ಆಸ್ಪೈರ್ ಉತ್ಪಾದನೆಯೊಂದಿಗೆ ಭಾರತದಲ್ಲಿ ಕಾರು ಉತ್ಪಾದನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ Ford

ಅಮೆರಿಕದ ವಾಹನ ತಯಾರಕ ಕಂಪನಿ ಫೋರ್ಡ್(Ford) ಭಾರತದಲ್ಲಿ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಈಗಾಗಲೇ ಹೇಳಿಕೊಂಡಿದ್ದು, ಕಂಪನಿಯು ಇದೀಗ ಅಧಿಕೃತವಾಗಿ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಫೋರ್ಡ್ ಇಂಡಿಯಾ ಕಂಪನಿಯು ತಮಿಳುನಾಡಿನ ಚೆನ್ನೈ ಹೊರವಲಯದಲ್ಲಿ ಒಂದು ಮತ್ತು ಗುಜರಾತ್‌ನ ಸನಂದಾದಲ್ಲಿ ಒಂದು ಕಾರು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇಂದು ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಕೊನೆಯ ಯನಿಟ್ ಉತ್ಪಾದನೆಯ ಮೂಲಕ ಗುಜರಾತಿನಲ್ಲಿರುವ ಸನಂದಾ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಿತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಭಾರತದಿಂದ ನಿರ್ಗಮಿಸುವ ಕುರಿತು ಫೋರ್ಡ್ ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡಿದ್ದರೂ ಕೂಡಾ ನಿಮಯ ಅನುಸಾರವಾಗಿ ತನ್ನ ಗ್ರಾಹಕರ ಸೇವೆಗಳನ್ನು ಮುಂದಿನ ಹತ್ತು ವರ್ಷಗಳಿಗೆ ಪೂರೈಸಲು ಸಿದ್ದವಾಗುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಸ್ಟಾಕ್ ಮಾಡಲಾಗಿದ್ದ ಎಲ್ಲಾ ಬಿಡಿಭಾಗಗಳ ಮುಕ್ತಾಯದ ತನಕ ಉತ್ಪಾದನೆಯನ್ನು ಮುಂದುವರಿಸಿತ್ತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಭಾರತದಲ್ಲಿ ಒಟ್ಟು ಐದು ಕಾರು ಮಾದರಿಗಳ ಉತ್ಪಾದನೆಯನ್ನು ಹೊಂದಿದ್ದ ಫೋರ್ಡ್ ಕಂಪನಿಯು ಇಕೋಸ್ಪೋರ್ಟ್, ಫಿಗೋ, ಫ್ರೀಸ್ಟೈಲ್, ಎಂಡೀವರ್ ಮತ್ತು ಆಸ್ಪೈರ್ ಕಾರು ಮಾದರಿಗಳನ್ನು ಸ್ಥಳೀಯವಾಗಿಯೇ ಅಭಿವೃದ್ದಿಗೊಳಿಸಿ ಮಾರಾಟ ಸೌಲಭ್ಯ ಹೊಂದಿತ್ತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಆದರೆ ಫೋರ್ಡ್ ಕಾರುಗಳಲ್ಲಿ ಇಕೋಸ್ಪೋರ್ಟ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳು ನೀರಿಕ್ಷೆಯ ಮಟ್ಟದಲ್ಲಿ ಮಾರಾಟಗೊಳ್ಳಲು ಸಾಧ್ಯವಾಗಲಿಲ್ಲ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಹೊಸ ವಿನ್ಯಾಸದ ಕಾರುಗಳ ಅಬ್ಬರ ನಡುವೆ ಫೋರ್ಡ್ ಕಾರುಗಳ ಮಾರಾಟವು ತೀವ್ರ ಹಿನ್ನಡೆ ಕಂಡಿದ್ದವು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಕೇವಲ ಶೇ. 1.70 ರಷ್ಟು ಮಾರಾಟ ಪಾಲು ಹೊಂದಿದ್ದ ಫೋರ್ಡ್ ಕಂಪನಿಯು ಹಲವಾರು ಮಾರುಕಟ್ಟೆ ಸುಧಾರಣಾ ಕ್ರಮಗಳ ಹೊರತಾಗಿಯು ಗ್ರಾಹಕರ ಬೇಡಿಕೆ ಅನುಭವಿಸಿತು. ಹೀಗಾಗಿ 2019ರಲ್ಲೇ ಭಾರತದಿಂದ ಹೊರಹೊಗುವ ಬಗ್ಗೆ ತೀರ್ಮಾಸಿದ ಕಂಪನಿಯು ಹೊಸ ಯೋಜನೆಯನ್ನು ತಟಸ್ಥಗೊಳಿಸಿ ಅಂತಿಮವಾಗಿ 2021ರಲ್ಲಿ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಸದ್ಯ ಫೋರ್ಡ್ ಕಂಪನಿಯು ಭಾರತದಲ್ಲಿರುವ ತನ್ನ ಎರಡೂ ಉತ್ಪಾದನಾ ಘಟಕಗಳನ್ನು ಮುಚ್ಚುತ್ತಿದ್ದರೂ ಸಹ ಭಾರತೀಯ ಮಾರುಕಟ್ಟೆನ ಕಾರು ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸುತ್ತಿಲ್ಲ. ಫೋರ್ಡ್ ಕಂಪನಿಯು ಭಾರತದಲ್ಲಿನ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಲಿದ್ದು, ಸಾಮಾನ್ಯ ಕಾರುಗಳ ಬದಲಾಗಿ ಹೈ ಎಂಡ್ ಕಾರು ಮಾದರಿಗಳಾದ ಫೋರ್ಡ್ ಮಸ್ಟಾಂಗ್, ಫೋರ್ಡ್ ಮಸ್ಟಾಂಗ್ ಮ್ಯಾಕ್-ಇ ಎಲೆಕ್ಟ್ರಿಕ್ ಕಾರು ಸೇರಿದಂತೆ ಕೆಲವು ಆಮದು ಕಾರು ಮಾದರಿಗಳನ್ನು ಭಾರತದಲ್ಲಿ ಮಾರಾಟ ಮುಂದುವರಿಸಲಿದೆ.