Just In
- 30 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 31 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 2 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- News
ಪುಟ್ಟೇನಹಳ್ಳಿ ಡಬಲ್ ಮರ್ಡರ್ : ಆರೋಪಿಗಳು ಅಂದರ್ ಆಗಿದ್ದೇ ಥ್ರಿಲ್ಲಿಂಗ್ !
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Movies
'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು
ದಟ್ಸನ್ ಕಂಪನಿಯು ಮಾರ್ಚ್ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದೆ. ಕಂಪನಿಯು ಈ ತಿಂಗಳು ತನ್ನ ಮಾದರಿಗಳ ಮೇಲೆ ರೂ.45,000ಗಳವರೆಗೆ ರಿಯಾಯಿತಿ ನೀಡುತ್ತಿದೆ.

ಈ ತಿಂಗಳು ದಟ್ಸನ್ ರೆಡಿ-ಗೋ, ಗೋ ಹಾಗೂ ಗೋ ಪ್ಲಸ್ ಮಾದರಿಗಳ ಮೇಲೆ ವಿನಿಮಯ ಪ್ರಯೋಜನಗಳನ್ನು ನೀಡಲಾಗುತ್ತದೆ. ಕಂಪನಿಯ ಕಾರುಗಳ ಮೇಲಿನ ಈ ಕೊಡುಗೆಯು ಮಾರ್ಚ್ 31ರವರೆಗೆ ಲಭ್ಯವಿರಲಿದೆ ಎಂದು ದಟ್ಸನ್ ಕಂಪನಿ ಹೇಳಿದೆ. ಕಂಪನಿಯು ಗ್ರಾಹಕರನ್ನು ಸೆಳೆಯಲು ತನ್ನ ಮಾದರಿಗಳಿಗೆ ಮೇಲೆ ಹೆಚ್ಚು ರಿಯಾಯಿತಿಯನ್ನು ನೀಡುತ್ತಿದೆ.

ಈ ರಿಯಾಯಿತಿಯು ಮಾದರಿ ಹಾಗೂ ಸ್ಥಳಗಳ ಮೇಲೆ ಅವಲಂಬಿತವಾಗಿರುತ್ತದೆ. ಕಂಪನಿಯು ತನ್ನ ಎಂಟ್ರಿ ಲೆವೆಲ್ ದಟ್ಸನ್ ರೆಡಿ-ಗೋ ಕಾರಿನ ಮೇಲೆ ರೂ.45,000ಗಳವರೆಗೆ ರಿಯಾಯಿತಿ ನೀಡುತ್ತಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಇದರಲ್ಲಿ ರೂ.15 ಸಾವಿರ ನಗದು ರಿಯಾಯಿತಿ, ರೂ.15 ಸಾವಿರಗಳ ವಿನಿಮಯ ಬೋನಸ್ ಹಾಗೂ ಸರ್ಕಾರಿ ಮತ್ತು ಪಿಎಸ್ಯು ಉದ್ಯೋಗಿಗಳಿಗಾಗಿ ರೂ.15 ಸಾವಿರಗಳ ಕಾರ್ಪೊರೇಟ್ ಕೊಡುಗೆ ನೀಡಲಾಗುತ್ತದೆ.

ದಟ್ಸನ್ ಗೋ ಹ್ಯಾಚ್ಬ್ಯಾಕ್ ಕಾರಿನ ಮೇಲೆ ರೂ.40,000ಗಳ ರಿಯಾಯಿತಿ ನೀಡಲಾಗುತ್ತದೆ. ಇದರಲ್ಲಿ ರೂ.20,000 ನಗದು ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ಸೇರಿದೆ. ದಟ್ಸನ್ ಗೋ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.3.99 ಲಕ್ಷಗಳಿಂದ ರೂ.6.45 ಲಕ್ಷಗಳಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದಟ್ಸನ್ ಗೋ ಪ್ಲಸ್ ಎಂಪಿವಿಯ ಮೇಲೆ ಮಾರ್ಚ್ ತಿಂಗಳಲ್ಲಿ ಗರಿಷ್ಠ ರೂ.40,000 ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ರೂ.20,000ಗಳ ನಗದು ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ಸೇರಿದೆ.

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.19 ಲಕ್ಷಗಳಿಂದ ರೂ.6.89 ಲಕ್ಷಗಳಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪಿಎಸ್ಯು ನೌಕರರಿಗೆ ಎಲ್ಲಾ ಮಾದರಿಗಳ ಮೇಲೆ ಎಲ್ಸಿಟಿ ಕೊಡುಗೆಗಳನ್ನು ಸಹ ನೀಡಲಾಗುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಂಪನಿಯ ಮಾರಾಟವು ಇನ್ನು ಚೇತರಿಸಿಕೊಂಡಿಲ್ಲ. ಮುಂಬರುವ ದಿನಗಳಲ್ಲಿಯೂ ಸಹ ಚೇತರಿಸಿಕೊಳ್ಳುವಂತೆ ಕಾಣುತ್ತಿಲ್ಲ. ಕಂಪನಿಯು ದೇಶದಲ್ಲಿ ಕಡಿಮೆ ಬೆಲೆಯ ಕಾರುಗಳನ್ನು ಮಾರಾಟ ಮಾಡುತ್ತದೆ.

ಆದರೆ ಕಡಿಮೆ ವ್ಯಾಪ್ತಿ ಹಾಗೂ ಇನ್ನಿತರ ಕೆಲವು ಕಾರಣಗಳಿಂದಾಗಿ ಕಂಪನಿಯ ಮಾರಾಟವು ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಸದ್ಯಕ್ಕೆ ಕಂಪನಿಯು ಯಾವುದೇ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿಲ್ಲ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಭವಿಷ್ಯವು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಂಪನಿಯ ನಿಸ್ಸಾನ್ ಬ್ರಾಂಡ್ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ನಿಸ್ಸಾನ್ ಕಂಪನಿಯು ಇತ್ತೀಚಿಗಷ್ಟೇ ಮ್ಯಾಗ್ನೈಟ್ ಎಸ್ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಎಸ್ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದುವರೆಗೂ ಈ ಎಸ್ಯುವಿಯು 40,000ಕ್ಕೂ ಹೆಚ್ಚು ಯುನಿಟ್ ಬುಕ್ಕಿಂಗ್'ಗಳನ್ನು ಪಡೆದಿದೆ.