ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ದೆಹಲಿ ನಗರದಲ್ಲಿ 4,000 ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಹೊಸ ಆಟೋ ಪರ್ಮಿಟ್ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ದೆಹಲಿ ಸರ್ಕಾರವು ಶೀಘ್ರದಲ್ಲಿಯೇ ಎಲ್ಲಾ ಸಿಎನ್‌ಜಿ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗಾಗಿ ಚಾರ್ಜಿಂಗ್ ಪಾಯಿಂಟ್‌ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಆರಂಭಿಸಲಿದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ದೆಹಲಿ ನಗರದಲ್ಲಿ ಮಾಲಿನ್ಯ ಮುಕ್ತ ಸಾರಿಗೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದೆ. ಸದ್ಯಕ್ಕೆ ದೆಹಲಿಯಲ್ಲಿ ಸುಮಾರು 95,000 ನೋಂದಾಯಿತ ಸಿಎನ್‌ಜಿ ಆಟೋ ರಿಕ್ಷಾಗಳು ಕಾರ್ಯನಿರ್ವಹಿಸುತ್ತಿವೆ. ಈ ಆಟೋ ರಿಕ್ಷಾಗಳ ಗರಿಷ್ಠ ಮಿತಿಯನ್ನು 1 ಲಕ್ಷದವರೆಗೆ ನಿಗದಿ ಪಡಿಸುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ದೆಹಲಿ ಸಾರಿಗೆ ಇಲಾಖೆಯು ಜುಲೈ 21 ರಿಂದ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಸಿಎನ್‌ಜಿ ಆಟೋ ರಿಕ್ಷಾ ಬೆಲೆ ರೂ. 2 - 2.25 ಲಕ್ಷಗಳಾದರೆ, ಎಲೆಕ್ಟ್ರಿಕ್ ಆಟೋ ರಿಕ್ಸಾಗಳ ಬೆಲೆ ರೂ. 1.5 ಲಕ್ಷಗಳಾಗಿದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ದೆಹಲಿ ಸರ್ಕಾರದ ಈ ನಿರ್ಧಾರಕ್ಕೆ ಸಿಎನ್‌ಜಿ ಆಟೋ ರಿಕ್ಷಾ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಚಾರ್ಜಿಂಗ್ ಕೇಂದ್ರಗಳು ಕಡಿಮೆ ಸಂಖ್ಯೆಯಲ್ಲಿರುವ ಕಾರಣ ಎಲೆಕ್ಟ್ರಿಕ್ ರಿಕ್ಷಾಗಳನ್ನು ಚಾರ್ಜ್ ಮಾಡಲು ಕಷ್ಟವಾಗುತ್ತದೆ ಎಂದು ಆಟೋ ರಿಕ್ಷಾ ಚಾಲಕರು ಹೇಳಿದ್ದಾರೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ಸಿಎನ್‌ಜಿ ಆಟೋಗಳು ದಿನವಿಡೀ ಸುಮಾರು 200 ಕಿ.ಮೀಗಳವರೆಗೆ ಚಲಿಸುತ್ತವೆ. ಆದರೆ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ದಿನಕ್ಕೆ 100 - 150 ಕಿ.ಮೀಗಳವರೆಗೆ ಮಾತ್ರ ಚಲಿಸಲು ಸಾಧ್ಯವಾಗುತ್ತದೆ ಎಂದು ಸಿಎನ್‌ಜಿ ಆಟೋ ಚಾಲಕರು ಹೇಳಿದ್ದಾರೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ಸಿಎನ್‌ಜಿ ಆಟೋ ಚಾಲಕರ ಪ್ರಕಾರ ನಗರದಲ್ಲಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ವ್ಯವಸ್ಥೆ ಇಲ್ಲದಿದ್ದರೆ ಅದರ ಪರಿಣಾಮ ಆಟೋ ಚಾಲಕರ ಮೇಲಾಗುತ್ತದೆ. ಜೊತೆಗೆ ಎಲೆಕ್ಟ್ರಿಕ್ ರಿಕ್ಷಾ ಚಾರ್ಜ್ ಮಾಡಲು 3 ಗಂಟೆ ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಚಾಲನೆ ನೀಡುವ ಮುನ್ನ ಸರ್ಕಾರವು ಬ್ಯಾಟರಿ ವಿನಿಮಯ ಕೇಂದ್ರಗಳ ವ್ಯವಸ್ಥೆ ಮಾಡಬೇಕು ಎಂದು ಸಿಎನ್‌ಜಿ ಆಟೋ ಚಾಲಕರು ಒತ್ತಾಯಿಸಿದ್ದಾರೆ. ಈ ಬೇಡಿಕೆಯನ್ನು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಮಂಡಳಿಯಲ್ಲಿ ನಡೆದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಂಡಿಸಲಾಗಿದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ದೆಹಲಿಯ ಎಲ್ಲಾ ಸಿಎನ್‌ಜಿ ಕೇಂದ್ರಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

2020ರ ಆಗಸ್ಟ್ 7 ರಂದು ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಲಾಯಿತು. ದೆಹಲಿ ಸರ್ಕಾರವು 2024 ರ ವೇಳೆಗೆ ನೋಂದಣಿಯಾಗುವ ಒಟ್ಟು ಹೊಸ ವಾಹನಗಳ ಪೈಕಿ 24% ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ನೋಂದಣಿ ಮಾಡುವ ಗುರಿಯನ್ನು ಹೊಂದಿದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ನೋಂದಣಿ ಹಾಗೂ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡುವುದರ ಜೊತೆಗೆ ಸಬ್ಸಿಡಿಯನ್ನೂ ನೀಡುತ್ತಿದೆ. ವರದಿಗಳ ಪ್ರಕಾರ 2020 ರ ಆಗಸ್ಟ್‌ ತಿಂಗಳಿನಲ್ಲಿ ದೆಹಲಿಯಲ್ಲಿ 13,963 ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ಈ ಪೈಕಿ 8,012 (57.3%) ವಾಹನಗಳಿಗೆ ದೆಹಲಿ ಸರ್ಕಾರವು ಸಬ್ಸಿಡಿ ನೀಡಿದೆ. 8,012 ಎಲೆಕ್ಟ್ರಿಕ್ ವಾಹನಗಳ ಪೈಕಿ 4,782 (59.6%) ಹೊಸ ಇ-ರಿಕ್ಷಾಗಳಾಗಿದ್ದವು. ಈ ಹೊಸ ಇ-ರಿಕ್ಷಾಗಳಿಗೆ ಎಲೆಕ್ಟ್ರಿಕ್ ವಾಹನ ನೀತಿಯಡಿ ಸಬ್ಸಿಡಿ ನೀಡಲಾಯಿತು.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದ ಸರ್ಕಾರ

ಇ-ರಿಕ್ಷಾಗಳು ಹೆಚ್ಚಿನ ಸಂಖ್ಯೆಯಲ್ಲಿ ಸಬ್ಸಿಡಿ ಪಡೆದಿವೆ. ನಂತರದ ಸ್ಥಾನದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿವೆ. ಒಟ್ಟು 1,340 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ನೀಡಲಾಗಿದೆ. ದೆಹಲಿಯಲ್ಲಿ 2020 ರ ಆಗಸ್ಟ್‌ನಿಂದ ಈ ವರ್ಷದ ಜುಲೈ 20 ರವರೆಗೆ ಕೇವಲ 610 ಎಲೆಕ್ಟ್ರಿಕ್ ಕಾರುಗಳು ನೋಂದಣಿಯಾಗಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi Government to allow new permit only to e rickshaws. Read in Kannada.
Story first published: Saturday, July 24, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X