆ. ಪೂನಾವಾಲಾ ಕುಟುಂಬದ ಎಲ್ಲಾ ಸದಸ್ಯರು ಟಾಪ್ ಎಂಡ್ ಕಾರುಗಳನ್ನು ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದಾರೆ. ಕಾಲ ಕಾಲಕ್ಕೆ ಈ ಕುಟುಂಬದವರು ಹೊಸ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಪೂನಾವಾಲಾ ಕುಟುಂಬದ ಗ್ಯಾರೇಜ್‌ಗೆ ಬಹು ಕೋಟಿ ಬೆಲೆಯ ದುಬಾರಿ Rolls Royce Phantom Series VIII ಕಾರು ಹೊಸದಾಗಿ ಸೇರ್ಪಡೆಯಾಗಿದೆ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಹೊಸ Rolls Royce Phantom Series VIII ಕಾರು ಸ್ಟ್ಯಾಂಡರ್ಡ್ ಹಾಗೂ ಎಕ್ಸ್ ಟೆಂಟೆಡ್ ವ್ಹೀಲ್‌ಬೇಸ್ ಆವೃತ್ತಿಗಳಲ್ಲಿ ಲಭ್ಯವಿದೆ. ಆದರೆ ಪೂನಾವಾಲಾ ರವರು ಈ ಕಾರಿನ ಯಾವ ಮಾದರಿಯನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಹೊಸ Rolls Royce Phantom Series VIII ಕಾರ್ ಅನ್ನು ಖರೀದಿಸಿರುವ ಅದಾರ್ ಪೂನಾವಾಲಾ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಸಿಇಒ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತದಲ್ಲಿ ಕೋವಿಶೀಲ್ಡ್ ಕೋವಿಡ್ 19 ಲಸಿಕೆಯನ್ನು ಉತ್ಪಾದಿಸುತ್ತದೆ. ಪುಣೆ ಮೂಲದ ದೈತ್ಯ ಲಸಿಕೆ ತಯಾರಕ ಕಂಪನಿಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ತನ್ನ ಉತ್ಪಾದನಾ ಘಟಕದಲ್ಲಿ ಇತರ ಲಸಿಕೆಗಳನ್ನು ಸಹ ತಯಾರಿಸುತ್ತದೆ. ಅದಾರ್ ಪೂನಾವಾಲಾ ರವರು ಇತ್ತೀಚಿಗೆ ಮುಂಬೈನಲ್ಲಿ ಸಂಚರಿಸುವ ವೇಳೆಯಲ್ಲಿ ಹೊಸ Rolls Royce Phantom Series VIII ಕಾರಿನ ಜೊತೆಯಲ್ಲಿ Bentley Bentayga ಕಾರು ಅವರ ಬೆಂಗಾವಲು ಪಡೆಯಲ್ಲಿ ಕಾಣಿಸಿಕೊಂಡಿತ್ತು.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

Rolls Royce Phantom Series VIII, ಅದಾರ್ ಪೂನಾವಾಲಾ ರವರ ಎರಡನೇ Rolls Royce ಕಾರು. ಅವರು 2019 ರಲ್ಲಿ ತಮ್ಮ ಮೊದಲ Rolls Royce ಕಾರ್ ಅನ್ನು ಖರೀದಿಸಿದರು. ಆ ಕಾರು ಅವರು ವಾಸಿಸುವ ಪುಣೆ ಮನೆಯಲ್ಲಿದೆ. ಈಗ ಖರೀದಿಸಿರುವ Rolls Royce Phantom Series VIII ಕಾರ್ ಅನ್ನು ಅವರ ಬಳಕೆಗಾಗಿ ಮುಂಬೈನಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಅವರು ಭಾರತದ ವಾಣಿಜ್ಯ ರಾಜಧಾನಿಗೆ ಆಗಾಗ್ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಹೊಸ ಕಾರ್ ಅನ್ನು ಮುಂಬೈನಲ್ಲಿರಿಸಲಾಗಿದೆ. ಪೂನಾವಾಲಾ ರವರ ಕುಟುಂಬವು ಎರಡು ಹಳೆ ತಲೆಮಾರಿನ Phantom VII ಸೆಡಾನ್‌ ಕಾರುಗಳನ್ನು ಸಹ ಹೊಂದಿದೆ. ಈ ಕಾರುಗಳನ್ನು ಯೋಹಾನ್ ಪೂನಾವಾಲಾ ಬಳಸುತ್ತಾರೆ. Rolls Royce Phantom Standard ಆವೃತ್ತಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 10 ಕೋಟಿಗಳಾಗಿದೆ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಈ ಬೆಲೆಯಲ್ಲಿ ಗ್ರಾಹಕೀಕರಣ ಆಯ್ಕೆ ಹಾಗೂ ರಸ್ತೆ ತೆರಿಗೆಗಳು ಸೇರಿಲ್ಲ. ಇವುಗಳನ್ನು ಸೇರಿಸಿದರೆ ಈ ಕಾರಿನ ಅಂತಿಮ ಬೆಲೆ ಸುಮಾರು ರೂ. 12 ಕೋಟಿಗಳಾಗುತ್ತದೆ. ಈ ಕಾರು ಹೊಸ ಅಲ್ಯೂಮಿನಿಯಂ ಸ್ಪೇಸ್‌ ಫ್ರೇಮ್ ಅನ್ನು ಆಧರಿಸಿದೆ. ರೋಲ್ಸ್ ರಾಯ್ಸ್ ಕಂಪನಿಯು ಈ ಕಾರ್ ಅನ್ನು ಐಷಾರಾಮಿ ವಾಸ್ತುಶಿಲ್ಪವೆಂದು ಕರೆಯುತ್ತದೆ. ಈ ಮಾದರಿಯು ಹಳೆಯ ಮಾದರಿಯಲ್ಲಿರುವ ಫ್ರೇಮ್‌ಗಿಂತ 30% ನಷ್ಟು ಹಗುರವಾಗಿದೆ.

