ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಅಮೆರಿಕದ ಕಾರು ತಯಾರಕ ಕಂಪನಿಯಾದ ಫೋರ್ಡ್ ಇದೇ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳು ನೀಡುತ್ತಿದೆ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರಾಟವನ್ನು ಹೆಚ್ಚಿಸಲು ಫೋರ್ಡ್ ತನ್ನ ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಫೋರ್ಡ್ ಕಂಪನಿಯು ತನ್ನ ಎಂಡೀವರ್, ಇಕೋಸ್ಪೋರ್ಟ್, ಆಸ್ಪೈರ್, ಫಿಗೊ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಫೋರ್ಡ್ ಕಂಪನಿಯ ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿದೆ. ಫೋರ್ಡ್ ಫಿಗೋ ಕಾರಿನ ಮೇಲೆ ಯಾವುದೇ ಅಧಿಕೃತ ನಗದು ರಿಯಾಯಿತಿಯನ್ನು ಹೊಂದಿಲ್ಲ. ಇನ್ನು ಹಳೆಯ ಫೋರ್ಡ್ ಕಾರುಗಳನ್ನು ವಿನಿಮಯ ಮಾಡಿದಾಗ ರೂ.20,000 ವರೆಗಿನ ಎಕ್ಸ್‌ಚೆಂಜ್ ಬೋನಸ್ ಲಭ್ಯವಿದೆ. ಇನ್ನುಇತರ ಬ್ರ್ಯಾಂಡ್‌ನ ಕಾರಿಗೆ ಎಕ್ಸ್‌ಚೆಂಜ್ ಬೋನಸ್ ರೂ,7,000 ಗಳಾಗಿದೆ. ಇದಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ.4,000 ಸಹ ಇದರ ಮೇಲೆ ಲಭ್ಯವಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಫೋರ್ಡ್ ಆಸ್ಪೈರ್ ಮತ್ತು ಫ್ರೀಸ್ಟೈಲ್ ಕಾರುಗಳಿಗೆ ಫಿಗೊ ಮಾದರಿಯ ರಿಯಾಯಿಗಳನ್ನು ನೀಡಲಾಗಿದೆ. ಇನ್ನು ಹಳೆಯ ಫೋರ್ಡ್ ಕಾರುಗಳನ್ನು ವಿನಿಮಯ ಮಾಡಿದಾಗ ರೂ.20,000 ವರೆಗಿನ ಎಕ್ಸ್‌ಚೆಂಜ್ ಬೋನಸ್ ಲಭ್ಯವಿದೆ. ಇನ್ನು ಇತರ ಬ್ರ್ಯಾಂಡ್‌ನ ಕಾರಿಗೆ ಎಕ್ಸ್‌ಚೆಂಜ್ ಬೋನಸ್ ರೂ,7,000 ಗಳಿದೆ. ಇದಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ.4,000 ಸಹ ಇದರ ಮೇಲೆ ಲಭ್ಯವಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಇಕೋಸ್ಪೋರ್ಟ್ ಮತ್ತು ಎಂಡೀವರ್‌ನಲ್ಲಿ ಲಭ್ಯವಿರುವ ರಿಯಾಯಿತಿಗಳು ಇತರ ಮಾದರಿಗಳಂತೆಯೇ ಇರುತ್ತವೆ. ಈ ಕಾರುಗಳ ಮೇಲೆ ಕಾರ್ಪೊರೇಟ್ ರಿಯಾಯಿತಿ ರೂ.4,000 ನೀಡಲಾಗುತ್ತಿದೆ, ಹಳೆಯ ಫೋರ್ಡ್ ಕಾರನ್ನು ವಿನಿಮಯ ಮಾಡಿಕೊಂಡಾಗ ರೂ.20,000 ವರೆಗೆ ಎಕ್ಸ್‌ಚೆಂಜ್ ಬೋನಸ್ ಲಭ್ಯವಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಇತರ ಬ್ರಾಂಡ್‌ಗಳ ಕಾರುಗಳನ್ನು ವಿನಿಮಯ ಮಾಡಿಕೊಂಡಾಗ ರೂ.7,000 ಎಕ್ಸ್‌ಚೆಂಜ್ ಬೋನಸ್ ಲಭ್ಯವಿರುತ್ತದೆ. ಇದಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ.4,000 ಸಹ ಇದರ ಮೇಲೆ ಲಭ್ಯವಿದೆ. ಅಸ್ತಿತ್ವದಲ್ಲಿರುವ ಫೋರ್ಡ್ ಮಾಲೀಕರಿಗೆ ಪ್ರತ್ಯೇಕವಾಗಿ ರೂ.5,000 ವರೆಗೆ ಲಾಯಲ್ಟಿ ಆಫರ್ ಲಭ್ಯವಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಒಟ್ಟಾರೆಯಾಗಿ ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಲ್ಲಾ ಕಾರುಗಳ ಮೇಲೆ ಒಂದೇ ರೀತಿಯಲ್ಲಿ ಆಫರ್ ಅನ್ನು ನೀಡಲಾಗಿದೆ. ಫೋರ್ಡ್ ಕಂಪನಿಯು ತನ್ನ ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಫೋರ್ಡ್ ಕಂಪನಿಯ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಬಿಎಸ್ 6 ಪ್ರೇರಿತ 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಫೋರ್ಡ್ ಕಂಪನಿಯ ಎಂಡೀವರ್ ಎಸ್‍‍ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಭವಿಷ್ಯಕ್ಕೆ ಹಲವು ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಮುಂಬರುವ ಮಹೀಂದ್ರಾ ಎಕ್ಸ್‌ಯುವಿ 700 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಸಿ-ಎಸ್‌ಯುವಿ ನಿರ್ಮಿಸಲು ಯೋಜಿಸಿದ್ದರು.

Model Exchange Bonus (Ford/non-Ford car) Corporate Discount
Ford Figo ₹20,000/₹7,000 ₹4,000
Ford Aspire ₹20,000/₹7,000 ₹4,000
Ford Freestyle ₹20,000/₹7,000 ₹4,000
Ford Ecosport ₹20,000/₹7,000 ₹4,000
Ford Endeavour ₹20,000/₹7,000 ₹4,000
ಜನಪ್ರಿಯ ಫೋರ್ಡ್ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಆದರೆ ಫೋರ್ಡ್ ಮತ್ತು ಮಹೀಂದ್ರಾ ತಮ್ಮ ಜೆವಿಯೊಂದಿಗೆ ಮುಂದುವರಿಯದಿರಲು ನಿರ್ಧರಿಸಿದಾಗ ಭವಿಷ್ಯದ ಎಲ್ಲಾ ಜಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಯಿತು. ಆದರೆ ಪೋರ್ಡ್ ಕಂಪನಿಯು ಕೆಲವು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗೊಳಿಸಲಿದೆ.

Most Read Articles

Kannada
English summary
Ford May 2021 Discounts. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X