Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

Ford ಕಂಪನಿಯು ಇತ್ತೀಚಿಗಷ್ಟೇ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಕಂಪನಿಯ ಈ ನಿರ್ಧಾರವು ದಶಕಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ ತಮಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು Ford ಕಂಪನಿಯ ಉದ್ಯೋಗಿಗಳು ಹೇಳಿದ್ದಾರೆ. 2022 ರ ಎರಡನೇ ತ್ರೈಮಾಸಿಕದ ನಂತರ ಉತ್ಪಾದನಾ ಘಟಕವನ್ನು ಮುಚ್ಚಲಾಗುವುದು ಎಂದು Ford ಕಂಪನಿ ಹೇಳಿದೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಆದರೆ ತಮಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೆಂದು Ford ಕಂಪನಿಯ ನೌಕರರ ಸಂಘದ ಖಜಾಂಚಿ ತಿಳಿಸಿದ್ದಾರೆ. ಸೆಪ್ಟೆಂಬರ್ 9ರ ಮಧ್ಯಾಹ್ನ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. Ford India ಎಂಡಿ ಅನುರಾಗ್ ಮೆಹ್ರೋತ್ರಾ ರವರು ನೌಕರರ ಒಕ್ಕೂಟಕ್ಕೆ ಕರೆ ಮಾಡಿ ಈ ಉತ್ಪಾದನಾ ಘಟಕವನ್ನು ಮುಚ್ಚಲಾಗುವುದು ಎಂದು ತಿಳಿಸಿದರು. Ford ಕಂಪನಿಯ ಈ ನಿರ್ಧಾರವು ಕಂಪನಿಯ ಉದ್ಯೋಗಿಗಳಿಗೆ ಅಚ್ಚರಿಯ ಜೊತೆಗೆ ಆತಂಕವನ್ನುಂಟು ಮಾಡಿದೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಕಂಪನಿಯ ಈ ನಿರ್ಧಾರವು Ford ಕಂಪನಿಯ ಉದ್ಯೋಗಿಗಳು ಹಾಗೂ ಚೆನ್ನೈ ಮೂಲದ ನೂರಾರು ಗುತ್ತಿಗೆ ನೌಕರರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಒಟ್ಟು 4,000 ಉದ್ಯೋಗಿಗಳು ಇದರಿಂದ ಪ್ರಭಾವಿತರಾಗಲಿದ್ದಾರೆ. ಅವರಲ್ಲಿ 46 ವರ್ಷ ವಯಸ್ಸಿನ ನೌಕರರ ಸಂಘದ ಖಜಾಂಚಿಯು ಸಹ ಸೇರಿದ್ದಾರೆ. ಅವರು ಹಲವು ವರ್ಷಗಳಿಂದ Ford ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಅವರು 1998 ರಲ್ಲಿ ಚೆನ್ನೈನ ಉತ್ಪಾದನಾ ಘಟಕದಲ್ಲಿ ಪ್ರೊಡಕ್ಷನ್ ಲೈನ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿದರು. ಈಗ ಅವರ ಜೊತೆಗೆ ಸಾವಿರಾರು ಉದ್ಯೋಗಿಗಳ ಭವಿಷ್ಯವು ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಮಾತನಾಡಿದ ಅವರು Ford ಉತ್ತಮ ಕಂಪನಿಯಾಗಿದೆ. ತಮಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗುತ್ತಿತ್ತು. ಜೊತೆಗೆ ಕೇಳಿದಾಗಲೆಲ್ಲಾ ರಜೆ ನೀಡಲಾಗುತ್ತಿತ್ತು.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನೌಕರರು ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡದಂತೆ ಕಂಪನಿಯ ಆಡಳಿತ ಮಂಡಳಿ ನೋಡಿ ಕೊಂಡಿತ್ತು. Ford ಕಂಪನಿಯಲ್ಲಿ ಕೆಲಸ ಮಾಡುವುದು ಒಳ್ಳೆಯ ಅನುಭವ ಎಂದು ಹೇಳಿದರು. ಈಗ ಕಂಪನಿಯು ಇದ್ದಕ್ಕಿದ್ದಂತೆ ಮುಚ್ಚುತ್ತಿದೆ. ಇದರಿಂದ ತಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲವೆಂದು ಅವರು ಹೇಳಿದರು.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಚೆನ್ನೈನ Ford ನೌಕರರ ಸಂಘದ ಅಧ್ಯಕ್ಷರು ಶೀಘ್ರದಲ್ಲಿಯೇ ಸಾಮಾನ್ಯ ಸಭೆಯನ್ನು ಕರೆಯಲಿದ್ದು, ಇತ್ಯರ್ಥದ ಬಗ್ಗೆ ಚರ್ಚಿಸಿ ನಂತರ ಆಡಳಿತ ಮಂಡಳಿಯೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಉದ್ಯೋಗಿಗಳಿಗೆ ಕೆಲಸ ಹಾಗೂ ಸರಿಯಾದ ಪರಿಹಾರವನ್ನು ಒದಗಿಸುವುದು ನೌಕರರ ಸಂಘದ ಜವಾಬ್ದಾರಿ ಎಂದು ಅವರು ಹೇಳಿದರು.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಹುಡುಕುವುದು ತುಂಬಾ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿಯೇ Ford ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದೆ. ಇತರ ಕಂಪನಿಗಳೊಂದಿಗೆ ಪಾಲುದಾರಿಕೆ, ಪ್ಲಾಟ್ ಫಾರಂ ಹಂಚಿಕೆ ಹಾಗೂ ಗುತ್ತಿಗೆ ಉತ್ಪಾದನೆಯ ಆಯ್ಕೆಯನ್ನು ಚರ್ಚಿಸಿದ ನಂತರ ಈ ನಿರ್ಧಾರ ತೆಗೆದು ಕೊಂಡಿರುವುದಾಗಿ Ford ಕಂಪನಿ ತಿಳಿಸಿದೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

