ಭಾರತದಲ್ಲಿ 27 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಅಮೆರಿಕದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಫೋರ್ಡ್(Ford) ಭಾರತದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದ್ದು, ಭಾರತದಲ್ಲಿ ಸುಮಾರು 27 ವರ್ಷಗಳ ಕಾಲ ಆಟೋ ಉದ್ಯಮ ಕಾರ್ಯಾಚರಣೆ ನಡೆಸಿದ ಫೋರ್ಡ್ ಕಂಪನಿಯು ಭಾರತೀಯ ಆಟೋದಲ್ಲಿ ಒಂದು ಇತಿಹಾಸ ಹೊಂದಿದೆ.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಸ್ವತಂತ್ರ ಪೂರ್ವದಲ್ಲೇ ಭಾರತದಲ್ಲಿ ವಾಹನ ಉತ್ಪಾದನೆ ಆರಂಭಿಸಿದ್ದ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು 1926ರಲ್ಲಿ ಕೆನಡಾದ ಫೋರ್ಡ್ ಮೋಟಾರ್ ಕಂಪನಿಯ ಅಂಗಸಂಸ್ಥೆಯಾಗಿ ವಾಹನ ಉತ್ಪಾದನೆಯನ್ನು ಆರಂಭಿಸಿತ್ತು. ಆರಂಭದಲ್ಲಿ ವಿವಿಧ ವಾಹನಗಳಿಗೆ ಎಂಜಿನ್ ಪೂರೈಕೆ ಮಾಡುತ್ತಿದ್ದ ಫೋರ್ಡ್ ಕಂಪನಿಯು ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ವಾಹನ ಉತ್ಪಾದನೆ ಮಾಡಿ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ರಫ್ತು ಕೈಗೊಳ್ಳುತ್ತಿತ್ತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಲಾಭದ ಹಾದಿಯಲ್ಲಿರುವಾಗಲೇ ಫೋರ್ಡ್ ಇಂಡಿಯಾ ಕಂಪನಿಯು ತೀವ್ರ ಆಮದು ನಿರ್ಬಂಧಗಳನ್ನು ಎದುರಿಸಿದ ಪರಿಣಾಮವಾಗಿ ಮೇ 1953ರಲ್ಲಿ ದಿವಾಳಿಯಾಗುವ ಮೂಲಕ ಭಾರತದಲ್ಲಿ ವಾಹನ ಉತ್ಪಾದನೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಿತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಭಾರತೀಯ ಆಟೋ ಉದ್ಯಮದಲ್ಲಿ ಛಾಪು ಮೂಡಿಸಿ ಕಾರಣಾಂತರಗಳಿಂದ ಹೊರನಡೆದಿದ್ದ ಫೋರ್ಡ್ ಕಂಪನಿಯು ಸುಮಾರು 43 ವರ್ಷಗಳ ನಂತರ 1995ರಲ್ಲಿ ಮತ್ತೆ ಹೊಸತನದೊಂದಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿತು. ಆಟೋ ಉದ್ಯಮದಲ್ಲಿ ಆಗಷ್ಟೇ ಪ್ರಯಾಣಿಕ ವಾಹನಗಳ ಉತ್ಪಾದನೆಯಲ್ಲಿ ಗುರಿತಿಸಿಕೊಳ್ಳುತ್ತಿದ್ದ ಮಹೀಂದ್ರಾ ಜೊತೆ ಫೋರ್ಡ್ ಕಂಪನಿಯು ಸಹಭಾಗಿತ್ವ ಘೋಷಣೆ ಮಾಡಿತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಜೊತೆ 50-50 ಜಂಟಿ ಉದ್ಯಮ ಆರಂಭಿದ ಕಂಪನಿಯು ಮಹೀಂದ್ರಾ ಫೋರ್ಡ್ ಇಂಡಿಯಾ ಲಿಮಿಟೆಡ್ (MFIL) ಆಗಿ 1995ರ ಅಕ್ಟೋಬರ್‌ನಲ್ಲಿ ಮರಳಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಯುರೋಪ್ ನಲ್ಲಿದ್ದ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಲಾಯ್ತ.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಜಂಟಿ ಉದ್ಯಮದ ಮೂಲಕ ಮಾರುಕಟ್ಟೆ ಅಧಿಪತ್ಯಕ್ಕಾಗಿ ಹವಣಿಸುತ್ತಿದ್ದ ಫೋರ್ಡ್ ಕಂಪನಿಯು 1998ರ ವೇಳೆಗೆ ಜಂಟಿ ಉದ್ಯಮದಲ್ಲಿ ಶೇ. 78 ರಷ್ಟು ಷೇರುಗಳ ಮೂಲಕ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಮರುನಾಮಕರಣಗೊಂಡಿತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

