2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ಯುರೋಪ್‌ನ ಬಜೆಟ್ ಬ್ರ್ಯಾಂಡ್ ಡೇಸಿಯಾ 2022ರ ಡಸ್ಟರ್ ಫೇಸ್‌ಲಿಫ್ಟ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಈ 2022ರ ಡೇಸಿಯಾ ಡಸ್ಟರ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

2022ರ ಡೇಸಿಯಾ ಡಸ್ಟರ್ ಎಸ್‍ಯುವಿಯು ಪ್ರಸ್ತುತ ಜಾಗತಿಕವಾಗಿ ಶೀಘ್ರದಲ್ಲೇ ಮಿಡ್-ಲೈಫ್ ಫೇಸ್‌ಲಿಫ್ಟ್ ಪಡೆಯಲು ಸಜ್ಜಾಗಿದೆ. ಈ ಮಾದರಿಯು ಜೂನ್ 22, ರಂದು ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ವಾರದ ಆರಂಭದಲ್ಲಿ ಬಹಿರಂಗಗೊಂಡ ಹೊಸ ಡೇಸಿಯಾ ಲೋಗೊವನ್ನು ಪ್ರದರ್ಶಿಸುವ ಬ್ರ್ಯಾಂಡ್‌ನಿಂದ ಇದು ಮೊದಲ ಕಾರುಗಳಲ್ಲಿ ಒಂದಾಗಿದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಎರಡನೇ ತಲೆಮಾರಿನ ಡಸ್ಟರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿರುವುದು ಭಾರತ-ಸ್ಪೆಕ್ ಮಾದರಿಗಿಂತ ಭಿನ್ನವಾಗಿದೆ, ಭಾರತದಲ್ಲಿ ಮಾರಾಟವಾಗುವುದು ಮೊದಲ ತಲೆಮಾರಿನ ಮಾದರಿಯಾಗಿದೆ. 2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್‌ನಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಟೀಸರ್ ವೀಡಿಯೊ "ವೈ" ಗ್ರಾಫಿಕ್ಸ್ ಸಹಿಯೊಂದಿಗೆ ಪರಿಷ್ಕೃತ ಟೈಲ್‌ಲೈಟ್‌ಗಳನ್ನು ಪ್ರದರ್ಶಿಸಿದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಡೇಸಿಯಾ ಲೋಗನ್ ಮತ್ತು ಸ್ಯಾಂಡೆರೋ ಮಾದರಿಗಳಲ್ಲಿ ಕಂಡುಬರುವಂತೆ ಇರುತ್ತದೆ. ಹೊಸ ಮಾದರಿಯು ವೈ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಸಂಯೋಜಿಸುವ ಹೆಡ್‌ಲ್ಯಾಂಪ್‌ಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಎರಡನೇ-ಜನರೇಷನ್ ಡಸ್ಟರ್ ಫೇಸ್‌ಲಿಫ್ಟ್ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಇತರ ಡೇಸಿಯಾ ಮಾದರಿಗಳೊಂದಿಗೆ ಹಂಚಿಕೊಳ್ಳಬಹುದು. ಇದು ಬ್ಲೂಟೂತ್ ಜೊತೆಗೆ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗೆ ಬರಲಿದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಬಣ್ಣ ಆಯ್ಕೆಗಳ ರೂಪದಲ್ಲಿ ನೀವು ಕ್ಯಾಬಿನ್‌ಗೆ ಇನ್ನೂ ಕೆಲವು ಟ್ವೀಕ್‌ಗಳನ್ನು ನಿರೀಕ್ಷಿಸಬಹುದು. ಪ್ರಸ್ತುತ ಮಾದರಿಯ ಎಂಜಿನ್ ಆಯ್ಕೆಗಳು ಮುಂದುವರಿಯುವ ಸಾಧ್ಯತೆಯಿದೆ. ಯುರೋಪ್ ನಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಎಂಜಿನ್ 148 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 99 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇನ್ನು 1.0-ಲೀಟರ್ ಬೈ-ಫ್ಯೂಯಲ್ ಎಂಜಿನ್ ನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಎಲ್ಲಾ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಜೊತೆಗೆ 4x4 ಸಿಸ್ಟಂ ಅನ್ನು ಕೂಡ ಜೋಡಿಸಲಾಗಿದೆ.

2022ರ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಪ್ರಸ್ತುತ ಅಭಿವೃದ್ಧಿಯಲ್ಲಿರುವ ಮೂರನೇ ತಲೆಮಾರಿನ ಡಸ್ಟರ್ ಅನ್ನು ನಿರ್ಮಿಸಲು ರೆನಾಲ್ಟ್ ಮತ್ತು ಡೇಸಿಯಾ ಸಹ ಕೆಲಸ ಮಾಡುತ್ತಿವೆ. ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ 2023 ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಬಿಗ್‌ಸ್ಟರ್ ಕಾನ್ಸೆಪ್ಟ್ ನಿಂದ ಈ ಮಾದರಿಯು ಹೆಚ್ಚು ಪ್ರೇರಿತವಾಗಿರಲಿದೆ.

Most Read Articles

Kannada
English summary
Dacia Duster Facelift Teased For International Markets. Read In Kannada.
Story first published: Saturday, June 19, 2021, 19:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X