ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫಿಯೆಟ್ ಹೊಸ ಪಲ್ಸ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಈ ವರ್ಷದ ಆರಂಭದಲ್ಲಿ ಅನಾವರಣಗೊಳಿಸಿತು. ಇದೀಗ ಫಿಯಟ್ ಕಂಪನಿಯು ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಕ್ಲೀನ್ ಮತ್ತು ಕನಿಷ್ಠ ಕ್ಯಾಬಿನ್ ಲೇಔಟ್ ಅನ್ನು ಹೊಂದಿದ್ದು, ಹಲವು ವೈಶಿಷ್ಟ್ಯಗಳು ಮತ್ತು ಸಲಕರಣೆಗಳನ್ನು ಹೊಂದಿದೆ. ಕಾಂಪ್ಯಾಕ್ಟ್ ಎಸ್‌ಯುವಿಯ ಕ್ಯಾಬಿನ್ 7.0 ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 10.1 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಪಲ್ ಕಾರ್ ಪ್ಲೇ ಮತು ಆಡ್ಯಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಹೊಂದಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಸ್ಟೀಯರಿಂಗ್ ವೀಲ್‌ನಲ್ಲಿ ಸ್ಪೋರ್ಟ್' ಬಟನ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಇನ್ನು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ, ಫಿಯೆಟ್ ಪಲ್ಸ್ ಅನ್ನು ಎಫ್‌ಸಿಎಯ ಹೊಸ ಎಂಎಲ್‌ಎ ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿ ಪಡಿಸಲಾಗಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಈ ಹೊಸ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಎಲ್ಲಾ ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ. ಇದು ಟೊರೊ ಪಿಕಪ್ ಟ್ರಕ್‌ನಿಂದ ಎರವಲು ಪಡೆದ ಯುಕನೆಕ್ಟ್ ಸಾಫ್ಟ್‌ವೇರ್ ಅನ್ನು ಪಡೆಯುತ್ತದೆ, ಅಲ್ಲಿ ಪೋರ್ಟ್ರೇಟ್ ಮೋಡ್‌ನಲ್ಲಿ ಸ್ಕ್ರೀನ್ ಅನ್ನು ಜೋಡಿಸಲಾಗಿದೆ,

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಆದರೆ ಪಲ್ಸ್ ಹೆಚ್ಚು ಸಾಂಪ್ರದಾಯಿಕ ಸೆಟಪ್ ಅನ್ನು ಪಡೆಯುತ್ತದೆ. ವಿನ್ಯಾಸವು ತಾಜಾವಾಗಿದೆ, ಫಿಯೆಟ್ ವಿಶೇಷ ಬಣ್ಣಗಳ ಜೊತೆಗೆ ಹೊಸ ಟೆಕಶ್ಚರ್ ಮತ್ತು ಬಟ್ಟೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಇತರ ಸಣ್ಣ ಕ್ರಾಸ್‌ಒವರ್‌ಗಳ ಹೊರತಾಗಿ ತನ್ನ ಮುಂಬರುವ ಮಾದರಿಯನ್ನು ಹೊಂದಿಸಲು ಪೂರ್ಣಗೊಳಿಸಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಯುರೋಪ್ ಮತ್ತು ಅಮೆರಿಕದಲ್ಲಿ ಈ ಹಿಂದೆ ಜೀಪ್ ಮಾತೃಸಂಸ್ಥೆಯಾದ ಕ್ರಿಸ್ಲರ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಫಿಯೆಟ್ ಕಂಪನಿಯು ಸದ್ಯ ಹೊಚ್ಚ ಹೊಸ ಕಾರು ಉತ್ಪಾದನಾ ಕಂಪನಿಯಾದ ಸ್ಟೆಲ್ಯಾಂಡಿಸ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಭವಿಷ್ಯದಲ್ಲಿ 4x4 ಮತ್ತು ಹೈಬ್ರಿಡ್ ಸಿಸ್ಟಂಗಳಂತಹ ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸುವ ಸಾಮರ್ಥ್ಯ ಹೊಂದಿದೆ. ಈ ಪಲ್ಸ್ ಸುಮಾರು 4 ಮೀಟರ್ ಉದ್ದವಿದೆ ಎಂದು ಹೇಳಲಾಗುತ್ತದೆ, ಇದನ್ನು ಎಫ್‌ಸಿಎ ಜಾಗತಿಕ ಶ್ರೇಣಿಯಲ್ಲಿ ಜೀಪ್ ರೆನೆಗೇಡ್ ಕೆಳಗೆ ಇರಿಸಲಾಗಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಫಿಯೆಟ್‌ನ ಕಾಂಪ್ಯಾಕ್ಟ್ ಎಸ್‌ಯುವಿಯ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ. ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿಂದ ಬರಲಿದೆ. ಇವುಗಳಲ್ಲಿ 1.3-ಲೀಟರ್ ಪೆಟ್ರೋಲ್ ಮತ್ತು 1.0-ಲೀಟರ್ 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಇದರಲ್ಲಿ 1.3-ಲೀಟರ್, 4-ಸಿಲಿಂಡರ್ ಎಂಜಿನ್ 109 ಬಿಎಚ್‌ಪಿ ಮತ್ತು 140 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 1.0-ಲೀಟರ್ 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 120 ಬಿಎಚ್‌ಪಿ ಮತ್ತು 196 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತದೆ.

ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಮಾಹಿತಿ ಬಹಿರಂಗ

ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್ ಬಾಕ್ಸ್ ಅನ್ನು ಕೂಡ ಜೋಡಿಸಲಾಗಿದೆ. ಇನ್ನು ಈ ಫಿಯೆಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಈ ಕಾಂಪ್ಯಾಕ್ಟ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಫಿಯೆಟ್ fiat
English summary
Fiat Pulse Compact SUV Interiors Unveiled. Read In Kannada.
Story first published: Friday, July 30, 2021, 21:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X