2001ರ ವೇಳೆಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆ ವಿಸ್ತರಣೆ ಕೈಗೊಂಡ ಫೋರ್ಡ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮೊದಲ ಕಾರು ಮಾದರಿಯಾಗಿ 1996ರಲ್ಲಿ ಎಸ್ಕಾರ್ಟ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಎಸ್ಕಾರ್ಟ್ ಬಿಡುಗಡೆಯ ಸುಮಾರು 4 ವರ್ಷಗಳ ನಂತರ ಐಕಾನ್ ಸೆಡಾನ್ ಮಾದರಿಯನ್ನು ಬಿಡುಗಡೆಗೊಳಿಸಿದ ಫೋರ್ಡ್ ಕಂಪನಿಯು ಐಕಾನಿಕ್ ಮಾದರಿಯೊಂದಿಗೆ ಅತಿ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

1999ರಿಂದ 2011ರ ತನಕವು ಮಾರಾಟದಲ್ಲಿದ್ದ ಐಕಾನಿಕ್ ಸೆಡಾನ್ ಮಾದರಿಯು ಉತ್ತಮ ಬೇಡಿಕೆ ಹೊಂದಿತ್ತು. ಐಕಾನಿಕ್ ನಂತರ ಮಾಂಡಿವೊ ಸೆಡಾನ್ ಪರಿಚಯಿಸಿದ ಕಂಪನಿಯು ತದನಂತರದಲ್ಲಿ ಫ್ಯೂಜನ್, ಫಿಯೆಸ್ಟಾ ಕ್ಲಾಸಿಕ್, ಗ್ಲೊಬಲ್ ಫಿಯೆಸ್ಟಾ ಕಾರುಗಳನ್ನು ಪರಿಚಯಿಸಿತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಫ್ಯೂಜನ್, ಫಿಯೆಸ್ಟಾ ಕ್ಲಾಸಿಕ್, ಗ್ಲೊಬಲ್ ಫಿಯೆಸ್ಟಾ ಕಾರುಗಳು ಬಿಡುಗಡೆಯ ನಂತರ ಆರಂಭದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡರು ನಂತರದಲ್ಲಿ ಬೇಡಿಕೆ ಪಡೆದುಕೊಳ್ಳುವಲ್ಲಿ ವಿಫಲವಾದವು. ಹೀಗಾಗಿ ಫ್ಯೂಜನ್, ಫಿಯೆಸ್ಟಾ ಕ್ಲಾಸಿಕ್, ಗ್ಲೊಬಲ್ ಫಿಯೆಸ್ಟಾ ಕಾರುಗಳನ್ನು ಸ್ಥಗಿತಗೊಳಿಸಿದ ಕಂಪನಿಯು ಎಂಡೀವರ್, ಫಿಗೊ, ಇಕೋಸ್ಪೋರ್ಟ್, ಫಿಗೊ ಆಸ್ಪೈರ್ ಮತ್ತು ಫ್ರೀಸ್ಟೈಲ್ ಬಿಡುಗಡೆ ಮಾಡಿದರು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಚೆನ್ನೈ ಮತ್ತು ಗುಜರಾತ್‌ನಲ್ಲಿ ಎರಡು ಕಾರು ಉತ್ಪಾದನಾ ಘಟಕಗಳನ್ನು ಹೊಂದಿದ್ದ ಫೋರ್ಡ್ ಕಂಪನಿಯು ಚೆನ್ನೈ ಘಟಕದಲ್ಲಿ ಕಾರು ಮಾದರಿಗಳನ್ನು ಮತ್ತು ಗುಜರಾತ್‌ನ ಸನಂದಾ ಘಟಕದಲ್ಲಿ ಕಾರುಗಳ ಜೊತೆಗೆ ಎಂಜಿನ್ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿತ್ತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

