ಡಕಾರ್ ರ‍್ಯಾಲಿ 2022: ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಜಾಗತಿಕ ಮಟ್ಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಡಕಾರ್ ‌ರ‍್ಯಾಲಿಯ 44ನೇ ಆವೃತ್ತಿಯನ್ನು 2022ರ ಜನವರಿ 2ರಿಂದ 14ರ ತನಕ ಸೌದಿ ಅರೇಬಿಯಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಹೊಸ ಆವೃತ್ತಿಯಲ್ಲಿ ಈ ಬಾರಿ ಟಿ1-ಇ ವಿಭಾಗದಲ್ಲಿ ಆಡಿ ಕಂಪನಿಯು ಸಹ ತನ್ನ ವಿನೂತನ ಆರ್‌ಎಸ್ ಕ್ಯೂ ಇ-ಟ್ರಾನ್ ಮಾದರಿಯೊಂದಿಗೆ ಭಾಗಿಯಾಗಲು ನಿರ್ಧರಸಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಜಗತ್ತಿನ ಅತಿ ಅಪಾಯಕಾರಿ ಹಾಗೂ ಅಷ್ಟೇ ರೋಚಕವಾಗಿರುವ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳಲ್ಲಿ ಡಕಾರ್ ರ‍್ಯಾಲಿ ಅಗ್ರಸ್ಥಾನದಲ್ಲಿದ್ದು, 1978ರಿಂದ ಇದುವರೆಗೆ ಸುಮಾರು 43 ಆವೃತ್ತಿಗಳು ಪೂರ್ಣಗೊಂಡಿವೆ. 2022ರ ಜನವರಿಯಲ್ಲಿ 44ನೇ ಆವೃತ್ತಿಯು ಆರಂಭವಾಗಲಿದ್ದು, ಈ ಬಾರಿಯ ಮೋಟಾರ್‌ಸ್ಪೋಟ್ಸ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಭವಿಷ್ಯ ವಾಹನಗಳಾದ ಎಲೆಕ್ಟ್ರಿಕ್ ಮಾದರಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಡಕಾರ್ ರ‍್ಯಾಲಿ ಆಯೋಜಕರು ಈ ಬಾರಿ ಟಿ1-ಇ ವಿಭಾಗವನ್ನು ಪರಿಚಯಿಸಿದ್ದು, ಹೊಸ ವಿಭಾಗದಲ್ಲಿ ಸ್ಪರ್ಧಿಸಲು ಆಡಿ ಕಂಪನಿಯು ರೇಸಿಂಗ್ ತಂತ್ರಜ್ಞಾನ ಹೊಂದಿರುವ ಆರ್‌ಎಸ್ ಕ್ಯೂ ಇ-ಟ್ರಾನ್ ಅನಾವರಣಗೊಳಿಸಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ರೇಸಿಂಗ್ ಉದ್ದೇಶಕ್ಕಾಗಿ ವಿಶೇಷವಾಗಿ ನಿರ್ಮಾಣಗೊಂಡಿರುವ ಆರ್‌ಎಸ್ ಕ್ಯೂ ಇ-ಟ್ರಾನ್ ಕಾರು ಮಾದರಿಯು ಪರ್ಫಾಮೆನ್ಸ್ ಜೊತೆಗೆ ಎನರ್ಜಿ ಕನ್ವರ್ಟರ್ ವೈಶಿಷ್ಟ್ಯತೆ ಹೊಂದಿದ್ದು, ಡಿಟಿಎಂ ರೇಸಿಂಗ್ ಕಂಪನಿಯಿಂದ ಟಿಎಫ್ಎಸ್ಐ ಎಂಜಿನ್ ಪಡೆದುಕೊಂಡಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಮರಳುಗಾಡಿನಲ್ಲಿ ಸಾವಿರಾರು ಕಿ.ಮೀ ಸಾಗಬೇಕಿರುವ ಡಕಾರ್ ರ‍್ಯಾಲಿಯಲ್ಲಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್ ಕಾರಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲು ವಿನೂತನ ತಂತ್ರಜ್ಞಾನ ಪ್ರಯೋಗಿಸಿರುವ ಆಡಿ ಕಂಪನಿಯು ಹೊಸ ಕಾರಿನಲ್ಲಿ ಕಾರು ಚಾಲನೆಯಲ್ಲಿರುವಾಗಲೇ ವಿದ್ಯುತ್ ಉತ್ಪಾದಿಸಲು ಹೈ ವೊಲ್ಟೆಜ್ ಬ್ಯಾಟರಿ ಜೋಡಣೆ ಮಾಡಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಹೊಸ ತಂತ್ರಜ್ಞಾನದ ಮೂಲಕ ಕಾರು ಚಾಲನೆಯಲ್ಲಿರುವಾಗಲೇ ಬ್ಯಾಟರಿ ರೀಚಾರ್ಜ್ ಆಗಲಿದ್ದು, ಮತ್ತೊಂದು ವಿದ್ಯುತ್ ಸಂಯೋಜನೆಯ ಮೂಲಕ ಅದೇ ಬ್ಯಾಟರಿ ಸೌಲಭ್ಯದ ಮೇಲೆ ಕಾರು ಚಾಲನೆಯಾಗಲಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಆಡಿ ಅಭಿವೃದ್ದಿಪಡಿಸಿರುವ ಹೊಸ ತಂತ್ರಜ್ಞಾನವು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮತ್ತೊಂದು ಹಂತಕ್ಕೆ ಕೊಂಡಯ್ಯಲಿದ್ದು, ಕಾರು ಚಾಲನೆಯಲ್ಲಿರುವಾಗಲೇ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಚಾರ್ಜಿಂಗ್‌ಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಸದ್ಯಕ್ಕೆ ಆಡಿ ಕಂಪನಿಯು ಎನರ್ಜಿ ಕನ್ವರ್ಟರ್ ತಂತ್ರಜ್ಞಾನವನ್ನು ರೇಸಿಂಗ್ ಕಾರು ಮಾದರಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್ ಕಾರು ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 670-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

