ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಹೊಸ ಹಣಕಾಸು ವರ್ಷದಲ್ಲಿ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳ ಬೆಲೆ ಹೆಚ್ಚಿಸಿದೆ. ಅದರಂತೆ ಪೋರ್ಡ್ ಇಂಡಿಯಾ ಕಂಪನಿಯು ಕೂಡ ತನ್ನ ಸರಣಿಯಲ್ಲಿರುವ ಜನಪ್ರಿಯ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಫೋರ್ಡ್ ಇಂಡಿಯಾ ಫಿಗೋ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೀವರ್ ಒಳಗೊಂಡಿರುವ ತನ್ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಪರಿಷ್ಕರಿಸಿದೆ. ಹೊಸ ಬೆಲೆಗಳು ಈ ತಿಂಗಳ ಆರಂಭದಿಂದಲೇ ಜಾರಿಯಾಗಿದೆ. ಇನ್ನು ಬೆಲೆ ಹೆಚ್ಚಳದ ಪ್ರಮಾಣವು ಮಾದರಿಗಳಿಗೆ ಅನುಗುಣವಾಗು ಬದಲಾವಣೆಯಾಗುತ್ತದೆ. ಫೋರ್ಡ್ ಕಾರುಗಳ ಮಾದರಿವಾರು ಹೊಸ ಬೆಲೆಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಫೋರ್ಡ್ ಇಂಡಿಯಾ ಇತ್ತೀಚೆಗೆ ಇಕೋಸ್ಪೋರ್ಟ್‌ನ ಹೊಸ ಎಸ್ಇ ವೆರಿಯೆಂಟ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದು ಈ ಮೊದಲು ಭಾರತದಲ್ಲಿ ಮಾರಾಟವಾದ ವೆರಿಯೆಂಟ್ ಗಿಂತ ಭಿನ್ನವಾಗಿದೆ. ಇನ್ನು ಇಕೋಸ್ಪೋರ್ಟ್‌ನ ಟೈಟಾನಿಯಂ ಪ್ಲಸ್ ಎಸ್‌ಇ ಮತ್ತು ರೂಪಾಂತರಗಳಿಗೆ ಯಾವುದೇ ಬೆಲೆ ಏರಿಕೆಯನ್ನು ಪಡೆದುಕೊಂಡಿಲ್ಲ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಆದರೆ ಇಕೋಸ್ಪೋರ್ಟ್‌ನ ಆಂಬಿನ್ಟೆ, ಟ್ರೆಂಡ್ ಮತ್ತು ಟೈಟಾನಿಯಂ ರೂಪಾಂತರಗಳ ಬೆಲೆಯನ್ನು ರೂ.20,000 ಗಳವರೆಗೆ ಹೆಚ್ಚಿಸಲಾಗಿದೆ. ಸದ್ಯ ಇಕೋಸ್ಪೋರ್ಟ್‌ನ ಪೆಟ್ರೋಲ್ ಮಾದರಿಯ ಆರಂಭಿಕ ಬೆಲೆಯು ರೂ.8.19 ಲಕ್ಷಗಳಾಗಿದ್ದರೆ, ಡೀಸೆಲ್ ಮಾದರಿಯ ಆರಂಭಿಕ ಬೆಲೆಯು 8.89 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಫಿಗೊ ಮತ್ತು ಫ್ರೀಸ್ಟೈಲ್ ಕಾರುಗಳ ಎಲ್ಲಾ ರೂಪಾಂತರಗಳು ರೂ.18,000 ಗಳವರೆಗೆ ಬೆಲೆ ಏರಿಕೆ ಪಡೆದುಕೊಂಡಿದೆ. ಈ ಎರಡು ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಇದರಲ್ಲಿ 1.2-ಲೀಟರ್ ಎಂಜಿನ್ 95 ಬಿಹೆಚ್‍ಪಿ ಪವರ್ ಮತ್ತು 119 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಇನ್ನು ಪ್ರಮುಖ ಪೂರ್ಣ-ಗಾತ್ರದ ಎಂಡೀವರ್ ಎಸ್‍ಯುವಿಗೆ ಅತ್ಯಧಿಕ ಹೆಚ್ಚಳವನ್ನು ಪಡೆಯುತ್ತದೆ. ಎಂಡೀವರ್ ಎಸ್‍ಯುವಿಯ ಟೈಟಾನಿಯಂ ಪ್ಲಸ್ 4x2 ಎಟಿ ರೂಪಾಂತರವು ರೂ.70,000 ಗಳವರೆಗೆ ದುಬಾರಿಯಾಗಿದೆ. ಇನ್ನು ಈ ಎಸ್‍ಯುವಿಯ ಟೈಟಾನಿಯಂ ಪ್ಲಸ್ 4x4 ಎಟಿ ಮತ್ತು ಸ್ಪೋರ್ಟ್ 4x4 ರೂಪಾಂತರವು ರೂ.80,000 ಗಳವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಈ ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಫೋರ್ಡ್ ಕಾರುಗಳು

ಇನ್ನು ಫೋರ್ಡ್ ಕಂಪನಿಯ ಸಬ್-ನಾಲ್ಕು ಮೀಟರ್ ಕಾಂಪ್ಯಾಕ್ಟ್ ಸೆಡಾನ್ ಆಸ್ಪೈರ್ ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತಗಳು ರೂ.3,000 ಗಳವರೆಗೆ ಬೆಲೆ ಏರಿಕೆ ಪಡೆದುಕೊಂಡಿದೆ.

Most Read Articles

Kannada
Read more on ಫೋರ್ಡ್ ford
English summary
Ford Hikes Prices Its Entire Lineup. Read In Kannada.
Story first published: Friday, April 23, 2021, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X