ಭಾರತದಲ್ಲಿ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟಾದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ ಇಕೋಸ್ಪೋರ್ಟ್ ಕಾರು ಮಾದರಿಯು ಶೀಘ್ರದಲ್ಲೇ ಹಲವು ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಮತ್ತೆ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಸಬ್ ಫೋರ್ ಮೀಟರ್ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹಲವು ಹೊಸ ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ಇಕೋಸ್ಪೋರ್ಟ್ ಕಾರಿಗಿಂತಲೂ ಕಡಿಮೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಪೈಪೋಟಿ ನೀಡುತ್ತಿವೆ. ಆದರೆ ಇಕೋಸ್ಪೋರ್ಟ್ ಮಾದರಿಯಲ್ಲಿ 2017ರಿಂದ ಕೆಲವು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ ಯಾವುದೇ ಪ್ರಮುಖ ಬದಲಾಣೆ ತರದ ಫೋರ್ಡ್ ಕಂಪನಿಯು ತೀವ್ರ ಹಿನ್ನಡೆ ಅನುಭವಿಸುತ್ತಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಇದರಿಂದ ಫೇಸ್‌ಲಿಫ್ಟ್ ಮಾದರಿಯ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ಫೋರ್ಡ್ ಕಂಪನಿಯು ನ್ಯೂ ಜನರೇಷನ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಹೊಸ ಕಾರನ್ನು ಮುಂಬರುವ ಕೆಲ ತಿಂಗಳುಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಹೊಸ ಕಾರು ಬಿಡುಗಡೆಗಾಗಿ ಫೋರ್ಡ್ ಕಂಪನಿಯು ಫೇಸ್‌ಲಿಫ್ಟ್ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಹೊಸ ಕಾರು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಫೋರ್ಡ್ ಕಂಪನಿಯು ಇಕೋಸ್ಪೋರ್ಟ್ ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಆಕ್ಟಿವ್ ವರ್ಷನ್ ಅನ್ನು ಕೂಡಾ ವಿದೇಶಿ ಮಾರುಕಟ್ಟೆಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, ಇಕೋಸ್ಪೋರ್ಟ್ ಆಕ್ವಿವಾ ಮಾದರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಯಾಗಲಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಇಕೋಸ್ಪೋರ್ಟ್ ಆಕ್ಟಿವಾ ಪ್ರೇರಣೆಯ ಫೇಸ್‌ಲಿಫ್ಟ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಗ್ರಾಹಕರ ಬೇಡಿಕೆಯಲ್ಲಿ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವ ಇಕೋಸ್ಪೋರ್ಟ್ ಮಾದರಿಯ ಬೇಡಿಕೆಯ ಸುಧಾರಣೆಗೆ ಹೊಸ ಬದಲಾವಣೆ ತುರ್ತು ಅವಶ್ಯಕತೆಯಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಹೊಸ ಇಕೋಸ್ಪೋರ್ಟ್ ಆಕ್ಟಿವ್ ಕಾರು ಮಾದರಿಯು ಫೋರ್ಡ್ ನಿರ್ಮಾಣದ ಜನಪ್ರಿಯ 1.0-ಲೀಟರ್ ಇಕೋಬೂಸ್ಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿದ್ದು, ಆನ್‌ರೋಡ್‌ನಲ್ಲಿ ಮಾತ್ರವಲ್ಲ ಆಫ್ ರೋಡ್ ಚಾಲನೆಯಲ್ಲೂ ಇದು ಅತ್ಯುತ್ತಮ ಪ್ರದರ್ಶನ ಹೊಂದಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಫೋರ್ಡ್ ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಮತ್ತು ಕ್ರಾಸ್ ಓವರ್ ಎಸ್‌ಯುವಿ ಮಾದರಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಉನ್ನತೀಕರಿಸುತ್ತಿದ್ದು, ಫೋರ್ಡ್ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಪುಮಾ ಆವೃತ್ತಿಯಿಂದಲೂ ಕೆಲವು ಫೀಚರ್ಸ್‌ಗಳನ್ನು ಹೊಸ ಇಕೋಸ್ಪೋರ್ಟ್ ಆಕ್ಟಿವ್ ಮಾದರಿಯಾಗಿ ಎರವಲು ಪಡೆದುಕೊಳ್ಳಲಾಗಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಇಕೋಸ್ಪೋರ್ಟ್ ಆಕ್ಟಿವ್ ಮಾದರಿಯು ಸ್ಟ್ಯಾಂಡರ್ಡ್ ಇಕೋಸ್ಪೋರ್ಟ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆಗಳನ್ನು ಹೊಂದಿದ್ದು, ಹೊರಭಾಗದಲ್ಲಿ ಮಾತ್ರವಲ್ಲ ಒಳಭಾಗದ ವಿನ್ಯಾಸದಲ್ಲೂ ಬದಲಾವಣೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಫ್ಲಕ್ಸ್ ಸ್ಕೀಡ್ ಪ್ಲೇಟ್, ನವೀಕೃತ ರಿಯರ್ ಬಂಪರ್, ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಫ್ರಂಟ್ ಸೀಟ್‌ನಲ್ಲಿ ಆಕ್ಟಿವ್ ಬ್ಯಾಡ್ಜ್ ನೀಡಲಾಗಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಇದಲ್ಲದೆ ಇಕೋಸ್ಪೋಟ್ ಆಕ್ಟಿವಾದಲ್ಲಿ ಮಡಿಕೆ ಮಾಡಬಹುದಾದ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಸ್ಮಾಟ್‌ಫೋನ್ ಇಂಟ್ರಾಕ್ಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಹೊಂದಿರುವ ಸ್ಟೀರಿಂಗ್ ವೀಲ್ಹ್ ಮೌಂಟೆಡ್ ಸೌಲಭ್ಯವಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ ಬಿಎಸ್-6 ಇಕೋಸ್ಪೋರ್ಟ್ ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಆಕ್ಟಿವಾ ಸ್ಪೆಷಲ್ ಎಡಿಷನ್‌ನಲ್ಲಿ ಯುರೋ ಹೊಸ ಎಮಿಷನ್ ಅನುಸಾರವಾಗಿ ಅಭಿವೃದ್ದಿಗೊಂಡ 1.0-ಇಕೋಬೂಸ್ಟ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಿದ್ದವಾದ ಫೋರ್ಡ್

ಇಕೋಸ್ಪೋರ್ಟ್ ಕಾರಿನ ಬೆಲೆಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.19 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 11.70 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಪ್ರೀಮಿಯಂ ಫೀಚರ್ಸ್‌ವುಳ್ಳ ಫೇಸ್‌ಲಿಫ್ಟ್ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Ford EcoSport Facelift Spotted Testing For First Time Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X