ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಫಿಗೊ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಕಳೆದ ವಾರವಷ್ಟೇ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ್ದು, ಇದೀಗ ಕಂಪನಿಯು ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲೂ ಆಟೋಮ್ಯಟಿಕ್ ವರ್ಷನ್ ಪರಿಚಯಿಸಲು ಸಿದ್ದವಾಗಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಫಿಗೊ ಮತ್ತು ಆಸ್ಪೈರ್ ಕಾರುಗಳು ಉತ್ತಮ ಬೇಡಿಕೆ ಹೊಂದಿದ್ದು, ಕಂಪನಿಯು ಎರಡು ಕಾರು ಮಾದರಿಗಳಲ್ಲೂ ಪೆಟ್ರೋಲ್ ಆಟೋಮ್ಯಾಟಿಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಫೋರ್ಡ್ ಕಂಪನಿಯು ಕಳೆದ ವಾರವಷ್ಟೇ ಫಿಗೊ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಆಸ್ಪೈರ್ ಕಾರಿನಲ್ಲೂ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಆಸ್ಪೈರ್ ಕಾರು ಮಾದರಿಯು ಫಿಗೊ ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಎರಡು ಎಂಜಿನ್‌ಗಳಲ್ಲೂಸದ್ಯ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ಫಿಗೊ ಕಾರಿನಲ್ಲಿ ಹೊಸದಾಗಿ ನೀಡಲಾಗಿರುವ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಯನ್ನು ಆಸ್ಪೈರ್ ಕೂಡಾ ಪಡೆದುಕೊಳ್ಳಲಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಫೋರ್ಡ್ ಕಂಪನಿಯ ಹೊಸ ಸೆಲೆಕ್ಟ್ ಶಿಫ್ಟ್ ಟೆಕ್ನಾಲಜಿ ಬಳಕೆ ಮಾಡಿದ್ದು, ಮ್ಯಾನುವಲ್ ಮಾದರಿಯಲ್ಲಿಯೇ ಇರುವ ಗೇರ್‌ನಾಬ್‌ನಲ್ಲಿ ಬಟನ್ ಜೋಡಿಸಲಾಗಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

3 ಸಿಲಿಂಡರ್ 1.2-ಲೀಟರ್ ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಆವೃತ್ತಿಯ ಜೊತೆಗೆ ಇದೀಗ ಹೊಸದಾಗಿ ಆಟೋಮ್ಯಾಟಿಕ್ ಆವೃತ್ತಿಯು ಸಹ ಮಾರಾಟಗೊಳ್ಳಲಿದ್ದು, ಎರಡು ಮಾದರಿಗಳು ಗರಿಷ್ಠ 95 ಬಿಎಚ್‌ಪಿ ಮತ್ತು 119 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಹೊಸ ಗೇರ್‌ಬಾಕ್ಸ್ ಜೋಡಣೆ ಹೊರತುಪಡಿಸಿ ಮ್ಯಾನುವಲ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಹೊಸ ಗೇರ್‌ಬಾಕ್ಸ್ ಆಯ್ಕೆಯು ಕಂಪ್ಯಾಕ್ಟ್ ಸೆಡಾನ್ ಪ್ರಿಯರನ್ನು ಸೆಳೆಯಲಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಜೊತೆಗೆ ಹೊಸ ಕಾರಿನಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ರೂಫ್, ಫಾಗ್ ಲ್ಯಾಂಪ್, 15-ಇಂಚಿನ ಅಲಾಯ್ ವ್ಹೀಲ್, ಚಾರ್ಕಲ್ ಬ್ಲ್ಯಾಕ್ ಇಂಟಿರಿಯರ್, ಫೋರ್ಡ್ ಪಾಸ್ ಕಾರ್ ಕನೆಕ್ಟ್ ಟೆಕ್ನಾಲಜಿ, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸುರಕ್ಷತೆಗಾಗಿ ಎಬಿಎಸ್, 6 ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್, ಕ್ಲೈಮೆಟ್ ಕಂಟ್ರೋಲ್ ಒಳಗೊಂಡಿದೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಇನ್ನು ಆಸ್ಪೈರ್ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.27 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.72 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತ ರೂ.90 ಸಾವಿರದಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ.

ಫೋರ್ಡ್ ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಆಟೋಮ್ಯಾಟಿಕ್ ವರ್ಷನ್

ಆಸ್ಪೈರ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 215-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಡೀಸೆಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಪರಿಚಯಿಸುವ ಯಾವುದೇ ಯೋಜನೆಯಿಲ್ಲ ಎನ್ನಲಾಗಿದೆ.

Most Read Articles

Kannada
Read more on ಫೋರ್ಡ್ ford
English summary
Ford Aspire Automatic India Launch Expected Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X