ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ನೀತಿ ಅಳವಡಿಸಿಕೊಂಡಿದ್ದು, ದೆಹಲಿ ಸರ್ಕಾರವು ಸಹ ಹೊಸ ನೀತಿ ಅಡಿಯಲ್ಲಿ ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಸಬ್ಸಡಿ ನೀಡುತ್ತಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸಲು ಈಗಾಗಲೇ ಫೇಮ್ 2 ಯೋಜನೆಯನ್ನು ಜಾರಿಗೆ ತರಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯನ್ನು ಹೊರತುಪಡಿಸಿ ದೆಹಲಿ ಸರ್ಕಾರವು ತನ್ನದೇ ಆದ ಎಲೆಕ್ಟ್ರಿಕ್ ವಾಹನ ನೀತಿ ಮೂಲಕ ಮಹತ್ವದ ಬದಲಾವಣೆಯತ್ತ ಹೆಜ್ಜೆಯಿರಿಸಿದ್ದು, ಫೇಮ್ 2 ಯೋಜನೆಗಿಂತಲೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ದೆಹಲಿ ಸರ್ಕಾರವು ಹೊಸ ಇವಿ ಪಾಲಿಸಿ ಅಡಿ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ನೋಂದಣಿ ಶುಲ್ಕ ವಿನಾಯ್ತಿ, ರಸ್ತೆ ತೆರಿಗೆ ವಿನಾಯ್ತಿ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿಯಲ್ಲೂ ಜಿಎಸ್‌ಟಿ ವಿನಾಯ್ತಿ ಕೂಡಾ ಅನ್ವಯಿಸುತ್ತದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಎಲೆಕ್ಟ್ರಿಕ್ ವಾಹನ ನೀತಿಯಿಂದಾಗಿ ದೆಹಲಿಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಇತರೆ ರಾಜ್ಯಗಳಿಂತಲೂ ಸಾಕಷ್ಟು ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುತ್ತಿದ್ದು, ಟಾಟಾ ಹೊಸ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರುಗಳಿಗೆ ಇದೀಗ ಸಬ್ಸಡಿ ಯೋಜನೆ ಅಡಿಯಲ್ಲಿ ಲಭ್ಯವಾಗುವ ವಿನಾಯ್ತಿಗಳ ಮಾಹಿತಿ ಪ್ರಕಟಿಸಲಾಗಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಹೊಸ ಮಾಹಿತಿಯಲ್ಲಿ ಟಾಟಾ ನೆಕ್ಸಾನ್ ಇವಿ ಮತ್ತು ಟಿಗೋರ್ ಕಾರುಗಳು ಗರಿಷ್ಠ ರೂ. 3 ಲಕ್ಷದ ತನಕ ಸಬ್ಸಡಿ ಪಡೆದುಕೊಳ್ಳಬಹುದಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನಗಳಲ್ಲಿ ದೆಹಲಿಯಲ್ಲಿ ನೋಂದಣಿ ಶುಲ್ಕವನ್ನಾಗಲಿ, ರಸ್ತೆ ತೆರಿಗೆಯನ್ನು ಸಹ ಪಾವತಿ ಮಾಡಬೇಕಿಲ್ಲ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಇದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಕೇವಲ ಉತ್ಪಾದನಾ ಕಂಪನಿಗಳ ಬೆಲೆ ಮಾತ್ರ ಪಾವತಿಮಾಡಬೇಕಿದ್ದು, ಇಂಧನ ಆಧರಿತ ವಾಹನಗಳಿಗೆ ಬ್ರೇಕ್ ಹಾಕಿ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನು ಸೆಳೆಯಲು ಇದು ಪ್ರಮುಖ ನಿರ್ಧಾರವಾಗಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಇನ್ನು ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಈ ಸಮಸ್ಯೆ ನಿವಾರಣೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಸನ್ ಮೊಬಿಲಿಟಿ ಜೊತೆಗೂಡಿ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿರ್ಮಾಣ ಮಾಡುತ್ತಿವೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಬ್ಯಾಟರಿ ವಿನಿಯಮ ಕೇಂದ್ರಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು, ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಾಗುತ್ತದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಖಾಲಿಯಾದ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಸದ್ಯ ಬೆಂಗಳೂರು, ಮುಂಬೈ, ದೆಹಲಿ ಮತ್ತು ಅಹಮದಾಬಾದ್ ನಗರಗಳಲ್ಲಿನ ಆಯ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಬಂಕ್ ಆವರಣಗಳಲ್ಲೇ ಹೊಸ ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಪ್ರಾಯೋಗಿಕವಾಗಿ ವಿವಿಧ ನಗರಗಳಲ್ಲಿ ತಲಾ ಒಂದೊಂದು ಬ್ಯಾಟರಿ ವಿನಿಯಮ ತೆರೆದಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಶೀಘ್ರದಲ್ಲೇ ಬೆಂಗಳೂರು ಒಂದಲ್ಲೇ ನೂರು ಕೇಂದ್ರಗಳಿಗೆ ಚಾಲನೆ ನೀಡಲಿದೆ.

ದೆಹಲಿಯಲ್ಲಿ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಇದರಿಂದ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳನ್ನು ಕಾಣಸಿಗುತ್ತದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಅಲ್ಲದೇ ಜನರು ಕೂಡ ಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ.

Most Read Articles

Kannada
English summary
Delhi Govt Issues Over Rs 3 Lakh Discount On Tata Nexon EV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X