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಭಾರತದಲ್ಲಿ ಕಾರು ಮಾರಾಟ ಪ್ರಕ್ರಿಯೆಗಾಗಿ ಕಾರ್ಪೊರೇಟ್ ಕಚೇರಿಯನ್ನು ಹೊಂದಲಿರುವ ಫೋರ್ಡ್ ಕಂಪನಿಯು ಚೆನ್ನೈ ಮತ್ತು ಗುಜರಾತ್‌ನ ಸನಂದಾ ಘಟಕಗಳನ್ನು ಸ್ಥಳೀಯ ಕಾರು ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದೆ.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಚೆನ್ನೈನಲ್ಲಿರುವ ಫೋರ್ಡ್ ಕಂಪನಿಯ ಉತ್ಪಾದನಾ ಘಟಕವನ್ನು ಟಾಟಾ ಮೋಟಾರ್ಸ್ ಕಂಪನಿಯು ಖರೀದಿಸುತ್ತಿದೆ ಎನ್ನುವ ವರದಿಗಳು ಲಭ್ಯವಾಗಿದ್ದು, ಇದಕ್ಕೆ ಪೂರಕವಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಫೋರ್ಡ್ ಉತ್ಪಾದನಾ ಘಟಕ ಖರೀದಿ ಬಗೆಗೆ ಟಾಟಾ ಕಂಪನಿಯ ಹಿರಿಯ ಅಧಿಕಾರಗಳ ತಂಡವು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಹಾಗೆಯೇ ಗುಜರಾತ್‌ನಲ್ಲಿರುವ ಸನಂದಾ ಘಟಕವನ್ನು ಖರೀದಿ ಮಾಡಲು ಟಾಟಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಕಂಪನಿಗಳು ಪೈಪೋಟಿ ನಡೆಸುತ್ತಿದ್ದು, ಗುಜುರಾತ್‌ನಲ್ಲಿ ಈಗಾಗಲೇ ಕಾರು ಉತ್ಪಾದನಾ ಘಟಕ ಹೊಂದಿರುವ ಎಂಜಿ ಮೋಟಾರ್ ಕಂಪನಿಯು ಕಾರು ಉತ್ಪಾದನೆ ಹೆಚ್ಚಿಸಲು ಯೋಜನೆಯಲ್ಲಿರುವುದರಿಂದ ಫೋರ್ಡ್ ಕಾರು ಉತ್ಪಾದನಾ ಘಟಕದ ಮೇಲೆ ಕಣ್ಣೀಟ್ಟಿದೆ.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಆದರೆ ಫೋರ್ಡ್ ಕಾರು ಉತ್ಪಾದನಾ ಘಟಕಗಳನ್ನು ಯಾರು ಖರೀದಿಸುತ್ತಾರೆ ಎನ್ನುವ ಕುತೂಹಲಗಳಿದ್ದು, ಶೀಘ್ರದಲ್ಲೇ ಫೋರ್ಡ್ ಉತ್ಪಾದನಾ ಘಟಕ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಇನ್ನು ಫೋರ್ಡ್ ಕಂಪನಿಯು 1995ರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಜೊತೆ 50-50 ಜಂಟಿ ಉದ್ಯಮ ಆರಂಭಿಸುವ ಮೂಲಕ ಮಹೀಂದ್ರಾ ಫೋರ್ಡ್ ಇಂಡಿಯಾ ಲಿಮಿಟೆಡ್ (MFIL) ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಯನ ಆರಂಭಿಸಿತ್ತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಜಂಟಿ ಉದ್ಯಮದ ಮೂಲಕ ಮಾರುಕಟ್ಟೆ ಅಧಿಪತ್ಯಕ್ಕಾಗಿ ಹವಣಿಸುತ್ತಿದ್ದ ಫೋರ್ಡ್ ಕಂಪನಿಯು 1998ರ ವೇಳೆಗೆ ಜಂಟಿ ಉದ್ಯಮದಲ್ಲಿ ಶೇ. 78 ರಷ್ಟು ಷೇರುಗಳನ್ನು ಹೊಂದುವ ಮೂಲಕ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಮರುನಾಮಕರಣಗೊಂಡಿತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಭಾರತದಲ್ಲಿ ಉತ್ತಮ ಮಾರುಕಟ್ಟೆ ವಿಸ್ತರಣೆ ಕೈಗೊಂಡ ಫೋರ್ಡ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮೊದಲ ಕಾರು ಮಾದರಿಯಾಗಿ ಎಸ್ಕಾರ್ಟ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ತದನಂತರ ಐಕಾನ್ ಸೆಡಾನ್ ಮಾದರಿಯನ್ನು ಬಿಡುಗಡೆಗೊಳಿಸಿದ ಫೋರ್ಡ್ ಕಂಪನಿಯು ಐಕಾನಿಕ್ ಮಾದರಿಯೊಂದಿಗೆ ಅತಿ ಹೆಚ್ಚು ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

