ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟವು ನಿಧಾನವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ವರ್ಷಕ್ಕಿಂತಲೂ ಇದೀಗ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ಕಾರುಗಳ ಮಾರಾಟವು ದಾಖಲಾಗಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ದೇಶಿಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ನೆಕ್ಸಾನ್, ಎಂಜಿ ಜೆಡ್ಎಸ್ ಎಲೆಕ್ಟ್ರಿಕ್, ಟಾಟಾ ಟಿಗೋರ್ ಇವಿ ಮತ್ತು ಹ್ಯುಂಡೈ ಕೊನಾ ಕಾರುಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇದು ಶೇ. 1ರಷ್ಟಿಲ್ಲವಾದರೂ ಇತ್ತೀಚೆಗೆ ಇವಿ ವಾಹನ ಖರೀದಿದಾರರ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಟಾಟಾ ನೆಕ್ಸಾನ್ ಇವಿ ಪ್ರಥಮ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಎಂಜಿ ಜೆಡ್ಎಸ್, ಮೂರನೇ ಸ್ಥಾನದಲ್ಲಿ ಟಾಟಾ ಟಿಗೋರ್ ಮತ್ತು ನಾಲ್ಕನೇ ಸ್ಥಾನದಲ್ಲಿ ಹ್ಯುಂಡೈ ಕೊನಾ ಮಾರಾಟಗೊಳ್ಳುತ್ತಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ಏಪ್ರಿಲ್‌ನಲ್ಲಿ 525 ಯುನಿಟ್ ನೆಕ್ಸಾನ್ ಇವಿ ಮತ್ತು 56 ಯುನಿಟ್ ಟಿಗೋರ್ ಇವಿ ಮಾರಾಟಗೊಳಿಸಿದ್ದು, ಕಳೆದ ಜನವರಿಯಿಂದ ನೆಕ್ಸಾನ್ ಇವಿ ಮಾರಾಟದಲ್ಲಿ ಪ್ರತಿ ತಿಂಗಳು 500 ಯುನಿಟ್ ಮಾರಾಟಗೊಳ್ಳುತ್ತಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಇವಿ ವಾಹನಗಳ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ತಂತ್ರಜ್ಞಾನ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನಗಳ ಮೇಲೆ ಗರಿಷ್ಠ ಎಂಟು ವರ್ಷಗಳ ವಾರಂಟಿ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.16.56 ಲಕ್ಷ ಬೆಲೆ ಪಡೆದುಕೊಂಡಿದೆ. ಎ‍ಆರ್‌ಎಐ ಪ್ರಮಾಣೀಕರಿಸಿರುವಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಇಕೋ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಇನ್ನು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಎಂಜಿ ಮೋಟಾರ್ ನಿರ್ಮಾಣದ ಜೆಡ್ಎಸ್ ಇವಿ ಕೂಡಾ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಏಪ್ರಿಲ್ ಅವಧಿಯಲ್ಲಿ 156 ಯನಿಟ್ ಮಾರಾಟಗೊಂಡಿದೆ. ಜೆಡ್ಎಸ್ ಇವಿ ಕಾರು ಬಿಡುಗಡೆಗೊಂಡ ಮೊದಲ ವರ್ಷದ ಅವಧಿಯಲ್ಲಿ ಒಟ್ಟು 1 ಸಾವಿರ ಯುನಿಟ್ ಮಾರಾಟಗೊಂಡಿದ್ದು, ಇದೀಗ 2021ರ ಆವೃತ್ತಿಯ ಮೂಲಕ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್‌ನಲ್ಲಿ ಮಾರಾಟಗೊಳ್ಳುತ್ತಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಎಂಜಿ ಮೋಟಾರ್ ಕಂಪನಿಯು ಜೆಡ್ಎಸ್ ಇವಿ ಕಾರು ಮಾದರಿಯನ್ನು ಮೊದಲ ಬಾರಿಗೆ 2020ರ ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಿದ್ದ ಸಂದರ್ಭದಲ್ಲಿ 44.5 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತಿತ್ತು.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಆದರೆ ಇದೀಗ 2021ರ ಜೆಡ್ಎಸ್ ಇವಿ ಮಾದರಿಯಲ್ಲಿ ಈ ಹಿಂದಿನ 44.5 kWh ಬ್ಯಾಟರಿ ಪ್ಯಾಕ್‌ ಮಾದರಿಯನ್ನೇ ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗಿದ್ದು, ಪ್ರಸ್ತುತ ಮಾದರಿಯು ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹೊಂದಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20,99,800 ಮತ್ತು ಟಾಪ್ ಎಂಡ್ ಮಾದರಿಗೆ ರೂ. 24,18,000 ಬೆಲೆ ಹೊಂದಿದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಇನ್ನು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಕೊನೆಯ ಸ್ಥಾನದಲ್ಲಿರುವ ಹ್ಯುಂಡೈ ಕೊನಾ ಇವಿ ಕಾರು ಮಾದರಿಯು ಎಪ್ರಿಲ್ ಅವಧಿಯಲ್ಲಿ 12 ಯುನಿಟ್ ಮಾರಾಟಗೊಂಡಿದ್ದು, ಕೊನಾ ಇವಿ ಕಾರು ಬಿಡುಗಡೆಗೊಂಡ ನಂತರ ಇದುವರೆಗೆ 140 ಯುನಿಟ್ ಮಾತ್ರ ಮಾರಾಟಗೊಂಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಮಾರುಕಟ್ಟೆಯಲ್ಲಿರುವ ಪ್ರತಿ ಸ್ಪರ್ಧಿ ಮಾದರಿಗಳಿಂತಲೂ ತುಸ ದುಬಾರಿಯಾದರೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಜೊತೆಗೆ ಹೆಚ್ಚಿನ ಮಟ್ಟದ ಬ್ಯಾಟರಿ ರೇಂಜ್ ಹೊಂದಿರುವ ಕೊನಾ ಇವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷ ಬೆಲೆ ಹೊಂದಿದೆ. ಕೊನಾ ಇವಿ ಕಾರಿನಲ್ಲಿ 39.2kWh ಬ್ಯಾಟರಿ ಜೋಡಣೆ ಮಾಡಲಾಗಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ನೆಕ್ಸಾನ್ ಇವಿ

ಇನ್ನುಳಿದಂತೆ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಟಿಗೋರ್ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಎಲೆಕ್ಟ್ರಿಕ್ ವಾಹನ ನೀತಿ ನಂತರ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದೆ. ಜೊತೆಗೆ ಹೆಚ್ಚುತ್ತಿರುವ ಇಂಧನ ಬೆಲೆ ಪರಿಣಾಮದಿಂದಲೂ ತತ್ತರಿಸಿರುವ ವಾಹನ ಮಾಲೀಕರು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.

Most Read Articles

Kannada
English summary
Electric Car Sales In India In April 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X