ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ ತನ್ನ ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ಬೇಸ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದೆ. ಇದರ ಪರಿಣಾಮವಾಗಿ, ಫೋರ್ಡ್ ಎಂಡೀವರ್ ಪ್ರೀಮಿಯಂ ಆಫ್-ರೋಡ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.33.80 ಲಕ್ಷಗಳಾಗಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಟೈಟಾನಿಯಂ 4X2 ಬೇಸ್ ವೆರಿಯೆಂಟ್ ಸ್ಥಗಿತಗೊಳಿಸಿದ ಹೊರತಾಗಿಯೂ, ಫೋರ್ಡ್ ಎಂಡೀವರ್ ಇನ್ನು 4X2 ಮತ್ತು 4X4 ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಮಾರಾಟ ಮಾಡುವ ಬಿಎಸ್-6 ಎಂಡೀವರ್ ಎಸ್‍‍ಯುವಿಯಲ್ಲಿ ಮಾತ್ರ ಸಿಂಗಲ್ ಟರ್ಬೂ ಎಂಜಿನ್ ಅನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಎಂಡೀವರ್ ನಲ್ಲಿ ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಈ ಪ್ರೀಮಿಯಂ ಎಸ್‌ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಫೋರ್ಡ್ ಕಂಪನಿಯು ಎಂಡೀವರ್ ಸ್ಪೋರ್ಟ್ ಮಾದರಿಯನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯು ಟೈಟಾನಿಯಂ ಪ್ಲಸ್ ಮಾದರಿಯನ್ನು ಆಧರಿಸಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಎಂಡೀವರ್ ಸ್ಪೋರ್ಟ್ ಹೊರಭಾಗದಲ್ಲಿ ಬ್ಲ್ಯಾಕ್ ಕಾಸ್ಮೆಟಿಕ್ ಅಂಶಗಳನ್ನು ಒಳಗೊಂಡಿದೆ, ಇದು ಈ ಎಂಡೀವರ್ ಸ್ಪೋರ್ಟ್ ಎಸ್‍ಯುವಿಗೆ ಮತ್ತಷ್ಟು ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ. ಇದರಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಬ್ಲ್ಯಾಕ್ ಲೋ ಬಂಪರ್, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ಹೆಚ್ಚುವರಿಯಾಗಿ ನೇಮ್-ಪ್ಲೇಟ್ ಮತ್ತು ಒಆರ್‌ವಿಎಂಗಳಲ್ಲಿ ಬ್ಲ್ಯಾಕ್ ಅಂಶಗಳು ಒಳಗೊಂಡಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಎಂಡೀವರ್ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಫೋರ್ಡ್ ಎಂಡೀವರ್ ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಅಫ್-ರೋಡ್ ವಿಭಾಗದಲ್ಲಿಯು ಫೋರ್ಡ್ ಎಂಡೀವರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಸ್‍ಯುವಿಯಾಗಿದೆ.

ಎಂಡೀವರ್ ಎಸ್‍ಯುವಿಯ ಟೈಟಾನಿಯಂ 4X2 ವೆರಿಯೆಂಟ್ ಸ್ಥಗಿತಗೊಳಿಸಿದ ಫೋರ್ಡ್

ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Ford Endeavour Titanium 4X2 Base Variant Discontinued. Read In Kannada.
Story first published: Wednesday, July 7, 2021, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X