Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 1 hr ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 2 hrs ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
BMW 6 Series GT ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ
ಖ್ಯಾತ ಕ್ರಿಕೆಟಿಗ ಪೃಥ್ವಿ ಶಾ ಇತ್ತೀಚೆಗೆ ಹೊಸ ಕಾರ್ ಅನ್ನು ಖರೀದಿಸಿದ್ದಾರೆ. ಈ ಬಗ್ಗೆ ಅವರು ತಮ್ಮ Instagram ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಐಪಿಎಲ್ ಮುಗಿದ ನಂತರ ಪೃಥ್ವಿ ಶಾ ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ. ಇದಾದ ನಂತರ ಅವರು ಹೊಸ ಕಾರಿನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ತಮ್ಮ ಹೊಸ ಕಾರಿನ ಮುಂದೆ ಅವರು ತಮ್ಮ ತಂದೆಯ ಜೊತೆ ನಿಂತು ಪೋಸ್ ನೀಡಿದ್ದಾರೆ.
ಪೃಥ್ವಿ ಶಾ ರವರು ಹೊಸ BMW 6 Series Gran Tourismo ಕಾರು ಖರೀದಿಸಿದ್ದಾರೆ. ಐಪಿಎಲ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಪೃಥ್ವಿ ಶಾ ಈ ಬಾರಿ 15 ಪಂದ್ಯಗಳಲ್ಲಿ 479 ರನ್ ಗಳಿಸಿದ್ದಾರೆ. 21 ವರ್ಷದ ಪೃಥ್ವಿ ಶಾ, ರೂ. 68.50 ಲಕ್ಷ ನೀಡಿ ಈ ಐಷಾರಾಮಿ ಕಾರು ಖರೀದಿಸಿದ್ದಾರೆ. ಅವರು ಖರೀದಿಸಿರುವ ಕಾರು ಬಿಳಿ ಬಣ್ಣದಲ್ಲಿದ್ದು ಆಕರ್ಷಕವಾಗಿ ಕಾಣುತ್ತದೆ.
ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ನಂತರ, ಕೆಳಗಿನಿಂದ ಆರಂಭಿಸಿ ಈಗ ಇಲ್ಲಿಗೆ ತಲುಪಿರುವೆ ಎಂದು ಪೋಸ್ಟ್ ಮಾಡಿದ್ದಾರೆ. ಹೊಸ ಕಾರು ಖರೀದಿಸಿರುವ ಅವರನ್ನು BMW India ಕಂಪನಿಯು ಸಹ ಅಭಿನಂದಿಸಿದೆ. ಪೃಥ್ವಿ ಶಾ ರವರ ಫೋಟೋಗಳನ್ನು ಶೇರ್ ಮಾಡಿರುವ ಕಂಪನಿಯು, ಬಿಎಂಡಬ್ಲ್ಯು ಕುಟುಂಬಕ್ಕೆ ಸ್ವಾಗತ ಎಂದು ಹೇಳಿದೆ. ಹಲವು ಕ್ರಿಕೆಟಿಗರು ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ್ದಾರೆ.
BMW ಕಂಪನಿಯ ಬ್ರಾಂಡ್ ಅಂಬಾಸಿಡರ್ ಸಚಿನ್ ತೆಂಡೂಲ್ಕರ್ ಎಂಬುದು ವಿಶೇಷ. ಪೃಥ್ವಿ ಶಾ ರವರು ಖರೀದಿಸಿರುವ ಹೊಸ ಕಾರಿನ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು 6 ಸೀರಿಸ್ ಕಾರ್ ಅನ್ನು ಒಂದು ಪೆಟ್ರೋಲ್ ಹಾಗೂ ಎರಡು ಡೀಸೆಲ್ ಸೇರಿದಂತೆ ಒಟ್ಟು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಕಾರು ಹಲವಾರು ಫೀಚರ್ ಗಳನ್ನು ಹೊಂದಿದೆ.
ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಕಾರು ರಿಡಿಸೈನ್ ಮಾಡಲಾದ ಬಂಪರ್, ಹೊಸ ಎಲ್ ಶೇಪಿನ ಡ್ಯುಯಲ್ ಡಿಆರ್ಎಲ್, ಎಲ್ಇಡಿ ಹೆಡ್ಲ್ಯಾಂಪ್ ಹಾಗೂ ವಿಶಾಲವಾದ ಕಿಡ್ನಿ ಗ್ರಿಲ್ ಗಳನ್ನು ಹೊಂದಿದೆ. ಈ ಕಾರಿನ ಹಿಂಭಾಗದಲ್ಲಿ ಡ್ಯುಯಲ್ ಕಲರ್ ಬಂಪರ್ ಹಾಗೂ ಹೊಸ 3 ಡಿ ಎಲ್ಇಡಿ ಟೇಲ್ ಲ್ಯಾಂಪ್ ಗಳನ್ನು ನೀಡಲಾಗಿದೆ.