ಇನ್ನು ಸೌದಿಯಲ್ಲಿ ಆರಂಭವಾಗಲಿರುವ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯು ರಿಯಾದ್‌ನ ಸನೀಹದಲ್ಲಿರುವ ಹೈಲ್ ನಗರದಿಂದ ಆರಂಭವಾಗಿ ಪ್ರಮುಖ 12 ಹಂತಗಳೊಂದಿಗೆ ಜೆದ್ದಾದಲ್ಲಿ ಪೂರ್ಣಗೊಳ್ಳಲಿದೆ. ‌43ನೇ ಆವೃತ್ತಿಯ ರ‍್ಯಾಲಿಯು ಕೆಲವು ಪ್ರಮುಖ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಟಿ1-ಇ ವಿಭಾಗದಲ್ಲಿ ಸ್ಪರ್ಧಿಸಲಿದೆ ಆಡಿ ಹೊಸ ಆರ್‌ಎಸ್ ಕ್ಯೂ ಇ-ಟ್ರಾನ್

2022ರ ಆವೃತ್ತಿಯು ಒಟ್ಟು 4 ಸಾವಿರ ಕಿ.ಮೀ ಒಳಗೊಂಡಿದ್ದು, ಹೊಸ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣಿನ ಮಾರ್ಗವನ್ನು ಒಳಗೊಂಡಿರಲಿದೆ. ಹೊಸ ಆವೃತ್ತಿಯಲ್ಲಿ ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದ್ದು, ವಿಶ್ವಾದ್ಯಂತ ಸಾವಿರಾರು ಮೋಟಾರ್‌ಸ್ಪೋರ್ಟ್ ಸ್ಪರ್ಧಿಗಳು, ರೇಸಿಂಗ್ ತಂಡಗಳು ವಿವಿಧ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

Most Read Articles

Kannada
English summary
Dakar Rally 2022: Audi RS Q e-Tron Unveiled. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X