Ford ಕಂಪನಿಯು ತನ್ನ ಉತ್ಪಾದನಾ ಘಟಕಗಳನ್ನು ಮಾರಾಟ ಮಾಡುವ ಆಯ್ಕೆಗಳ ಇನ್ನೂ ಪರಿಶೀಲನೆ ನಡೆಸುತ್ತಿದೆ. Ford ಕಂಪನಿಯ ಈ ನಿರ್ಧಾರವು ಉದ್ಯೋಗಿಗಳ ಮೇಲೆ ಮಾತ್ರವಲ್ಲದೆ ಡೀಲರ್‌ಗಳ ಮೇಲೂ ಪರಿಣಾಮ ಬೀರಲಿದೆ. ಜೊತೆಗೆ ಸಣ್ಣ ಕೈಗಾರಿಕೆಗಳು ಹಾಗೂ ಬಿಡಿ ಭಾಗಗಳ ಪೂರೈಕೆದಾರರ ಮೇಲೂ ಪರಿಣಾಮ ಬೀರಲಿದೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಈ ಕುರಿತು ಮಾತನಾಡಿದ ಫಾಡಾ ಅಧ್ಯಕ್ಷರಾದ ವಿಂಕೇಶ್ ಗುಲಾಟಿ ರವರು, Ford ಕಂಪನಿಯು ವಿತರಕರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಲಿದೆ ಹಾಗೂ ಈಗ ಇರುವ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ ಎಂದು ಹೇಳಿದರು.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಕಂಪನಿಯ ಡೀಲರ್‌ಗಳು ಈಗ ತಮ್ಮ ಬಳಿ ಪ್ರಸ್ತುತ ಸುಮಾರು ರೂ. 150 ಕೋಟಿ ಮೌಲ್ಯದ 1,000 ವಾಹನಗಳನ್ನು ಹಾಗೂ ನೂರಾರು ಡೆಮೊ ವಾಹನಗಳನ್ನು ಹೊಂದಿದ್ದಾರೆ. ಅವರು ಈ ವಾಹನಗಳನ್ನು ಏನು ಮಾಡಬೇಕೆಂದು ತೋಚದೇ ಕಂಗಾಲಾಗಿದ್ದಾರೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

Ford ಭಾರತದಲ್ಲಿ 170 ಡೀಲರ್‌ಗಳನ್ನು ಸೇರಿದಂತೆ ಒಟ್ಟು 391 ಡೀಲರ್‌ಶಿಪ್‌ಗಳನ್ನು ಹೊಂದಿದೆ. ಡೀಲರ್‌ಶಿಪ್‌ಗಳನ್ನು ಸ್ಥಾಪಿಸಲು ಕಂಪನಿಯು ಸುಮಾರು ರೂ. 2000 ಕೋಟಿಗಳಷ್ಟು ಹೂಡಿಕೆ ಮಾಡಿದೆ. ವಿವಿಧ ನಗರಗಳಿಂದ ಬಂದಿರುವ ಈ ಡೀಲರ್‌ಶಿಪ್‌ಗಳೊಂದಿಗೆ ನೇರವಾಗಿ ಹಾಗೂ ಪರೋಕ್ಷವಾಗಿ 40,000 ಜನರು ಸಂಪರ್ಕ ಹೊಂದಿದ್ದಾರೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

Ford ಕಂಪನಿಯ ನಿರ್ಧಾರದಿಂದ ಅವರು 2 ಬಿಲಿಯನ್ ಡಾಲರ್ ಕಳೆದುಕೊಳ್ಳಲಿದ್ದಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. Ford ಕಂಪನಿಯ ಈ ನಿರ್ಧಾರವು ಸಾವಿರಾರು ಉದ್ಯೋಗಿಗಳನ್ನು ಅಪಾಯಕ್ಕೆ ಸಿಲುಕಿಸಿದೆ. ದೇಶದಲ್ಲಿ ಕೋವಿಡ್‌ನಿಂದಾಗಿ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆ.

Ford ಕಂಪನಿಯ ನಿರ್ಧಾರದಿಂದ ಅತಂತ್ರಕ್ಕೆ ಸಿಲುಕಿದ ಉದ್ಯೋಗಿಗಳು

ಕಂಪನಿಯ ಈ ನಿರ್ಧಾರವು ಉದ್ಯೋಗಿಗಳನ್ನು ಅತಂತ್ರಕ್ಕೆ ಸಿಲುಕಿಸಿದೆ. ಕೇಂದ್ರ ಸರ್ಕಾರ ಅಥವಾ ಸಂಬಂಧ ಪಟ್ಟ ರಾಜ್ಯ ಸರ್ಕಾರಗಳು ಈ ಉದ್ಯೋಗಿಗಳ ಭವಿಷ್ಯದ ಬಗ್ಗೆ ಯಾವುದಾದರೂ ನಿರ್ಧಾರವನ್ನು ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಂದ ಹಾಗೆ Ford ಕಂಪನಿಯು 1990ರ ದಶಕದಿಂದ ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿತ್ತು. ಕಂಪನಿಯ ಕಾರುಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದೇ ನಷ್ಟು ಅನುಭವಿಸಿದ ಹಿನ್ನೆಲೆಯಲ್ಲಿ Ford ಕಂಪನಿಯು ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದೆ.

Most Read Articles

Kannada
Read more on ಫೋರ್ಡ್ ford
English summary
Employees face uncertainty after ford company s decision details
Story first published: Sunday, September 12, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X