ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ದಟ್ಸನ್ ಕಂಪನಿಯು ಮಾರ್ಚ್ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದೆ. ಕಂಪನಿಯು ಈ ತಿಂಗಳು ತನ್ನ ಮಾದರಿಗಳ ಮೇಲೆ ರೂ.45,000ಗಳವರೆಗೆ ರಿಯಾಯಿತಿ ನೀಡುತ್ತಿದೆ.

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ಈ ತಿಂಗಳು ದಟ್ಸನ್ ರೆಡಿ-ಗೋ, ಗೋ ಹಾಗೂ ಗೋ ಪ್ಲಸ್ ಮಾದರಿಗಳ ಮೇಲೆ ವಿನಿಮಯ ಪ್ರಯೋಜನಗಳನ್ನು ನೀಡಲಾಗುತ್ತದೆ. ಕಂಪನಿಯ ಕಾರುಗಳ ಮೇಲಿನ ಈ ಕೊಡುಗೆಯು ಮಾರ್ಚ್ 31ರವರೆಗೆ ಲಭ್ಯವಿರಲಿದೆ ಎಂದು ದಟ್ಸನ್ ಕಂಪನಿ ಹೇಳಿದೆ. ಕಂಪನಿಯು ಗ್ರಾಹಕರನ್ನು ಸೆಳೆಯಲು ತನ್ನ ಮಾದರಿಗಳಿಗೆ ಮೇಲೆ ಹೆಚ್ಚು ರಿಯಾಯಿತಿಯನ್ನು ನೀಡುತ್ತಿದೆ.

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ಈ ರಿಯಾಯಿತಿಯು ಮಾದರಿ ಹಾಗೂ ಸ್ಥಳಗಳ ಮೇಲೆ ಅವಲಂಬಿತವಾಗಿರುತ್ತದೆ. ಕಂಪನಿಯು ತನ್ನ ಎಂಟ್ರಿ ಲೆವೆಲ್ ದಟ್ಸನ್ ರೆಡಿ-ಗೋ ಕಾರಿನ ಮೇಲೆ ರೂ.45,000ಗಳವರೆಗೆ ರಿಯಾಯಿತಿ ನೀಡುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ಇದರಲ್ಲಿ ರೂ.15 ಸಾವಿರ ನಗದು ರಿಯಾಯಿತಿ, ರೂ.15 ಸಾವಿರಗಳ ವಿನಿಮಯ ಬೋನಸ್ ಹಾಗೂ ಸರ್ಕಾರಿ ಮತ್ತು ಪಿಎಸ್‌ಯು ಉದ್ಯೋಗಿಗಳಿಗಾಗಿ ರೂ.15 ಸಾವಿರಗಳ ಕಾರ್ಪೊರೇಟ್ ಕೊಡುಗೆ ನೀಡಲಾಗುತ್ತದೆ.

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ದಟ್ಸನ್ ಗೋ ಹ್ಯಾಚ್‌ಬ್ಯಾಕ್‌ ಕಾರಿನ ಮೇಲೆ ರೂ.40,000ಗಳ ರಿಯಾಯಿತಿ ನೀಡಲಾಗುತ್ತದೆ. ಇದರಲ್ಲಿ ರೂ.20,000 ನಗದು ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ಸೇರಿದೆ. ದಟ್ಸನ್ ಗೋ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.3.99 ಲಕ್ಷಗಳಿಂದ ರೂ.6.45 ಲಕ್ಷಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ದಟ್ಸನ್ ಗೋ ಪ್ಲಸ್ ಎಂಪಿವಿಯ ಮೇಲೆ ಮಾರ್ಚ್ ತಿಂಗಳಲ್ಲಿ ಗರಿಷ್ಠ ರೂ.40,000 ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ರೂ.20,000ಗಳ ನಗದು ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ಸೇರಿದೆ.

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.19 ಲಕ್ಷಗಳಿಂದ ರೂ.6.89 ಲಕ್ಷಗಳಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪಿಎಸ್‌ಯು ನೌಕರರಿಗೆ ಎಲ್ಲಾ ಮಾದರಿಗಳ ಮೇಲೆ ಎಲ್‌ಸಿಟಿ ಕೊಡುಗೆಗಳನ್ನು ಸಹ ನೀಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ಕಂಪನಿಯ ಮಾರಾಟವು ಇನ್ನು ಚೇತರಿಸಿಕೊಂಡಿಲ್ಲ. ಮುಂಬರುವ ದಿನಗಳಲ್ಲಿಯೂ ಸಹ ಚೇತರಿಸಿಕೊಳ್ಳುವಂತೆ ಕಾಣುತ್ತಿಲ್ಲ. ಕಂಪನಿಯು ದೇಶದಲ್ಲಿ ಕಡಿಮೆ ಬೆಲೆಯ ಕಾರುಗಳನ್ನು ಮಾರಾಟ ಮಾಡುತ್ತದೆ.

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ಆದರೆ ಕಡಿಮೆ ವ್ಯಾಪ್ತಿ ಹಾಗೂ ಇನ್ನಿತರ ಕೆಲವು ಕಾರಣಗಳಿಂದಾಗಿ ಕಂಪನಿಯ ಮಾರಾಟವು ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಸದ್ಯಕ್ಕೆ ಕಂಪನಿಯು ಯಾವುದೇ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಭವಿಷ್ಯವು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಂಪನಿಯ ನಿಸ್ಸಾನ್ ಬ್ರಾಂಡ್ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು

ನಿಸ್ಸಾನ್ ಕಂಪನಿಯು ಇತ್ತೀಚಿಗಷ್ಟೇ ಮ್ಯಾಗ್ನೈಟ್ ಎಸ್‌ಯು‌ವಿಯನ್ನು ಬಿಡುಗಡೆಗೊಳಿಸಿದೆ. ಈ ಎಸ್‌ಯು‌ವಿಯು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದುವರೆಗೂ ಈ ಎಸ್‌ಯು‌ವಿಯು 40,000ಕ್ಕೂ ಹೆಚ್ಚು ಯುನಿಟ್ ಬುಕ್ಕಿಂಗ್'ಗಳನ್ನು ಪಡೆದಿದೆ.

Most Read Articles

Kannada
Read more on ದಟ್ಸನ್ datsun
English summary
Discounts available on Datsun cars in March. Read in Kannada.
Story first published: Wednesday, March 3, 2021, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X