2012ರ ಹೊತ್ತಿಗೆ ಭಾರತದಲ್ಲಿನ ಕಾರ್ಯಾಚರಣೆಗಾಗಿ ಸುಮಾರು 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದ ಫೋರ್ಡ್ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡಲಾದ ಶೇ.40 ರಷ್ಟು ಪ್ರಮಾಣದ ಎಂಜಿನ್‌ಗಳನ್ನು ಮತ್ತು ಶೇ.25 ರಷ್ಟು ಕಾರುಗಳನ್ನು ವಿಶ್ವದ ಪ್ರಮುಖ 35 ರಾಷ್ಟ್ರಗಳಿಗೆ ರಫ್ತು ಸೌಲಭ್ಯ ಹೊಂದಿತ್ತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

2015ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 8 ಹೊಸ ಕಾರುಗಳ ಬಿಡುಗಡೆಗಾಗಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಗುಜರಾತ್ ಕಾರು ಘಟಕವನ್ನು 460 ಎಕರೆಗೆ ವಿಸ್ತರಿಸಿದ ಫೋರ್ಡ್ ಕಂಪನಿಯು ವಾರ್ಷಿಕವಾಗಿ 4.40 ಲಕ್ಷ ಕಾರಗಳನ್ನು ಮತ್ತು 6.10 ಲಕ್ಷ ಕಾರ್ ಎಂಜಿನ್ ಉತ್ಪಾದನೆಯ ಸೌಲಭ್ಯ ಪಡೆದುಕೊಂಡಿತ್ತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಹೊಸ ಯೋಜನೆಯ ಭಾಗಿವಾಗಿ ಪ್ರಮುಖ ಕಾರುಗಳ ಫೇಸ್‌ಲಿಫ್ಟ್, ನ್ಯೂ ಜನರೇಷನ್ ಮಾದರಿಗಳನ್ನು ಬಿಡುಗಡೆ ಮಾಡಿದ ಫೋರ್ಡ್ ಕಂಪನಿಯು ಇಕೋಸ್ಪೋರ್ಟ್, ಆಸ್ಪೈರ್, ಫಿಗೊ ಮತ್ತು ಎಂಡೀವರ್ ಕಾರುಗಳ ಮೂಲಕ ಉತ್ತಮ ಬೇಡಿಕೆ ಕಾಯ್ದುಕೊಂಡಿತ್ತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಹೆಚ್ಚುವರಿ ಷೇರುಗಳ ಮೂಲಕ ಮಹೀಂದ್ರಾ ಕಂಪನಿಯಿಂದ ಸಂಪೂರ್ಣವಾಗಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದ್ದ ಫೋರ್ಡ್ ಕಂಪನಿಯು ದೇಶಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಾರಾಟ ಮಳಿಗೆಗಗಳ ಮೂಲಕ ಮುಂಚೂಣಿ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿತು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಆದರೆ ಹೊಸ ಬಂಡವಾಳ ಮತ್ತು ಹೊಸ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಮಾರುತಿ ಸುಜುಕಿ, ಹ್ಯುಂಡೈ ನಿರ್ಮಾಣದ ಹೊಸ ಹ್ಯಾಚ್‌ಬ್ಯಾಕ್, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಪೈಪೋಟಿಯು