ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಎಸ್‌ಯುವಿ

ಬಹುನೀರಿಕ್ಷಿತ ಫೋರ್ಸ್ ಗೂರ್ಖಾ(Force Gurkha) ಆಫ್-ರೋಡ್ ಎಸ್‌ಯುವಿ ಮಾದರಿಯು ಬಹುದಿನಗಳ ನಂತರ ಭಾರೀ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರನ್ನು ಇದೇ ತಿಂಗಳು 15ರಂದು ಬಿಡುಗಡೆಗೊಳ್ಳುತ್ತಿರುವುದಾಗಿ ಕಂಪನಿಯು ಮಾಹಿತಿ ಖಚಿತಪಡಿಸಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಹೊಸ ಗೂರ್ಖಾ ಎಸ್‌ಯುವಿ ಮಾದರಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ನವೀಕೃತ ಗೂರ್ಖಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್-ರೋಡ್ ಕೌಶಲ್ಯತೆಗೆ ಪೂರಕವಾದ ಹಲವು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಹೊಸ ಎಮಿಷನ್ ನಿಯಮದಿಂದಾಗಿ ಕಾರಿನ ಎಂಜಿನ್‌ ಆಯ್ಕೆಯಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ನೊಂದಿಗೆ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಫೋರ್ಸ್ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಟೀಸರ್‌ಗಳಲ್ಲೂ 2021ರ ಗೂರ್ಖಾ ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರೀಯರನ್ನು ಸೆಳೆಯುತ್ತಿದ್ದು, ಎಲ್ಇಡಿ ಟೆಲ್‌ಲೈಟ್, ರಿಪ್ಲೆಕ್ಟಕ್ ಹೊಂದಿರುವ Gurkha ಬ್ಯಾಡ್ಜ್ ಮತ್ತು ಆಫ್ ರೋಡ್ ಎಕ್ಸಾಸ್ಟ್ ಗಮನಸೆಳೆಯುತ್ತಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಹೊರ ಭಾಗದಲ್ಲಿ ಮಾತ್ರವಲ್ಲ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಸಾಕಷ್ಟು ಬದಲಾವಣೆಗೊಂಡಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್ ಗಮನಸೆಳೆಯಲಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಪರ್ಫಾಮೆನ್ಸ್‌ಗೆ ಪೂರಕವಾದ ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಖದರ್‌ಗೆ ಸಹಕಾರಿಯಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಉತ್ತಮ ಹೊರವಿನ್ಯಾಸದೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಿಂಚಲಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಮತ್ತು ವಿವಿಧ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಫೋರ್ಸ್ ಮೋಟಾರ್ಸ್ ಕಂಪನಿಯು ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಹೊಸ ಕಾರನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ್ದ ಫೋರ್ಸ್ ಕಂಪನಿಯು ಹೊಸ ಆವೃತ್ತಿಯನ್ನು ಕಳೆದ ವರ್ಷವೇ ಬಿಡುಗಡೆ ಮಾಡಬೇಕಿತ್ತು. ಆದರೆ ಕೋವಿಡ್ ಪರಿಣಾಮ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಬಹುದಿನಗಳ ನಂತರ ಮರುಚಾಲನೆ ನೀಡಿದ್ದರಿಂದ ಹೊಸ ಕಾರಿನ ಬಿಡುಗಡೆಯಲ್ಲಿ ವಿಳಂಬವಾಗಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಥಾರ್ ಮಾದರಿಗೆ ಪ್ರಬಲ ಪೈಪೋಟಿಯಾಗಿ ಅಭಿವೃದ್ದಿಗೊಂಡಿದ್ದು, ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಉತ್ತಮ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಫೋರ್ಸ್ ಗೂರ್ಖಾ ಮಾದರಿಯ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಯು ಹೊಸ ಕಾರಿನ ಬೇಡಿಕೆಯನ್ನು ನಿರ್ಧರಿಸಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Force Gurkha ಆಫ್ ರೋಡ್ ಎಸ್‌ಯುವಿ

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷವೆಂದರೆ ಫೋರ್ಸ್ ಮೋಟಾರ್ಸ್ ಕಂಪನಿಯಯು ಸ್ಟ್ಯಾಂಡರ್ಡ್ ಆಗಿ 3 ಡೋರ್ ಜೊತೆಗೆ 5 ಡೋರ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಆರಂಭಿಕವಾಗಿ 3 ಡೋರ್ ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿರುವ ಕಂಪನಿಯು ಕೆಲ ತಿಂಗಳ ನಂತರ 5 ಡೋರ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

Most Read Articles

Kannada
English summary
Force gurkha bs6 india launch on september 15 expected price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X