ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಫೋರ್ಸ್ ಮೋಟಾರ್ಸ್ ಕಂಪನಿಯ ಹೊಸ ಗೂರ್ಖಾ ಕಾರ್ ಅನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಕಾರು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್‌ 19 ಕಾರಣದಿಂದಾಗಿ ಈ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಹೊಸ ಫೋರ್ಸ್ ಗೂರ್ಖಾ ಕಾರ್ ಅನ್ನು ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಲಾಗಿತ್ತು. ಆದರೆ ಈಗ ಈ ಕಾರ್ ಅನ್ನು ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ಫೋರ್ಸ್ ಮೋಟಾರ್ ಕಂಪನಿಯ ಡೀಲರ್ ಒಬ್ಬರು ಮಾಹಿತಿ ನೀಡಿದ್ದಾರೆ.

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಹೊಸ ಫೋರ್ಸ್ ಗೂರ್ಖಾ ಕಾರ್ ಅನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತಿದೆ. ಈ ಹಿಂದೆ ಈ ಕಾರು ಕಂಪನಿಯ ಉತ್ಪಾದನಾ ಘಟಕದಲ್ಲಿ ಕಂಡುಬಂದಿತ್ತು. ಶೀಘ್ರದಲ್ಲಿಯೇ ಈ ಕಾರಿನ ಉತ್ಪಾದನೆಯನ್ನು ಆರಂಭಿಸುವ ಸಾಧ್ಯತೆಗಳಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಆದರೆ ಫೋರ್ಸ್ ಮೋಟಾರ್ ಕಂಪನಿಯು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆಂಬುಲೆನ್ಸ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಸಹ ಈ ಕಾರಿನ ಬಿಡುಗಡೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ.

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಆಂಬುಲೆನ್ಸ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಕಂಪನಿಯು ಇತರ ವಾಹನಗಳತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗೂರ್ಖಾ ಕಾರಿನ ಬಿಡುಗಡೆ ವಿಳಂಬವಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಫೋರ್ಸ್ ಮೋಟಾರ್ ಕಂಪನಿಯು ಈಗ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ. ಹೊಸ ಫೋರ್ಸ್ ಗೂರ್ಖಾ ಬಿಎಸ್ 6 ಕಾರಿನಲ್ಲಿ ಹೊಸ ಗ್ರಿಲ್, ಹೊಸ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಡಿ‌ಆರ್‌ಎಲ್, ಹೊಸ ಟೇಲ್ ಲೈಟ್, ಡೋರ್ ಮೌಂಟೆಡ್ ಸ್ಪೇರ್ ವ್ಹೀಲ್, ಹಿಂಭಾಗದಲ್ಲಿ ಸ್ಟೆಪ್ ಲ್ಯಾಡರ್'ಗಳನ್ನು ನೀಡಲಾಗಿದೆ.

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಇದರ ಜೊತೆಗೆ ಹೊಸ ಗೂರ್ಖಾ ಕಾರಿನಲ್ಲಿ ಆಕರ್ಷಕವಾದ ಹೊಸ 16 ಇಂಚಿನ ಅಲಾಯ್ ವ್ಹೀಲ್'ಗಳನ್ನು ಸಹ ನೀಡಲಾಗಿದೆ. ಈ ವ್ಹೀಲ್'ಗಳು ಈ ಕಾರಿನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಈ ಕಾರಿನ ಇಂಟಿರಿಯರ್'ನಲ್ಲಿ ಪವರ್ ವಿಂಡೋಸ್, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್‌'ಗಳನ್ನು ನೀಡಲಾಗಿದೆ.

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಸುರಕ್ಷತೆಗಾಗಿ ಹೊಸ ಫೋರ್ಸ್ ಗೂರ್ಖಾ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‌ ಸೇರಿದಂತೆ ಹಳವಾರು ಫೀಚರ್'ಗಳನ್ನು ನೀಡಲಾಗಿದೆ. ಇಷ್ಟೆಲ್ಲಾ ಫೀಚರ್'ಗಳನ್ನು ಹೊಂದಿರುವ ಹೊಸ ಫೋರ್ಸ್ ಗೂರ್ಖಾ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷಗಳಾಗಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಇನ್ನು ಈ ಕಾರಿನಲ್ಲಿ ಅಳವಡಿಸಿರುವ ಸೀಟುಗಳ ಬಗ್ಗೆ ಹೇಳುವುದಾದರೆ ಈ ಕಾರಿನ ಮೊದಲ ಸಾಲಿನಲ್ಲಿ ಎರಡು ಸೀಟುಗಳನ್ನು, ಎರಡನೇ ಸಾಲಿನಲ್ಲಿ ಎರಡು ಸೀಟುಗಳನ್ನು ಹಾಗೂ ಕೊನೆಯ ಸಾಲಿನಲ್ಲಿ ಎರಡು ಜಂಪ್ ಸೀಟುಗಳನ್ನು ನೀಡಲಾಗಿದೆ.

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಹೊಸ ಫೋರ್ಸ್ ಗೂರ್ಖಾ ಕಾರಿನಲ್ಲಿ 2.6-ಲೀಟರ್, 4-ಸಿಲಿಂಡರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 88 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಾನ್ಸ್'ಮಿಷನ್'ಗಾಗಿ ಅಳವಡಿಸಲಾಗಿರುವ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಆಲ್-ವ್ಹೀಲ್-ಡ್ರೈವ್ ಆಗಿ ನೀಡಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಫೋರ್ಸ್ ಗೂರ್ಖಾ ಕಾರಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡೀಲರ್

ಮುಂಬರುವ ದಿನಗಳಲ್ಲಿ ಫೋರ್ಸ್ ಗೂರ್ಖಾ ಕಾರ್ ಅನ್ನು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹೊಸ ಫೋರ್ಸ್ ಗೂರ್ಖಾ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಹಾಗೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Dealer reveals about the launch of new Force Gurkha. Read in Kannada.
Story first published: Monday, March 15, 2021, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X