ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು, ಗ್ರಾಹಕರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು, ಸರ್ಕಾರಗಳು ನೀಡುತ್ತಿರುವ ಸಬ್ಸಿಡಿಗಳು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಜನಪ್ರಿಯವಾಗಿಸುವ ಕೆಲವು ಪ್ರಮುಖ ಅಂಶಗಳಾಗಿವೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಇದರ ಜೊತೆಗೆ ಅಗ್ಗವಾಗಿರುವ ಬ್ಯಾಟರಿ ಬ್ಯಾಟರಿ ಬೆಲೆಗಳು ಸಹ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ನೆರವಾಗುತ್ತಿವೆ. ಆದರೆ ಬ್ಯಾಟರಿ ಬೆಲೆ ಕುಸಿತವು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಅಕ್ಷರಶಃ ನಿಜ. BloombergNEF ತನ್ನ ವಾರ್ಷಿಕ ಬ್ಯಾಟರಿ ವರದಿಯಲ್ಲಿ ಪ್ರತಿ ಕಿ.ವ್ಯಾ ಬ್ಯಾಟರಿಯ ಸರಾಸರಿ ಬೆಲೆ ಕಳೆದ ವರ್ಷ 140 ಡಾಲರ್ ನಿಂದ 132 ಡಾಲರ್'ಗೆ ಹಾಗೂ 2010 ರಲ್ಲಿ 1,200 ಡಾಲರ್'ವರೆಗೆ ಕುಸಿದಿದೆ ಎಂದು ಹೇಳಿದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗುವ ಬ್ಯಾಟರಿಗಳ ಬೆಲೆ ಪ್ರತಿ ಕಿ.ವ್ಯಾಗೆ ಸರಾಸರಿ 118 ಡಾಲರ್ ಗಳಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಲಿಥಿಯಂ ಬೆಲೆ ಹಾಗೂ ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ಬೆಲೆಗಳಿಂದ ಮುಂಬರುವ ವರ್ಷ ಬ್ಯಾಟರಿಗಳ ಬೆಲೆ ದುಬಾರಿಯಾಗಬಹುದು ಎಂಬುದರ ಸಂಭಾವ್ಯ ಸೂಚನೆಯಾಗಿದೆ ಎಂಬುದು ಗಮನಾರ್ಹ. ಬ್ಯಾಟರಿಗಳ ಬೆಲೆ ಎಲೆಕ್ಟ್ರಿಕ್ ವಾಹನಗಳ ಬೆಲೆಯ ಭಾಗವಾಗಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಸಹ ಹೆಚ್ಚಾಗಬಹುದು.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಈ ಬಗ್ಗೆ ಮಾತನಾಡಿರುವ BNED ವರದಿಯ ಪ್ರಮುಖ ಲೇಖಕ ಜೇಮ್ಸ್ ಫ್ರಿತ್, 2021 ರಲ್ಲಿ ಬ್ಯಾಟರಿ ಬೆಲೆಗಳು ಒಟ್ಟಾರೆಯಾಗಿ ಕುಸಿದಿದ್ದರೂ, ವರ್ಷದ ದ್ವಿತೀಯಾರ್ಧದಲ್ಲಿ ಬೆಲೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ. ಇದು ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಕಷ್ಟಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಅದರಲ್ಲೂ ವಿಶೇಷವಾಗಿ ಯುರೋಪ್'ನಲ್ಲಿ ಸರಾಸರಿ ಫ್ಲೀಟ್ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಬೇಕಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಅಭಿವೃದ್ಧಿಶೀಲ ಪರಿಸ್ಥಿತಿಯನ್ನು ವಾಹನ ತಯಾರಕ ಕಂಪನಿಗಳು ಹೇಗೆ ಎದುರಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಇವಿ ತಯಾರಕ ಕಂಪನಿಗಳು ಬೆಲೆ ಹೆಚ್ಚಳವನ್ನು ತಡೆಯಲು ಕೆಲವು ಆಯ್ಕೆಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಲಾಭದ ಪ್ರಮಾಣವನ್ನು ಕಡಿತಗೊಳಿಸಿ ಅಥವಾ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದು ಸೇರಿದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾದರೆ ಗ್ರಾಹಕರು ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸದೇ ಇರುವ ಸಾಧ್ಯತೆಗಳಿರುತ್ತವೆ. ಟೆಸ್ಲಾ, ಮರ್ಸಿಡಿಸ್ ಬೆಂಝ್, ಫೋಕ್ಸ್‌ವ್ಯಾಗನ್‌, ರೆನಾಲ್ಟ್, ಟೊಯೊಟಾ, ಹ್ಯುಂಡೈ, ಜಿಎಂ ಹಾಗೂ ನಿಸ್ಸಾನ್‌ ಸೇರಿದಂತೆ ಹಲವು ಕಾರು ತಯಾರಕ ಕಂಪನಿಗಳು ಈಗಾಗಲೇ ತಮ್ಮ ಎಲೆಕ್ಟ್ರಿಕ್ ವಾಹನಗಳ ಮಹತ್ವಾಕಾಂಕ್ಷೆಗಳ ಬಗ್ಗೆ ಸ್ಪಷ್ಟಪಡಿಸಿವೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಎಲೆಕ್ಟ್ರಿಕ್ ವಾಹನಗಳು ಈಗ ಹೊಂದಿರುವ ಬೆಲೆಯಲ್ಲಿಯೇ ವಾಹನಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಲಿಥಿಯಂ ಐಯಾನ್ ಬ್ಯಾಟರಿಗಳ ಬೆಲೆ ಏರಿಕೆಯ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾದರೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದೆ ಬರುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಭಾರತದ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಭಾರತೀಯ ಆಟೋಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ಕಾರುಗಳ ಮಾರಾಟದ ವಿಷಯದಲ್ಲಿ ತುಸು ಹಿಂದುಳಿದಿದೆ ಎಂದೇ ಹೇಳಬಹುದು. ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಹಲವಾರು ಕಾರಣಗಳಿವೆ. ಆದರೆ ಎಲೆಕ್ಟ್ರಿಕ್ ಕಾರುಗಳನ್ನು ಏಕೆ ಖರೀದಿಸ ಬೇಕು ಎಂಬುದನ್ನು ನೋಡುವುದಾದರೆ...

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಎಲೆಕ್ಟ್ರಿಕ್ ವಾಹನಗಳು ಎಲೆಕ್ಟ್ರಿಕ್ ಮೂಲಕ ಚಾರ್ಜ್ ಆಗುವುದರಿಂದ, ಇಂಧನ ಬೆಲೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಭಾರತದಲ್ಲಿರುವ ಕೆಲವು ಎಲೆಕ್ಟ್ರಿಕ್ ಕಾರುಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 300 ಕಿ.ಮೀಗಳಿಗಿಂತ ಹೆಚ್ಚು ದೂರ ಚಲಿಸುತ್ತವೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಇನ್ನು ಕೆಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪೂರ್ತಿಯಾಗಿ ಆಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತವೆ. ಪೆಟ್ರೋಲ್, ಡೀಸೆಲ್ ವಾಹನಗಳಲ್ಲಿ ಒಂದು ಕಿ.ಮೀ ಚಲಿಸಲು ರೂ. 9 ಖರ್ಚು ಮಾಡಬೇಕು. ಆದರೆ ಎಲೆಕ್ಟ್ರಿಕ್ ವಾಹನಗಳಲ್ಲಿ ಪ್ರತಿ ಕಿ.ಮೀ ಸಂಚರಿಸಲು ಒಂದು ರೂಪಾಯಿ ಖರ್ಚಾಗುತ್ತದೆ. ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲು ಕಾರಣವೆಂದರೆ ಅವುಗಳ ನಿರ್ವಹಣಾ ವೆಚ್ಚ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳಿಗಿಂತ ಕಡಿಮೆ ಯಾಂತ್ರಿಕ ಭಾಗಗಳನ್ನು ಹೊಂದಿದ್ದು, ಅವುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇವಿ ತಯಾರಕ ಕಂಪನಿಗಳನ್ನು ಸಹ ಪ್ರೋತ್ಸಾಹಿಸುತ್ತಿದೆ. ದೇಶದ ಹಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಗಳನ್ನು ಜಾರಿಗೊಳಿಸಿವೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಈ ಎಲೆಕ್ಟ್ರಿಕ್ ವಾಹನ ನೀತಿಗಳ ಅನ್ವಯ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಣಕಾಸು ಸಬ್ಸಿಡಿ, ಸಾಲದ ಮೇಲೆ ಕಡಿಮೆ ಬಡ್ಡಿ ದರ, ರಸ್ತೆ ತೆರಿಗೆಯಿಂದ ವಿನಾಯಿತಿ, ನೋಂದಣಿ ಶುಲ್ಕದಿಂದ ವಿನಾಯಿತಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಾಗುತ್ತದೆ. ಇವಿ ಬಳಕೆಯಿಂದ ಜನ ದಟ್ಟಣೆ ಸಂದರ್ಭಗಳಲ್ಲಿ ವಾಹನಕ್ಕೆ ಇಂಧನ ತುಂಬಿಸಲು ಸರತಿ ಸಾಲಿನಲ್ಲಿ ಕಾಯುವುದು ತಪ್ಪುತ್ತದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಇವಿ ಮಾಲೀಕರು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ತಮ್ಮ ವಾಹನಗಳನ್ನು ಆರಾಮವಾಗಿ ಚಾರ್ಜ್ ಮಾಡಬಹುದು. ನಂತರ ವಾಹನ ಚಾಲನೆ ಮಾಡಿಕೊಂಡು ಹೋಗಬಹುದು. ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಿದಂತೆ ಕಡಿಮೆ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡುವ ಸುಧಾರಿತ ತಂತ್ರಜ್ಞಾನವನ್ನು ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಟ್ರಾಫಿಕ್‌ನಲ್ಲಿ ದೀರ್ಘಕಾಲ ಸಿಕ್ಕಿಹಾಕಿಕೊಳ್ಳುವುದರಿಂದ ಹಾಗೂ ಪದೇ ಪದೇ ಗೇರ್ ಬದಲಾಯಿಸುವುದರಿಂದ ಹಲವರಿಗೆ ಒಮ್ಮೆಯಾದರೂ ಗೇರ್‌ಲೆಸ್ ವಾಹನವೇ ಒಳ್ಳೆಯದು ಎಂಬ ಅಭಿಪ್ರಾಯ ಬರಬಹುದು. ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರ್ ಸೇರಿದಂತೆ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ಗೇರ್ ರಹಿತವಾಗಿವೆ. ವಾಹನ ಚಾಲನೆ ಮಾಡುವ ಆರಂಭಿಕರಿಗೆ ಎಲೆಕ್ಟ್ರಿಕ್ ವಾಹನಗಳು ಸೂಕ್ತ ಆಯ್ಕೆಯಾಗಿವೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಮುಂದಿನ ವರ್ಷ ಏರಿಕೆಯಾಗುವ ಸಾಧ್ಯತೆ?!

ಎಲೆಕ್ಟ್ರಿಕ್ ವಾಹನಗಳು ಸಾಂಪ್ರದಾಯಿಕ ಪೆಟ್ರೋಲ್ / ಡೀಸೆಲ್ ಕಾರುಗಳಿಗಿಂತ ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳು ಕೆಳಗೆ ಬೀಳುವ ಸಾಧ್ಯತೆಗಳು ಕಡಿಮೆ. ಎಲೆಕ್ಟ್ರಿಕ್ ವಾಹನಗಳಲ್ಲಿ ದೋಷ ಕಂಡು ಬಂದರೆ, ವಿದ್ಯುತ್ ಹರಿವು ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ev price could increase next year details
Story first published: Wednesday, December 1, 2021, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X