ಫೋರ್ಡ್ ಕಂಪನಿಗೆ ಭಾರೀ ಹೊಡೆತ ನೀಡಿದವು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಇದರ ಜೊತೆಗೆ ಇತ್ತೀಚೆಗೆ ಮಾರುಕಟ್ಟೆಗೆ ಪ್ರವೇಶಿದ ಹೊಸ ಕಾರು ಕಂಪನಿಗಳ ಅಬ್ಬರವು ಕೂಡಾ ಫೋರ್ಡ್ ಕಂಪನಿಗೆ ನಿರಂತರವಾಗಿ ಹಿನ್ನಡೆ ಉಂಟುಮಾಡಿದವು. ಇದರ ನಡುವೆ 2019ರಲ್ಲಿ ಮಹೀಂದ್ರಾ ಜೊತೆಗೂಡಿ ನಷ್ಟದಲ್ಲಿದ್ದ ಉದ್ಯಮ ಕಾರ್ಯಾಚರಣೆಗೆ ಮತ್ತೆ ಚುರುಕು ನೀಡುವ ಪ್ರಯತ್ನದಲ್ಲಿದ್ದ ಫೋರ್ಡ್ ಕಂಪನಿಯು ಹೊಸ ಸಹಭಾಗೀತ್ವಕ್ಕಾಗಿ ಸಿದ್ದಗೊಂಡಿದ್ದವು.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಆದರೆ ಪ್ರತಿಸ್ಪರ್ಧಿ ಮಾದರಿಗಳ ಅಬ್ಬರ ನಡುವೆ ಹೊಸ ಕಾರುಗಳ ಬಿಡುಗಡೆ ಮತ್ತು ಲಾಭಾಂಶದ ಲೆಕ್ಕಾಚಾರ ಕೈಗೊಂಡ ಫೋರ್ಡ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ಸಹಭಾಗಿತ್ವ ಯೋಜನೆಯನ್ನು ಆರಂಭಿಸುವ ಮುನ್ನವೇ ಹೊಸ ಯೋಜನೆಗೆ ಬ್ರೇಕ್ ಹಾಕಿತು. ಸಹಭಾಗಿತ್ವದ ಬದಲು ಪೂರ್ಣ ಪ್ರಮಾಣದಲ್ಲಿ ಸ್ವತಂತ್ರ ಕಾರ್ಯಾಚರಣೆ ಮಾಡುವುದಾಗಿ ಹೇಳಿಕೊಂಡಿದ್ದ ಕಂಪನಿಯು ಇದೀಗ ಭಾರತದಲ್ಲಿ ಉದ್ಯಮ ಕಾರ್ಯಾಚರಣೆಯನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ.

ಭಾರತದಿಂದ ಹೊರನಡೆಯುತ್ತಿರುವ Ford India ಇತಿಹಾಸವೇ ಒಂದು ರೋಚಕ!

ಆದರೂ ಭಾರತದಲ್ಲಿ ವಾಹನ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರೂ ಸಿಬಿಯು ಆಮದು ನೀತಿ ಅಡಿ ಕೆಲವು ಹೊಸ ಕಾರು ಮಾದರಿಗಳನ್ನು ಆಯ್ದ ನಗರಗಳಲ್ಲಿ ಮಾರಾಟ ಮುಂದುವರಿಸುವುದಾಗಿ ಹೇಳಿಕೊಂಡಿರುವ ಫೋರ್ಡ್ ಕಂಪನಿಯು ಅಸ್ತಿತ್ವದಲ್ಲಿರುವ ತನ್ನ ಗ್ರಾಹಕರಿಗೆ ಅಗತ್ಯ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಮುಂದುವರಿಸುವುದಾಗಿ ಭರವಸೆ ನೀಡಿದೆ.

Most Read Articles

Kannada
Read more on ಫೋರ್ಡ್ ford
English summary
Ford s india 27 years journey from escort ikon to figo freestyle details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X