1999ರಿಂದ 2011ರ ತನಕವು ಮಾರಾಟದಲ್ಲಿದ್ದ ಐಕಾನಿಕ್ ಸೆಡಾನ್ ಮಾದರಿಯು ಉತ್ತಮ ಬೇಡಿಕೆ ಹೊಂದಿತ್ತು. ಐಕಾನಿಕ್ ನಂತರ ಮಾಂಡಿವೊ ಸೆಡಾನ್ ಪರಿಚಯಿಸಿದ ಕಂಪನಿಯು ತದನಂತರದಲ್ಲಿ ಫ್ಯೂಜನ್, ಫಿಯೆಸ್ಟಾ ಕ್ಲಾಸಿಕ್, ಗ್ಲೊಬಲ್ ಫಿಯೆಸ್ಟಾ ಕಾರುಗಳನ್ನು ಪರಿಚಯಿಸಿತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಫ್ಯೂಜನ್, ಫಿಯೆಸ್ಟಾ ಕ್ಲಾಸಿಕ್, ಗ್ಲೊಬಲ್ ಫಿಯೆಸ್ಟಾ ಕಾರುಗಳು ಬಿಡುಗಡೆಯ ನಂತರ ಆರಂಭದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡರು ನಂತರದಲ್ಲಿ ಬೇಡಿಕೆ ಪಡೆದುಕೊಳ್ಳುವಲ್ಲಿ ವಿಫಲವಾದವು. ಹೀಗಾಗಿ ಫ್ಯೂಜನ್, ಫಿಯೆಸ್ಟಾ ಕ್ಲಾಸಿಕ್, ಗ್ಲೊಬಲ್ ಫಿಯೆಸ್ಟಾ ಕಾರುಗಳನ್ನು ಸ್ಥಗಿತಗೊಳಿಸಿದ ಕಂಪನಿಯು ಎಂಡೀವರ್, ಫಿಗೊ, ಇಕೋಸ್ಪೋರ್ಟ್, ಫಿಗೊ ಆಸ್ಪೈರ್ ಮತ್ತು ಫ್ರೀಸ್ಟೈಲ್ ಬಿಡುಗಡೆ ಮಾಡಿತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

2015ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 8 ಹೊಸ ಕಾರುಗಳ ಬಿಡುಗಡೆಗಾಗಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಗುಜರಾತ್ ಕಾರು ಘಟಕವನ್ನು 460 ಎಕರೆಗೆ ವಿಸ್ತರಿಸಿದ ಫೋರ್ಡ್ ಕಂಪನಿಯು ವಾರ್ಷಿಕವಾಗಿ 4.40 ಲಕ್ಷ ಕಾರಗಳನ್ನು ಮತ್ತು 6.10 ಲಕ್ಷ ಕಾರ್ ಎಂಜಿನ್ ಉತ್ಪಾದನೆಯ ಸೌಲಭ್ಯ ಪಡೆದುಕೊಂಡಿತ್ತು.

ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ Ford

ಆದರೆ ಹೊಸ ಬಂಡವಾಳ ಮತ್ತು ಹೊಸ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಮಾರುತಿ ಸುಜುಕಿ, ಹ್ಯುಂಡೈ ನಿರ್ಮಾಣದ ಹೊಸ ಮಾದರಿಯ ಹ್ಯಾಚ್‌ಬ್ಯಾಕ್, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಪೈಪೋಟಿಯು ಫೋರ್ಡ್ ಕಂಪನಿಗೆ ಭಾರೀ ಹೊಡೆತ ನೀಡಿದವು.

Image Courtesy: Labour News - India

Most Read Articles

Kannada
Read more on ಫೋರ್ಡ್ ford
English summary
Ford india last car rolls out from gujarat sanand plant details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X