ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಫಿಗೋ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಹೊಸ ಬದಲಾವಣೆಗೆ ಮುಂದಾಗಿರುವ ಫೋರ್ಡ್ ಇಂಡಿಯಾ ಕಂಪನಿಯು ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಫೋರ್ಡ್ ಕಂಪನಿಯು ಫಿಗೊ ಪೆಟ್ರೋಲ್ ಮಾದರಿಯಲ್ಲಿ ಸದ್ಯಕ್ಕೆ ಮ್ಯಾನುವಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಇದೀಗ ಕಂಪನಿಯು ಹೊಸದಾಗಿ ಪೆಟ್ರೋಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಟೀಸರ್ ಚಿತ್ರದಲ್ಲಿ ಫಿಗೊ ಆಟೋಮ್ಯಾಟಿಕ್ ಆವೃತ್ತಿಯು ಈ ತಿಂಗಳು 22ರಂದು ಬಿಡುಗಡೆಯಾಗುವ ಮಾಹಿತಿ ಲಭ್ಯವಾಗಿದ್ದು, ಹೊಸ ಆವೃತ್ತಿಯು ಹ್ಯಾಚ್‌ಬ್ಯಾಕ್ ಬೇಡಿಕೆಯನ್ನು ಹೆಚ್ಚಿಸಲಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಫಿಗೊ ಕಾರು ಡ್ರಾಗ್ಯನ್ ಸರಣಿಯ 3 ಸಿಲಿಂಡರ್ 1.2-ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಸದ್ಯ 5-ಸ್ಪೀಡ್ ಮ್ಯಾನುವಲ್ ಆವೃತ್ತಿಯು ಮಾರಾಟಗೊಳ್ಳುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಆಟೋಮ್ಯಾಟಿಕ್ ಆವೃತ್ತಿಯು 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

1.2-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು 95 ಬಿಎಚ್‌ಪಿ ಮತ್ತು 119 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಆಟೋಮ್ಯಾಟಿಕ್ ಮಾದರಿಯು ಸಹ ಮ್ಯಾನುವಲ್ ಮಾದರಿಯು ಹಾರ್ಸ್ ಪಡೆದುಕೊಳ್ಳಲಿದೆ. ಆದರೆ ನಗರಪ್ರದೇಶಗಳಲ್ಲಿ ಮ್ಯಾನವಲ್ ಮಾದರಿಗಳಿಂತಲೂ ಆಟೋಮ್ಯಾಟಿಕ್ ಮಾದರಿಗೆ ಹೆಚ್ಚಿನ ಬೇಡಿಕೆಯಿದ್ದು, ಇದೇ ಕಾರಣಕ್ಕೆ ಫೋರ್ಡ್ ಕಂಪನಿಯು ಶೀಘ್ರದಲ್ಲೇ ಹೊಸ ಆವೃತ್ತಿಯ ಬಿಡುಗಡೆಗೆ ಸಿದ್ದವಾಗಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಹೊಸ ಆಟೋಮ್ಯಾಟಿಕ್ ಆವೃತ್ತಿಯು ಫಿಗೊ ಕಾರಿನ ಮಧ್ಯಂತರ ಆವೃತ್ತಿಯಾದ ಟೈಟಾನಿಯಂ ಮತ್ತು ಹೈ ಎಂಡ್ ಮಾದರಿಯಾದ ಟೈಟಾನಿಯಂ ಬ್ಲ್ಯೂ ಮಾದರಿಗಳಿಗಾಗಿ ಅಳವಡಿಸಿಲಿದ್ದು, ಹೊಸ ಆಟೋಮ್ಯಾಟಿಕ್ ಆವೃತ್ತಿ ಬೆಲೆ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 7.20 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಹೊಸ ಗೇರ್‌ಬಾಕ್ಸ್ ಜೋಡಣೆ ಹೊರತುಪಡಿಸಿ ಮ್ಯಾನುವಲ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಲಿದ್ದು, ಹೊಸ ಗೇರ್‌ಬಾಕ್ಸ್ ಆಯ್ಕೆಯು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಹೊಸ ಕಾರಿನಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ರೂಫ್, ಫಾಗ್ ಲ್ಯಾಂಪ್, 15-ಇಂಚಿನ ಅಲಾಯ್ ವ್ಹೀಲ್, ಚಾರ್ಕಲ್ ಬ್ಲ್ಯಾಕ್ ಇಂಟಿರಿಯರ್, ಫೋರ್ಡ್ ಪಾಸ್ ಕಾರ್ ಕನೆಕ್ಟ್ ಟೆಕ್ನಾಲಜಿ, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಸದ್ಯ ಫಿಗೊ ಕಾರು ಮಾದರಿಯು 1.2 ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.82 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.37 ಲಕ್ಷ ಬೆಲೆ ಹೊಂದಿದೆ.

ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಫಿಗೊ ಕಾರಿನ 1.5 ಲೀಟರ್ ಡೀಸೆಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 215-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಡೀಸೆಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆಗಳಿಲ್ಲ ಎನ್ನಲಾಗಿದೆ.

Most Read Articles

Kannada
English summary
Ford Figo Automatic Variant Launch Date Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X