ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ಅಮೆರಿಕಾದಲ್ಲಿ ಕೇಂದ್ರ ಕಚೇರಿ ಹೊಂದಿರುವ Ford ಕಂಪನಿಯು 1990 ರ ದಶಕದಿಂದಲೂ ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲಿರುವ ವಿದೇಶಿ ಆಟೋಮೊಬೈಲ್ ಕಂಪನಿಗಳಲ್ಲಿ Ford ಕಂಪನಿ ಮುಂಚೂಣಿಯಲ್ಲಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ಯಾವುದೇ ಒಂದು ಸಂಗತಿಗೆ ಆರಂಭವಿರುವ ಹಾಗೆ ಅಂತ್ಯವೂ ಇರುತ್ತದೆ. Ford ಕಂಪನಿಯ ವಿಷಯದಲ್ಲಿಯೂ ಹೀಗೆಯೇ ಆಗಿದೆ. Ford ಕಂಪನಿಯು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮೂಲದ ಖ್ಯಾತ ಕಾರು ತಯಾರಕ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

Ford ಕಂಪನಿಯು ಕಳೆದ 10 ವರ್ಷಗಳಿಂದ ಭಾರತದಲ್ಲಿ ಸುಮಾರು 2 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಲಭ್ಯ ಮಾಹಿತಿಗಳ ಪ್ರಕಾರ 2022 ರ ಎರಡನೇ ಹಣಕಾಸು ತ್ರೈ ಮಾಸಿಕದ ನಂತರ Ford ಕಂಪನಿಯು ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. Ford ಕಂಪನಿಯ ಈ ನಿರ್ಧಾರವು ಕಂಪನಿಯ ಉದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ತನ್ನ ನಿರ್ಧಾರದಿಂದ ಆಘಾತಕ್ಕೊಳಗಾಗಿರುವ ಉದ್ಯೋಗಿಗಳು, ವಿತರಕರು ಹಾಗೂ ಷೇರುದಾರರೊಂದಿಗೆ ನಿಕಟವಾಗಿ ಸಮಾಲೋಚನೆ ನಡೆಸುವುದಾಗಿ Ford ಕಂಪನಿ ತಿಳಿಸಿದೆ. ಆದರೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಫಾಡಾ) Ford ಕಂಪನಿಯ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ಈ ಬಗ್ಗೆ ಫೋರ್ಡ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅನುರಾಗ್ ಮೆಹ್ರೋತ್ರಾ ರವರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಫಾಡಾ ಅಧ್ಯಕ್ಷ ವಿಂಕೇಶ್ ಗುಲಾಟಿ ತಿಳಿಸಿದ್ದಾರೆ. Ford ಕಂಪನಿಯು ಈಗ ಭಾರತದಲ್ಲಿ Ford ಕಾರುಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಸೇವೆಗಳನ್ನು ಮುಂದುವರೆಸಲಾಗುವುದು ಎಂದು ಭರವಸೆ ನೀಡಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ತನ್ನ ಗ್ರಾಹಕರಿಗೆ ಎಂದಿನಂತೆ ಸೇವೆ ನೀಡಲು ಯಾವುದೇ ತೊಂದರೆಯಿಲ್ಲವೆಂದು Ford ಕಂಪನಿ ತಿಳಿಸಿದೆ. ಫಾಡಾ, Ford ಕಂಪನಿಯ ಈ ಹೇಳಿಕೆಯನ್ನು ಸ್ವಾಗತಿಸಿದೆ. ಈಗ ಭಾರತದಲ್ಲಿ ಒಟ್ಟು 170 ಫೋರ್ಡ್ ಡೀಲರ್ ಗಳು ಕಾರ್ಯನಿರ್ವಹಿಸುತ್ತಿದ್ದು, 391 ಟಚ್ ಸೆಂಟರ್ ಗಳಿವೆ. ಫಾಡಾ ಪ್ರಕಾರ Ford ಕಂಪನಿಯ ಡೀಲರ್ ಶಿಪ್ ಹಾಗೂ ಟಚ್ ಸೆಂಟರ್ ಗಳ ಮೂಲಕ ಸುಮಾರು 40,000 ಜನರಿಗೆ ಉದ್ಯೋಗ ದೊರೆತಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ದೇಶಾದ್ಯಂತ ಇವುಗಳನ್ನು ಸ್ಥಾಪಿಸಲು ಸುಮಾರು ರೂ. 2,000 ಕೋಟಿ ಖರ್ಚು ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ವಿತರಕರನ್ನು ರಿಕಾಲ್ ಮಾಡುವುದು ನಿಜಕ್ಕೂ ಕಠಿಣ ಸಂಗತಿಯಾಗಿದೆ. Ford ಕಂಪನಿಯ ವಿತರಕರನ್ನು ಕಾಡುತ್ತಿರುವ ಮತ್ತೊಂದು ಸಂಗತಿಯೆಂದರೆ ಅವರ ಬಳಿಯಿರುವ ವಾಹನಗಳು.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ವರದಿಗಳ ಪ್ರಕಾರ ಭಾರತದಲ್ಲಿರುವ Ford ಕಂಪನಿಯ ವಿತರಕರು ಸದ್ಯಕ್ಕೆ ಸುಮಾರು 1,000 ಕಾರುಗಳನ್ನು ತಮ್ಮ ಬಳಿ ಹೊಂದಿದ್ದಾರೆ. ಉತ್ಪಾದನಾ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ಈ 1,000 ಕಾರುಗಳನ್ನು ಮಾರಾಟ ಮಾಡುವುದು ವಿತರಕರಿಗೆ ದೊಡ್ಡ ಸವಾಲಾಗಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ಮತ್ತೊಂದೆಡೆ Ford ಡೀಲರ್‌ಗಳು ಭಾರತದ ಪ್ರಮುಖ ಬ್ಯಾಂಕ್‌ಗಳಿಂದ ರೂ. 150 ಕೋಟಿಗಳವರೆಗೆ ಸಾಲ ಪಡೆದಿದ್ದಾರೆ. ಈಗ ಅದನ್ನು ಹೇಗೆ ಮರು ಪಾವತಿಸುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. 1,000 ಕಾರುಗಳಲ್ಲದೇ ಕೆಲವು ಡೆಮೊ ಕಾರುಗಳು ಸಹ ಫೋರ್ಡ್ ಡೀಲರ್‌ಶಿಪ್‌ಗಳ ಬಳಿಯಿವೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ಹಲವಾರು ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡುತ್ತಿದ್ದರೂ ಯಾರೂ ಸಹ ಈ ಕಾರುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಹಳೆಯ Ford ವಿತರಕರು ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯಿಂದ ಪಾರಾಗಬಹುದು. ಆದರೆ ಹೊಸದಾಗಿ Ford ಡೀಲರ್ ಶಿಪ್ ಪಡೆದವರು ಹೆಚ್ಚು ಪರಿಣಾಮ ಅನುಭವಿಸ ಬೇಕಾಗುತ್ತದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