ಈ ಕಾರಿನಲ್ಲಿರುವ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಹೊಸ BMW 6 Series ಕಾರಿನಲ್ಲಿ 12.3 ಇಂಚಿನ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ. ಇದರ ಜೊತೆಗೆ 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್ಲೆಸ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಬಿಎಂಡಬ್ಲ್ಯು ಲೈವ್ ಕಾಕ್ಪಿಟ್, ಬಿಎಂಡಬ್ಲ್ಯು ವರ್ಚುವಲ್ ಅಸಿಸ್ಟೆಂಟ್ ಗಳನ್ನು ನೀಡಲಾಗಿದೆ.
ಇವುಗಳ ಜೊತೆಗೆ ವೈರ್ಲೆಸ್ ಚಾರ್ಜಿಂಗ್, ರೇರ್ ಸೀಟ್ ಎಂಟರ್ಟೇನ್ಮೆಂಟ್ ಸ್ಕ್ರೀನ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಆಟೋಮ್ಯಾಟಿಕ್ ಪಾರ್ಕಿಂಗ್, ಫೋರ್ ಝೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ರೇರ್ ಸೀಟ್, ಪನೋರಾಮಿಕ್ ಸನ್ ರೂಫ್, ಏರ್ ಸಸ್ಪೆಂಷನ್ ಹಾಗೂ ಸಾಫ್ಟ್ ಕ್ಲೋಸ್ ಫಂಕ್ಷನ್ ಗಳನ್ನು ನೀಡಲಾಗಿದೆ. ಬಿಎಂಡಬ್ಲ್ಯು 6 ಸೀರಿಸ್ ಗ್ರ್ಯಾನ್ ಟುರಿಸ್ಮೊ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
ಇವುಗಳಲ್ಲಿ 630 ಐ 2.0 ಲೀಟರ್ ಎಂಜಿನ್ ಸಹ ಸೇರಿದೆ. ಈ ಎಂಜಿನ್ 258 ಬಿಹೆಚ್ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6.5 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಇನ್ನು 620 ಡಿ 2.0 ಲೀಟರ್ ಎಂಜಿನ್ 190 ಬಿಹೆಚ್ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ 7.9 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. 630 ಡಿ 3.0 ಲೀಟರ್ ಎಂಜಿನ್ 265 ಬಿಹೆಚ್ಪಿ ಪವರ್ ಹಾಗೂ 620 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.
BMW ಕಂಪನಿಯು BMW 6 Series Gran Tourismo ಕಾರ್ ಅನ್ನು ರೂ. 69,999 ಗಳ ಮಾಸಿಕ ಇಎಂಐನಲ್ಲಿ ಲಭ್ಯವಾಗುವಂತೆ ಮಾಡಿದೆ, ಹಾಗೆಯೇ ಕಂಪನಿಯು ಈ ಕಾರಿನ ಮೇಲೆ 3 ರಿಂದ 10 ವರ್ಷಗಳವರೆಗಿನ ಸರ್ವೀಸ್ ಪ್ಯಾಕೇಜ್ ಅನ್ನು ಒದಗಿಸುತ್ತದೆ. BMW 6 Series ಕಾರು ದೇಶಿಯ ಮಾರುಕಟ್ಟೆಯಲ್ಲಿ Mercedes Benz E Class LWB ಕಾರಿಗೆ ಪೈಪೋಟಿ ನೀಡುತ್ತದೆ. ಈ ಕಾರು ಐಷಾರಾಮಿತನಕ್ಕೆ ಹಾಗೂ ವೇಗಕ್ಕೆ ಹೆಸರುವಾಸಿಯಾಗಿದೆ.
BMW 6 Series Gran Tourismo ಕಾರ್ ಅನ್ನು ಖರೀದಿಸಿದ್ದಕ್ಕಾಗಿ ನಾವು ಪೃಥ್ವಿ ಶಾ ರವರಿಗೆ ಅಭಿನಂದನೆಗಳು. ಈ ಕಾರು ಅತ್ಯಂತ ಐಷಾರಾಮಿ ಎಂದು ಹೆಸರುವಾಸಿಯಾಗಿದೆ. ಈ ಕಾರ್ ಅನ್ನು ಯುವ ಸೆಲೆಬ್ರಿಟಿಗಳು ಹೆಚ್ಚು ಖರೀದಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹಲವು ಸೆಲೆಬ್ರಿಟಿಗಳು ಈ ಐಷಾರಾಮಿ ಕಾರ್ ಅನ್ನು ಖರೀದಿಸುವ ನಿರೀಕ್ಷೆಗಳಿವೆ.