ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಅಮೆರಿಕಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ 1990ರ ದಶಕದಿಂದಲೂ ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದೆ. ಈ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಫೋರ್ಡ್ ಕಂಪನಿಯು ಕಳೆದ 10 ವರ್ಷಗಳಿಂದ ಭಾರತದಲ್ಲಿ ಸುಮಾರು 2 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಫೋರ್ಡ್ ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಸುದ್ದಿಯಯು ಕಂಪನಿಯ ಉದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಇನ್ನು ಈ ಸುದ್ದಿಯಯು ಕಂಪನಿ ಅತ್ಯಾಸಕ್ತಿಯ ಫೋರ್ಡ್ ಅಭಿಮಾನಿಗಳು ಮಾತ್ರವಲ್ಲ, ವಿಮರ್ಶಕರಿಗೂ ಬೇಸರವಾಗಿದೆ. ಫೋರ್ಡ್ 25 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ಕಾರ್ಯಚರಣೆಯನ್ನು ನಡೆಸಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಫೋರ್ಡ್ ಇತ್ತೀಚೆಗೆ ಘೋಷಿಸಿದೆ ಆದರೆ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಈ ಫೋರ್ಡ್ ಎಂಡೀವರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫುಲ್ ಸೈಜ್ ಎಸ್‍ಯುವಿಯಾಗಿದೆ. ಇದು ಕಳೆದ 18 ವರ್ಷಗಳಿಂದ ಭಾರತದಲ್ಲಿ ಮಾರಾಟವಾಗುತ್ತಿದೆ ಮತ್ತು ಅದರ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಫೋರ್ಡ್ ಕಂಪನಿಯು ಒಪ್ಪಂದದ ತಯಾರಿಕೆಗಾಗಿ ಮತ್ತೊಂದು OEM ಜೊತೆ ಪಾಲುದಾರರಾಗಲು ