ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಭಾರತೀಯ ಮೂಲದ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಶೀಘ್ರದಲ್ಲೇ ತನ್ನ ಹೊಸ ಶಕ್ತಿಯುತ ಎಕ್ಸ್‌ಯುವಿ 700 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಎಸ್‌ಯುವಿಯನ್ನು ಬಿಡುಗಡೆ ಮಾಡುವ ಮೊದಲು ಸಾಕಷ್ಟು ಪ್ರಚಾರ ಮಾಡುತ್ತಿದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಇದರ ಜೊತೆಗೆ ಈ ಎಸ್‌ಯುವಿಯಲ್ಲಿರುವ ಫೀಚರ್'ಗಳ ಬಗ್ಗೆಯೂ ಮಾಹಿತಿ ನೀಡುತ್ತಿದೆ. ಈ ಎಸ್‌ಯುವಿಯು ತನ್ನ ಸೆಗ್ ಮೆಂಟಿನಲ್ಲಿಯೇ ಅತಿ ಹೆಚ್ಚು ಫೀಚರ್'ಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಎಸ್‌ಯುವಿಯಲ್ಲಿರುವ ಫೀಚರ್'ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ವಿನ್ಯಾಸ

ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯನ್ನು ಈಗಾಗಲೇ ಹಲವು ಬಾರಿ ಪರೀಕ್ಷಿಸಲಾಗಿದೆ. ಇದರ ವಿನ್ಯಾಸವು ಎಕ್ಸ್‌ಯುವಿ 500 ಎಸ್‌ಯುವಿಯನ್ನು ಆಧರಿಸಿದೆ. ಈ ಎಸ್‌ಯುವಿಯು ಮಹೀಂದ್ರಾ ಕಂಪನಿಯ ಅತ್ಯಂತ ಆಧುನಿಕ ವಿನ್ಯಾಸದ ಎಸ್‌ಯುವಿಯಾಗಿರಲಿದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಎಕ್ಸ್‌ಯುವಿ 700 ನ ಮುಂಭಾಗದ ವಿನ್ಯಾಸವು ಎಕ್ಸ್‌ಯುವಿ 500 ನ ಲುಕ್ ಹೊಂದಿದೆ. ಆದರೆ ಇದು ಸಂಪೂರ್ಣವಾಗಿ ಹೊಸ ನೋಟ ಹಾಗೂ ಶೈಲಿಯಲ್ಲಿದೆ. ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಫಾಗ್‌ಲ್ಯಾಂಪ್ ಹಾಗೂ ಎಲ್‌ಇಡಿ ಟೇಲ್ ಲೈಟ್ ಅನ್ನು ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿ ನೀಡುವ ಸಾಧ್ಯತೆಗಳಿವೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಫೀಚರ್'ಗಳು

ಮಾಹಿತಿಗಳ ಪ್ರಕಾರ ಎಕ್ಸ್‌ಯುವಿ 700 ತನ್ನ ಸೆಗ್ ಮೆಂಟಿನಲ್ಲಿ ಮರ್ಸಿಡಿಸ್ ಬೆಂಝ್'ನಿಂದ ಸ್ಫೂರ್ತಿ ಪಡೆದ ಡ್ಯುಯಲ್ ಡಿಸ್ ಪ್ಲೇ ಸೆಟಪ್ ಹೊಂದಿರುವ ಮೊದಲ ಎಸ್‌ಯುವಿಯಾಗಲಿದೆ. ಈ ಡಿಸ್ ಪ್ಲೇ ಇನ್ಫೋಟೇನ್ಮೆಂಟ್ ಸಿಸ್ಟಂ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿ ಕಾರ್ಯನಿರ್ವಹಿಸಲಿದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕೀಲೆಸ್ ಎಂಟ್ರಿ, ಪುಶ್ ಸ್ಟಾರ್ಟ್ / ಸ್ಟಾಪ್ ಬಟನ್'ಗಳನ್ನು ನೀಡಲಿದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಇದರ ಜೊತೆಗೆ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್‌, ಸ್ಮಾರ್ಟ್ ಡೋರ್ ಹ್ಯಾಂಡಲ್‌, ದೊಡ್ಡ ಪನೋರಾಮಿಕ್ ಸನ್‌ರೂಫ್, ಪರ್ಸನಲ್ ಅಲರ್ಟ್, ಡ್ರೈವರ್ ಡ್ರೈನೆಸ್ ಅಲರ್ಟ್ ಸಿಸ್ಟಂ ಸೇರಿದಂತೆ ಕೆಲವು ಹೊಸ ಫೀಚರ್'ಗಳನ್ನು ಈ ಎಸ್‌ಯುವಿಯಲ್ಲಿ ನೀಡಲಾಗುತ್ತದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಎಕ್ಸ್‌ಯುವಿ 700 ಎಸ್‌ಯುವಿಯು 80 ಕಿ.ಮೀ ವೇಗವನ್ನು ತಲುಪಿದಾಗ ಆಟೋಬೂಸ್ಟರ್ ಹೆಡ್‌ಲ್ಯಾಂಪ್‌ಗಳು ಆಟೋಮ್ಯಾಟಿಕ್ ಆಗಿ ಆನ್ ಆಗುತ್ತವೆ. ಇದರಿಂದ ಕತ್ತಲು ಇರುವ ದಾರಿಯಲ್ಲಿ ಹೆಚ್ಚು ಬೆಳಕನ್ನು ನೀಡಲು ಸಾಧ್ಯವಾಗುತ್ತದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಮಹೀಂದ್ರಾ ಎಕ್ಸ್‌ಯುವಿ 700 ಈ ಸೆಗ್ ಮೆಂಟಿನಲ್ಲಿ ಸ್ಮಾರ್ಟ್ ಡೋರ್ ಹ್ಯಾಂಡಲ್ ಪಡೆಯುವ ಮೊದಲ ಎಸ್‌ಯುವಿಯಾಗಿರಲಿದೆ. ಇದರ ಜೊತೆಗೆ ಈ ಎಸ್‌ಯುವಿಯು ಈ ಸೆಗ್ ಮೆಂಟಿನಲ್ಲಿಯೇ ಅತಿ ದೊಡ್ಡ ಸನ್‌ರೂಫ್ ಅನ್ನು ಪಡೆಯಲಿದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಮಹೀಂದ್ರಾ ಎಕ್ಸ್‌ಯುವಿ 700 ನಿರ್ದಿಷ್ಟ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿದರೆ ಚಾಲಕನು ತನ್ನ ಪ್ರೀತಿಪಾತ್ರರ ಧ್ವನಿಯಲ್ಲಿ ಸ್ಪೀಡ್ ಅಲರ್ಟ್ ಪಡೆಯುತ್ತಾನೆ. ಈಫೀಚರ್ ಚಾಲಕರನ್ನು ಅಪಘಾತಗಳಿಂದ ಉಳಿಸಲು ನೆರವಾಗುತ್ತದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಹೊಸ ಎಕ್ಸ್‌ಯುವಿ 700 ಈ ಸೆಗ್ ಮೆಂಟಿನಲ್ಲಿ ಲೆವೆಲ್ 1 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಪಡೆಯುತ್ತಿರುವ ಮೊದಲ ಎಸ್‌ಯುವಿಯಾಗಿದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಬ್ಲೈಂಡ್‌ಸ್ಪಾಟ್ ಡಿಟೆಕ್ಷನ್, ಅಟನಾಮಸ್ ಬ್ರೇಕಿಂಗ್ ಹಾಗೂ ಲೇನ್-ಲೀಪ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್'ಗಳನ್ನು ನೀಡಲಾಗುತ್ತದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಎಂಜಿನ್

ಎಕ್ಸ್‌ಯುವಿ 700 ಎಸ್‌ಯುವಿಯನ್ನು ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಈ ಎಸ್‌ಯುವಿಯಲ್ಲಿ ಅಳವಡಿಸುವ 2.2 ಲೀಟರ್ ಡೀಸೆಲ್ ಎಂಜಿನ್ 153 ಬಿಹೆಚ್‌ಪಿ ಪವರ್ ಹಾಗೂ 360 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಇನ್ನು 2.0 ಲೀಟರ್ ಎಂ ಸ್ಟಾಲಿಯನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 380 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನ್ಯುಯಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳಲ್ಲಿ ಆಲ್ ವ್ಹೀಲ್ ಡ್ರೈವ್ ಅಥವಾ 4 ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಈ ಎಸ್‌ಯುವಿಯೊಂದಿಗೆ ನೀಡಲಾಗುವುದು.

ಬಹು ನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿರುವ ಫೀಚರ್'ಗಳಿವು

ಬಿಡುಗಡೆಯಾದ ನಂತರ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯು ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಹಾಗೂ ಹ್ಯುಂಡೈ ಅಲ್ಕಾಜರ್'ಗಳಿಗೆ ಪೈಪೋಟಿ ನೀಡಲಿದೆ. ಎಕ್ಸ್‌ಯುವಿ 700 ಎಸ್‌ಯುವಿಯ ಬೆಲೆ ರೂ.15 ಲಕ್ಷಗಳಿಂದ ರೂ.24 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Features available in most expected Mahindra XUV 700 SUV. Read in Kannada.
Story first published: Friday, July 23, 2021, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X