ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಇಂಡಿಯಾ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿ ಇಕೋಸ್ಪೋರ್ಟ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಫೋರ್ಡ್ ಇಕೋಸ್ಪೋರ್ಟ್ 2013ರಲ್ಲಿ ಬಿಡುಗಡೆಗೊಂಡು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸಿದ ಮಾದರಿ ಇದಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಇಕೋಸ್ಪೋರ್ಟ್ 2017ರಲ್ಲಿ ಮಿಡ್-ಲೈಫ್ ರಿಫ್ರೆಶ್ ಅನ್ನು ಪಡೆದುಕೊಂಡಿತ್ತು. ಆದರೂ ಬಿಡುಗಡೆಯಾದಗಿನಿಂದ ಹೆಚ್ಚಿನ ಬದಲಾವಣೆಗಲಾಗದೆ ಉಳಿದಿದೆ. 2021ರ ಇಕೋಸ್ಪೋರ್ಟ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಚೆನ್ನೈನಲ್ಲಿರುವ ಉತ್ಪಾದನಾ ಘಟಕದ ಸಮೀಪ ಇತ್ತೀಚೆಗೆ ಹೊಸ ಎರಡೂ ಫೋರ್ಡ್ ಇಕೋಸ್ಪೋರ್ಟ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ಕಾಣಿಸಿಕೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಎರಡೂ ಫೋರ್ಡ್ ಇಕೋಸ್ಪೋರ್ಟ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳು ಯಾವುದೇ ಮರೆಮಾಚುವಿಕೆಯನ್ನು ಧರಿಸಲಿಲ್ಲ. ಆದರೆ ಈ ಇಕೋಸ್ಪೋರ್ಟ್‌ನ ಎರಡು ವಿಭಿನ್ನ ರೂಪಾಂತರಗಳಾಗಿವೆ - ಟ್ರೆಂಡ್ ಮತ್ತು ಎಸ್. ಇಕೋಸ್ಪೋರ್ಟ್‌ನ ಟ್ರೆಂಡ್ ರೂಪಾಂತರವಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಇದರಲ್ಲಿ ಫೋರ್ಡ್ ಇಕೋಸ್ಪೋರ್ಟ್ ಎಸ್ ರೂಪಾಂತರವು ಬಾಡಿ ಕಲರ್ ಡೋರ್ ಹ್ಯಾಂಡಲ್ಸ್ ಮತ್ತು 16 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಳ್ ಗಳನ್ನು ಒಳಗೊಂಡಿತ್ತು. ವರದಿಗಳ ಪ್ರಕಾರ, ಈ ಫೋರ್ಡ್ ಇಕೋಸ್ಪೋರ್ಟ್ ಎಸ್ ರೂಪಾಂತರವು ಮಹೀಂದ್ರಾ ಅವರ ಎಂಸ್ಟಾಲಿಯನ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಮಹೀಂದ್ರಾ ಎಕ್ಸ್‌ಯುವಿ 300 ಸ್ಪೋರ್ಟ್ಜ್ ಎಸ್‍ಯುವಿಯಲ್ಲಿ ಅಳವಡಿಸಿದ ಎಂಸ್ಟಾಲಿಯನ್ ಟರ್ಬೊ-ಪೆಟ್ರೋಲ್ ಎಂಜಿನ್ ಮೊದಲ ಬಾರಿಗೆ 2020ರ ಆಟೋ ಎಕ್ಸ್‌ಪೋದಲ್ಲಿ ಪಾದಾರ್ಪಣೆ ಮಾಡಿತು. ಇದು 1.2ಎಲ್ ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಈ ಎಂಜಿನ್ 130 ಬಿಹೆಚ್‍ಪಿ ಪವರ್ ಮತ್ತು 230 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಇಕೋಸ್ಪೋರ್ಟ್ ಮಾದರಿಯಲ್ಲಿ ಅಳವಡಿಸಲಾಗುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಪಡೆಯುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಮತ್ತು ಮಹೀಂದ್ರಾ ಇತ್ತೀಚೆಗೆ ತಮ್ಮ ಪಾಲುಗಾರಿಗೆ ಒಪ್ಪಂದಿಂದ ಹಿಂದೆ ಸರಿದಿದ್ದರು. ಮುಂದಿನ ದಿನಗಳ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್‍ಯುವಿಯ ಬೆಲೆಯ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗಿಂತ ರೂ.35,000 ಗಳವರೆಗೆ ಬೆಲೆಯನ್ನು ಕಡಿಮೆ ಮಾಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಐದು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಆಂಬಿಡೆಂಟ್, ಟ್ರೆಂಡ್, ಟೈಟಾನಿಯಂ, ಟೈಟಾನಿಯಂ ಪ್ಲಸ್ ಮತ್ತು ಸ್ಪೋರ್ಟ್ಸ್ ಆಗಿದೆ. ಟಿಟಾನಿಯಂ ಪ್ಲಸ್ ರೂಪಾಂತರವನ್ನು ಹೊರತುಪಡಿಸಿ ಉಳಿದವೆಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಅದೇ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 123 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋರ್ಡ್ ಇಕೋಸ್ಪೋರ್ಟ್ ಟರ್ಬೊ-ಪೆಟ್ರೋಲ್ ವೆರಿಯೆಂಟ್

2021ರ ಫೋರ್ಡ್ ಇಕೋಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Ford Ecosport Spotted On Test Once Again. Read In Kananda.
Story first published: Tuesday, February 9, 2021, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X