ಬಿಡುಗಡೆಗೂ ಮುನ್ನ ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಬಹುನೀರಿಕ್ಷಿತ ಫೋರ್ಸ್ ಬಿಎಸ್-6 ಗೂರ್ಖಾ ಎಸ್‌ಯುವಿ ಕಾರು ಮಾದರಿಯು ಮಾರುಕಟ್ಟೆ ಪ್ರವೇಶಕ್ಕೆ ಸಿದ್ದವಾಗುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಮಾದರಿಯು ಆಫ್ ರೋಡ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಬಿಎಸ್ 6 ಗೂರ್ಖಾ ಕಾರು ಮಾದರಿಯನ್ನು ಕಳೆದ ವರ್ಷವೇ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದ ಫೋರ್ಸ್ ಮೋಟಾರ್ಸ್ ಕಂಪನಿಗೆ ಕೋವಿಡ್ ಪರಿಸ್ಥಿತಿಯಿಂದಾದ ಆರ್ಥಿಕ ಹಿಂಜರಿತವು ಹೊಸ ಕಾರು ಬಿಡುಗಡೆಯ ಯೋಜನೆಗೆ ಹಿನ್ನಡೆ ಉಂಟುಮಾಡಿತು. ಸದ್ಯದ ಪರಿಸ್ಥಿತಿಯಲ್ಲೂ ಹೊಸ ಕಾರು ಬಿಡುಗಡೆಗೆ ಪೂರಕವಾದ ಮಾರುಕಟ್ಟೆ ಇಲ್ಲವಾದರೂ ಹೊಸ ಕಾರಿನ ಬಿಡುಗಡೆಗೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರಗಳ ಮಾಹಿತಿ ಕೈಪಿಡಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

2021ರ ಗೂರ್ಖಾ ಎಸ್‌ಯುವಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಕಡ್ಡಾಯವಾಗಿರುವ ಹೊಸ ಎಮಿಷನ್ ನಿಯಮದೊಂದಿಗೆ ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರನೋಟದಲ್ಲೂ ಗನಮಸೆಳೆಯಲಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಬಿಎಸ್-6 ಎಮಿಷನ್ ನಿಯಮದೊಂದಿಗೆ ಉನ್ನತೀಕರಣಗೊಂಡಿರುವ ಫೋರ್ಸ್ ಗೂರ್ಖಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್ ರೋಡ್ ಕೌಶಲ್ಯತೆಗೆ ಪೂರಕವಾದ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಹೊಸ ಎಮಿಷನ್ ನಿಯಮದಿಂದಾಗಿ ಹೊಸ ಕಾರಿನ ಎಂಜಿನ್‌ ಆಯ್ಕೆಯಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ನೊಂದಿಗೆ ಆಫ್ ರೋಡ್ ಪ್ರಿಯರನ್ನು ಸೆಳೆಯಲಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಹಾಗೆಯೇ ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್ ಗಮನಸೆಳೆಯಲಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಇದರ ಜೊತೆಗೆ ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಕಾರಿನ ಪರ್ಫಾಮೆನ್ಸ್‌ಗೆ ಸಾಕಷ್ಟು ಸಹಕಾರಿಯಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಉತ್ತಮ ಹೊರವಿನ್ಯಾಸದೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಿಂಚಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಮತ್ತು ವಿವಿಧ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಬಿಎಸ್ 6 ಫೋರ್ಸ್ ಗೂರ್ಖಾ ಕಾರಿನ ಉತ್ಪಾದನಾ ಆವೃತ್ತಿಯ ಚಿತ್ರ ಬಹಿರಂಗ

ಇದರೊಂದಿಗೆ ಹೊಸ ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಗೂರ್ಖಾದಲ್ಲಿ ನೀಡಲಾಗಿದೆ.

Image Courtesy: Vikram Kanwar

Most Read Articles

Kannada
English summary
Force Gurkha BS6 Official Images Leaked Ahead Of India Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X