ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಇಂಗ್ಲೆಂಡ್ ಫುಟ್ಬಾಲ್ ತಂಡದ ಮಾಜಿ ಆಟಗಾರ ಡೇವಿಡ್ ಬೆಕ್ ಹ್ಯಾಮ್'ರವರು ವಿಶ್ವದ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು. ಈಗ ಅವರು ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಲ್ಲಿ ಷೇರುಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಡೇವಿಡ್ ಬೆಕ್ ಹ್ಯಾಮ್, ಕ್ಲಾಸಿಕ್ ಎಲೆಕ್ಟ್ರಿಕ್ ವಾಹನಗಳ ತಯಾರಕ ಕಂಪನಿಯಾದ ಲುನಾಸ್‌ನಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. ಅವರು ಈ ಕಂಪನಿಯಲ್ಲಿ 10%ನಷ್ಟು ಷೇರುಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ಷೇರು ಖರೀದಿಯು ಅತ್ಯುತ್ತಮ ಹೂಡಿಕೆಯಾಗಿದೆ ಎಂದು ಉದ್ಯಮ ಹಾಗೂ ವಾಹನ ತಜ್ಞರು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಿಡಿ, ತೆರಿಗೆ ಕಡಿತ, ನೋಂದಣಿ ಶುಲ್ಕ ರದ್ದತಿಯಂತಹ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಕಾರಣಗಳಿಂದ ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿವೆ ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಈ ಸಂಗತಿಗಳನ್ನು ಅರಿತಿರುವ ಡೇವಿಡ್ ಬೆಕ್ ಹ್ಯಾಮ್'ರವರು ಲೂನಾಸ್ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಯಲ್ಲಿ 10%ನಷ್ಟು ಪಾಲನ್ನು ಖರೀದಿಸಿದ್ದಾರೆ. ಲೂನಾಸ್ ಕಂಪನಿಯು ತನ್ನ ಉತ್ಪಾದನಾ ಕಾರ್ಯಾಚರಣೆಯನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಸಿಲ್ವರ್‌ಸ್ಟೋನ್ ಮೂಲದ ಕಂಪನಿಯು 2024ರ ವೇಳೆಗೆ ಇನ್ನೂ 500 ಜನರಿಗೆ ಉದ್ಯೋಗ ನೀಡುವ ನಿರೀಕ್ಷೆಗಳಿವೆ. ಕಮರ್ಷಿಯಲ್ ವಾಹನಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲು ಕಂಪನಿಯು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಇದರ ಜೊತೆಗೆ ಹೈಟೆಕ್ ಪ್ರಯಾಣಿಕರ ವಾಹನಗಳನ್ನು ಅಭಿವೃದ್ಧಿಪಡಿಸಲು ಸಹ ಕಂಪನಿಯು ನಿರ್ಧರಿಸಿದೆ. ಲೂನಾಸ್ ಕಂಪನಿಯು ಮೂರು ವಿಭಿನ್ನ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಲೂನಾಸ್ ಕಂಪನಿಯು ಲೂನಾಸ್ ಅಪ್ಲೈಡ್ ಟೆಕ್ನಾಲಜಿ, ಲೂನಾಸ್ ಪವರ್‌ಟ್ರೇನ್ ಸೇರಿದಂತೆ ಮೂರು ವಿಭಾಗಗಳನ್ನು ನಿರ್ವಹಿಸುತ್ತದೆ. ಹಲವು ಮಾಜಿ ಹಾಗೂ ಹಾಲಿ ಕ್ರೀಡಾ ಪಟುಗಳು ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಷೇರುಗಳನ್ನು ಖರೀದಿಸಿದ ಮಾಜಿ ಫುಟ್ಬಾಲ್ ಆಟಗಾರ

ಇವರೆಲ್ಲರಿಗಿಂತ ವಿಭಿನ್ನ ಹೆಜ್ಜೆಯನ್ನಿಟ್ಟಿರುವ ಡೇವಿಡ್ ಬೆಕ್ ಹ್ಯಾಮ್ ಭವಿಷ್ಯದಲ್ಲಿ ಆದಾಯವನ್ನು ವೃದ್ಧಿಸಿಕೊಳ್ಳಲು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಲ್ಲಿಹೂಡಿಕೆ ಮಾಡಿದ್ದಾರೆ. ಅವರ ಈ ನಡೆ ಅವರ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.

Most Read Articles

Kannada
English summary
David Beckham purchases 10 percent shares in Lunaz EV firm. Read in Kannada.
Story first published: Monday, June 7, 2021, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X