ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಫೋರ್ಡ್ ಇಂಡಿಯಾ ಕಂಪನಿಯು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿದೆ. ಕಂಪನಿಯು ಈಗ ಭಾರತದಲ್ಲಿ ತನ್ನ ಹಿಡಿತವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ.

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಈ ಕಾರಣಕ್ಕೆ ಕಂಪನಿಯು ಮುಂಬರುವ ದಿನಗಳಲ್ಲಿ ಹಲವು ಹೊಸ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಫೋರ್ಡ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ಇಕೋಸ್ಪೋರ್ಟ್‌ನ 2021ರ ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಇತ್ತೀಚೆಗೆ ಇಕೋಸ್ಪೋರ್ಟ್ ಕಾರಿನ ವಿಶೇಷ ಆವೃತ್ತಿಯನ್ನು ಪರೀಕ್ಷಿಸಿದೆ. ಈಗ ಹೊಸ ಫೋರ್ಡ್ ಕಾರಿನ ಮಾಹಿತಿ ಬಹಿರಂಗವಾಗಿದೆ.

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಇತ್ತೀಚಿನ ಮಾಹಿತಿಗಳ ಪ್ರಕಾರ, ಫೋರ್ಡ್ ಕಂಪನಿಯ ಫೋರ್ಡ್ ಆಸ್ಪೈರ್‌ ಕಾಂಪ್ಯಾಕ್ಟ್ ಸೆಡಾನ್ ಕಾರಿನ ಸಿಎನ್‌ಜಿ ಮಾದರಿಯುನ್ನು ಪರೀಕ್ಷಿಸಲಾಗಿದೆ. ಸದ್ಯಕ್ಕೆ ಫೋರ್ಡ್ ಆಸ್ಪೈರ್ ಕಾರ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಫೋರ್ಡ್ ಆಸ್ಪೈರ್ ಕಾರಿನ ಹಿಂಭಾಗದಲ್ಲಿ ಸಿಎನ್‌ಜಿ ಪರೀಕ್ಷಾ ಕಿಟ್ ಇಟ್ಟಿರುವುದನ್ನು ಬಹಿರಂಗವಾಗಿರುವ ಚಿತ್ರದಲ್ಲಿ ಕಾಣಬಹುದು. ಮಾಹಿತಿಯ ಪ್ರಕಾರ, ಕಂಪನಿಯು ಶೀಘ್ರದಲ್ಲೇ ಈ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಚಿತ್ರವನ್ನು ಚೆನ್ನೈನಲ್ಲಿರುವ ಕಂಪನಿಯ ಉತ್ಪಾದನಾ ಘಟಕದ ಬಳಿ ತೆಗೆಯಲಾಗಿದೆ.

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಫೋರ್ಡ್ ಆಸ್ಪೈರ್‌ನ ಸಿಎನ್‌ಜಿ ಮಾದರಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲವೆಂಬುದನ್ನು ಈ ಚಿತ್ರದಿಂದ ತಿಳಿಯಬಹುದು. ಫೋರ್ಡ್ ಕಂಪನಿಯು ಸಿಎನ್‌ಜಿ ಎಂಜಿನ್ ಹೊಂದಿದ್ದ ಆಸ್ಪೈರ್ ಕಾರ್ ಅನ್ನು ಈ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಆದರೆ ಬಿಎಸ್ 6 ಮಾಲಿನ್ಯ ನಿಯಮಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಈಗ ಕಂಪನಿಯು ಸಿಎನ್‌ಜಿ ಮಾದರಿಯನ್ನು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಬಿಡುಗಡೆಗೊಳಿಸಲಿದೆ. ಸಿಎನ್‌ಜಿ ಮಾದರಿಯಿಂದ ಕ್ಯಾಬ್ ಚಾಲಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಕೈಗೆಟುಕುವ ಬೆಲೆಯ ಸೆಡಾನ್ ಕಾರ್ ಅನ್ನು ಖರೀದಿಸಬಯಸುವವರಿಗೆ ಈ ಕಾರಿನಿಂದ ಅನುಕೂಲವಾಗಲಿದೆ. ಸದ್ಯಕ್ಕೆ ಹ್ಯುಂಡೈ ಕಂಪನಿಯ ಒರಾ ಕಾಂಪ್ಯಾಕ್ಟ್ ಸೆಡಾನ್ ಕಾರು ಈ ಸೆಗ್'ಮೆಂಟಿನಲ್ಲಿ ಸಿಎನ್‌ಜಿ ಮಾದರಿಯಲ್ಲಿ ಮಾರಾಟವಾಗುತ್ತಿರುವ ಏಕೈಕ ಸೆಡಾನ್ ಕಾರ್ ಆಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಫೋರ್ಡ್ ಆಸ್ಪೈರ್ ಮಾದರಿಯಲ್ಲಿ 1.2-ಲೀಟರ್, 3-ಸಿಲಿಂಡರ್ ಡ್ರ್ಯಾಗನ್ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 95 ಬಿಹೆಚ್‌ಪಿ ಪವರ್ ಹಾಗೂ 119 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್ 6 ಸಿ‌ಎನ್‌ಜಿ ಎಂಜಿನ್'ನೊಂದಿಗೆ ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ಫೋರ್ಡ್ ಆಸ್ಪೈರ್

ಸಿಎನ್‌ಜಿ ಮಾದರಿಯಲ್ಲಿ ಪವರ್ ಉತ್ಪಾದನೆಯ ಅಂಕಿ ಅಂಶವು ಸ್ವಲ್ಪ ಕಡಿಮೆಯಾಗುತ್ತದೆ. ಪೆಟ್ರೋಲ್ ಎಂಜಿನ್ ಜೊತೆಗೆ ಈ ಕಾರ್ ಅನ್ನು 1.5-ಲೀಟರ್, ಟಿಡಿಸಿಐ ​​ಡೀಸೆಲ್ ಎಂಜಿನ್'ನಲ್ಲಿಯೂ ಮಾರಾಟ ಮಾಡಲಾಗುತ್ತದೆ. ಈ ಎಂಜಿನ್ 99 ಬಿಹೆಚ್‌ಪಿ ಪವರ್ ಹಾಗೂ 215 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ರಶ್'ಲೇನ್ ಈ ಬಗ್ಗೆ ವರದಿ ಪ್ರಕಟಿಸಿದೆ.

Most Read Articles

Kannada
English summary
Ford Aspire spot tested with BS6 CNG engine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X