Ford ಕಂಪನಿಯು ಕೊನೆಯದಾಗಿ 5 ತಿಂಗಳ ಹಿಂದೆ ಹೊಸ ವಿತರಕರನ್ನು ನೇಮಿಸಿತು. ಅವರು ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಫಾಡಾ ಎಚ್ಚರಿಕೆ ನೀಡಿದೆ. ಫಾಡಾ ಪ್ರಕಾರ ವಾಹನ ತಯಾರಕ ಕಂಪನಿಗಳ ಹಠಾತ್ ಕಾರ್ಯಾಚರಣೆ ಸ್ಥಗಿತಗಳು ದೇಶದಲ್ಲಿ ವಿಶೇಷ ಮಾಲೀಕರ ರಕ್ಷಣೆ ಕಾನೂನಿನ ಕೊರತೆಯಿಂದ ಸಂಭವಿಸಿರಬಹುದು.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

ಈ ಹಿಂದೆ General Motors, Harley Davidson, Mantrux, UM ಸೇರಿದಂತೆ ಹಲವು ಕಂಪನಿಗಳು ಇದೇ ರೀತಿ ಭಾರತದಲ್ಲಿ ಹಠಾತ್ ಆಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದವು. ಈ ಕಾರಣಕ್ಕಾಗಿಯೇ ಫಾಡಾ, ಮಾಲೀಕತ್ವ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದೆ. ಚೀನಾ, ರಷ್ಯಾ, ಆಸ್ಟ್ರೇಲಿಯಾ, ಇಟಲಿ, ಬ್ರೆಜಿಲ್, ಮಲೇಷಿಯಾ ಹಾಗೂ ಇಂಡೋನೇಷ್ಯಾದಂತಹ ದೇಶಗಳಲ್ಲಿ ಈ ರೀತಿಯ ಕಾನೂನುಗಳು ಈಗಾಗಲೇ ಜಾರಿಯಲ್ಲಿವೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

Ford ಕಂಪನಿಯು ಕಳೆದ ಒಂದೆರಡು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ 1 ಬಿಲಿಯನ್ ಡಾಲರ್ ನಿಂದ 1.5 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ. Ford ಕಂಪನಿಯು ಇನ್ನು ಮುಂದೆ ಭಾರತದಲ್ಲಿ ಪ್ರಮುಖ ಮಾದರಿಗಳ ಕಂಪ್ಲೀಟ್ಲಿ ನಾಕ್ ಡೌನ್ ಅಥವಾ ಕಂಪ್ಲೀಟ್ಲಿ ಬಿಲ್ಟ್ ಕಾರುಗಳೊಂದಿಗೆ ಕಾರ್ಯಾಚರಣೆ ಮುಂದುವರೆಸಲಿದೆ. ಇದರ ಜೊತೆಗೆ ಕಂಪನಿಯು ಈಗ ಅಸ್ತಿತ್ವದಲ್ಲಿರುವ ತನ್ನ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರೆಸಲಿದೆ.

ಡೀಲರ್'ಗಳಿಗೆ ಸಂಕಷ್ಟ ತಂದಿಟ್ಟ Ford ಕಂಪನಿಯ ನಿರ್ಧಾರ

Mahindra and Mahindra ಕಂಪನಿಯ ಜೊತೆಗಿನ Ford ಕಂಪನಿಯ ಜಂಟಿ ಸಹಭಾಗಿತ್ವವು ಕೊನೆಯಾದಾಗಿನಿಂದಲೂ Ford ಕಂಪನಿಯು ಭಾರತದಲ್ಲಿಅನಿಶ್ಚಿತತೆಯನ್ನು ಎದುರಿಸುತ್ತಿತ್ತು. ಕಂಪನಿಯು ಭಾರತದಲ್ಲಿ ಹೊಸ ಪಾಲುದಾರರ ಜೊತೆಗೂಡಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಈ ವರ್ಷದ ಆರಂಭದಲ್ಲಿ ತಿಳಿಸಿತ್ತು.

Most Read Articles

Kannada
Read more on ಫೋರ್ಡ್ ford
English summary
Ford india dealers are in trouble after company s decision details
Story first published: Friday, September 10, 2021, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X