ಈ ಹೊಸ ಕಾರು ಹಳೆಯ ಮಾದರಿಗಿಂತ ಹೆಚ್ಚು ಗಾತ್ರವನ್ನು ಸಹ ಹೊಂದಿದೆ. Rolls Royce Phantom Series VIII ಕಾರಿನಲ್ಲಿ ಸಿಗ್ನೇಚರ್ 24 ಸ್ಲ್ಯಾಟ್ ಗ್ರಿಲ್, ಮುಂಭಾಗದಲ್ಲಿ ಎರಡು ನಯವಾದ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಪ್ರೊಜೆಕ್ಟರ್ ಲ್ಯಾಂಪ್ ಯುನಿಟ್ ಗಳಾಗಿವೆ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಇವು ಈ ಕಾರಿಗೆ ವಿಶಿಷ್ಟ ಗುರುತನ್ನು ನೀಡುತ್ತವೆ. ಕಾರಿನ ಹಿಂಭಾಗವೂ ಸಹ ಹೊಸ ಆಕಾರವನ್ನು ಹೊಂದಿದ್ದು, ಮೊದಲಿಗಿಂತ ಹೆಚ್ಚು ತೀಕ್ಷ್ಣವಾಗಿದೆ. ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Rolls Royce ಕಂಪನಿಯು ಸಹ ಎಲೆಕ್ಟ್ರಿಕ್ ಕಾರ್ ಅನ್ನು ಉತ್ಪಾದಿಸಲು ಮುಂದಾಗಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಐಷಾರಾಮಿ ಕಾರ್ ಅನ್ನು ಪ್ರಸ್ತುತಪಡಿಸಿದೆ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಈ ಐಷಾರಾಮಿ ಎಲೆಕ್ಟ್ರಿಕ್ ಕಾರು ಅತಿ ಶ್ರೀಮಂತ ಗ್ರಾಹಕರಿಗೆ ಮಾತ್ರ ಎಂಬುದು ಗಮನಾರ್ಹ. ಗಮನಿಸಬೇಕಾದ ಸಂಗತಿಯೆಂದರೆ, 2011 ರಲ್ಲಿಯೇ Rolls Royce ಕಂಪನಿಯು ತನ್ನ Phantom ಕಾರಿನ ಕಾನ್ಸೆಪ್ಟ್ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶಿಸಿತ್ತು.. 2016 ರಲ್ಲಿ Rolls Royce ಕಂಪನಿಯು ವಿಷನ್ ನೆಕ್ಸ್ಟ್ 100 ಎಂಬ ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಿತ್ತು. ಈ ಕಾರು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿದ್ದು, ಅಟಾನಾಮಸ್ ಫೀಚರ್ ಗಳನ್ನು ನೀಡಲಾಗಿದೆ.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಈ ವರ್ಷದ ಆರಂಭದಲ್ಲಿ Rolls Royce ಕಂಪನಿಯು ಸೈಲೆಂಟ್ ಶ್ಯಾಡೋ ಎಂಬ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿತ್ತು. ಕಂಪನಿಯು ಮೇ ತಿಂಗಳಲ್ಲಿ ಜರ್ಮನಿಯಲ್ಲಿರುವ ಪೇಟೆಂಟ್ ಕಚೇರಿಗೆ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿತ್ತು. ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ Rolls Royce ತನ್ನ ಎಲೆಕ್ಟ್ರಿಕ್ ಕಾರಿಗೆ ಸೈಲೆಂಟ್ ಶ್ಯಾಡೋ ಎಂಬ ಹೆಸರನ್ನಿಟ್ಟಿರುವುದು ವಿಶೇಷ.ವರದಿಗಳ ಪ್ರಕಾರ Rolls Royce ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಿನಲ್ಲಿ 100 ಕಿ.ವ್ಯಾ ಬ್ಯಾಟರಿ ಪ್ಯಾಕ್ ಬಳಸಲಾಗುವುದು.

Rolls Royce Phantom ಕಾರು ಖರೀದಿಸಿದ ಕೋವಿಶೀಲ್ಡ್ ಕಂಪನಿ ಸಿಇಒ

ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 500 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. Rolls Royce ಕಂಪನಿಯು 2040ರಿಂದ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದಿಸುವುದಾಗಿ ಈಗಾಗಲೇ ಘೋಷಿಸಿದೆ. ನಂತರ ಕಂಪನಿಯು ಪೆಟ್ರೋಲ್, ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. Rolls Royce ಕಂಪನಿಯು ಶಕ್ತಿಶಾಲಿಯಾದ ಹಾಗೂ ವೇಗದ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದೆ. ಈಗ ಕಂಪನಿಯು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳತ್ತ ಸಾಗುತ್ತಿದೆ. ಇನ್ನು ಮುಂದೆ ರೋಲ್ಸ್ ರಾಯ್ಸ್ ಕಾರು ಗ್ರಾಹಕರಿಗೆ ಎಂಜಿನ್‌ ಶಬ್ದವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

Most Read Articles

Kannada
English summary
Covid vaccine company ceo buys new rolls royce phantom car details
Story first published: Tuesday, October 26, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X