ಪವರ್‌ಫುಲ್ ಫೋರ್ಡ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಚಿತ್ರಗಳು ಬಹಿರಂಗ

ಅಮೆರಿಕಾ ಮೂಲದ ಫೋರ್ಡ್ ಕಂಪನಿಯು ತನ್ನ ಹೊಸ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಈ ಹೊಸ ಫೋರ್ಡ್ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಹೊಸ ಫೋರ್ಡ್ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ವಿನ್ಯಾಸವು ಸ್ಟ್ಯಾಂಡರ್ಡ್ ಎಫ್-150 ನೊಂದಿಗೆ ಹೋಲುತ್ತದೆ. ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳೊಂದಿಗೆ ನೇರವಾದ ಫಾಸಿಕವನ್ನು ಹೊಂದಿದೆ, ಇನ್ನು ಎಲ್ಇಡಿ ಲೈಟಿಂಗ್ ಬಾರ್ ನೊಂದಿಗೆ ಹೆಡ್ ಲ್ಯಾಂಪ್ ಗಳು ಮತ್ತು ಗ್ರಿಲ್ ಅನ್ನು ಸುತ್ತುವರೆದಿದೆ ಮತ್ತು ಇದು ಬಂಪರಿನ ಮಧ್ಯ ಭಾಗದಲ್ಲಿ ವಿಶಾಲವಾದ ಸೆಂಟರ್ ಓಪನಿಂಗ್ ಅನ್ನು ಹೊಂದಿದೆ.

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಫೋರ್ಡ್ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ನಲ್ಲಿ ಹೆಚ್ಚು ಕ್ರೋಮ್-ಬ್ಲ್ಯಾಕ್ ಔಟ್ ಗ್ರಿಲ್ ಅನ್ನು ನೀಡಿದೆ. ಮಧ್ಯದಲ್ಲಿ ಪ್ರಮುಖ ಬ್ಲೂ ಓವಲ್ ಬ್ಯಾಡ್ಜ್ ಇದೆ. ಹೊರಭಾಗದಲ್ಲಿ ಮೀರರ್ ಗಳೂ ಮತ್ತು ರ್ಯಾಕ್ಡ್ ವಿಂಡ್ ಷೀಲ್ಡ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಸೋರಿಕೆಯಾದ ಚಿತ್ರದಲ್ಲಿ ಫೋರ್ಡ್ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಕ್ಯಾಬ್ ಆವೃತ್ತಿಯಂತೆ ಕಾಣುತ್ತದೆ ಮತ್ತು ಇದು ಸಾಮಾನ್ಯ ಎಫ -150 ರಂತೆ 1,676 ಎಂಎಂ ಉದ್ದವನ್ನು ಹೊಂದಿರಬಹುದು. ಹೊಸದಾಗಿ ವಿನ್ಯಾಸಗೊಳಿಸಲಾದ ಸಿಕ್ಸ್-ಸ್ಪೋಕ್ ವ್ಹೀಲ್ ಗಳನ್ನು ಹೊಂದಿವೆ.

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಇನ್ನು ಈ ಹೊಸ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ನಲ್ಲಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಅದರ ಸ್ತ್ಯಾಂಡರ್ಡ್ ಮಾದರಿಯಲ್ಲಿರುವ ಫ್ಹೋರ್ ವ್ಹೋಲ್ ಡ್ರೈವ್ ಸಿಸ್ಟಂ ಅನ್ನು ಇದರಲ್ಲಿ ನೀಡಬಹುದು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ದೊಡ್ಡ ಬ್ಯಾಟರಿ ಪ್ಯಾಕ್ ಇರುವುದರಿಂದ ಫೋರ್ಡ್ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಐಸಿ-ಎಂಜಿನ್ ಹೊಂದಿರುವ ಪಿಕಪ್ ಟ್ರಕ್‌ಗೆ ಹೋಲಿಸಿದರೆ ಹೆಚ್ಚು ಪವರ್ ಫುಲ್ ಆಗಿದೆ ಎಂದು ಫೋರ್ಡ್ ಕಂಪನಿಯು ಹೇಳಿಕೊಂಡಿದೆ.

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಇನ್ನು ಸ್ಟ್ಯಾಂಡರ್ಡ್ ಎಫ್-150 ಪಿಕ್ಅಪ್ ಟ್ರಕ್ ನಲ್ಲಿ 3.3-ಲೀಟರ್ ವಿ 6, 2.7-ಲೀಟರ್ ವಿ6, 3.5-ಲೀಟರ್ ವಿ6, 3.0-ಲೀಟರ್ ವಿ6 ಡೀಸೆಲ್ ಮತ್ತು 3.5-ಲೀಟರ್ ಹೈಬ್ರಿಡ್ ವಿ6 ಎಂಜಿನ್ ಆಯ್ಕೆಗಳನ್ನು ಒಳಗೊಂಡಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಫೋರ್ಡ್ ಕಂಪನಿಯು ತನ್ನ ಹೊಸ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. 2021ರ ಫೋರ್ಡ್ ಎಫ್-150 ರಾಪ್ಟರ್ ಮುಂಭಾಗದಲ್ಲಿ ಕೆಲವು ಮಹತ್ವದ ನವೀಕರಣಗಳನ್ನು ಪಡೆದುಕೊಂಡಿದೆ. ಅದರ ಕೋರ್ ಆಫ್-ರೋಡಿಂಗ್ ಡಿಎನ್‌ಎಯನ್ನು ಹಾಗೇ ಇರಿಸಲು ಕಂಪನಿಯು ನಿರ್ಧರಿಸಿದೆ. ಹೊಸ ರಾಪ್ಟರ್ ಇಂದಿನಿದಕ್ಕಿಂತ ಅತ್ಯಂತ ಕನೆಕ್ಟಿವಿಟಿ ಮತ್ತು ಆಫ್-ರೋಡ್ ಓರಿಯೆಂಟೆಡ್ ಆಗಿದೆ.

ಪವರ್‌ಫುಲ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣಗೊಳಿಸಿದ ಫೋರ್ಡ್

ಫೋರ್ಡ್ ಎಫ್-150 ಲೈಟ್ನಿಂಗ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜಿಎಂಸಿ ಹಮ್ಮರ್ ಇವಿ, ಮುಂಬರುವ ಟೆಸ್ಲಾ ಸೈಬರ್ ಟ್ರಕ್ ಮತ್ತು ರಿವಿಯನ್ ಆರ್ 1ಟಿ ಮಾದರಿಗಳಿಗೆ ಪೈಪೋಟೀ ನೀಡುತ್ತದೆ.

Source: Twitter

Most Read Articles

Kannada
Read more on ಫೋರ್ಡ್ ford
English summary
Ford F-150 Lightning Electric Pickup Truck Leaks Online Ahead Of Debut. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X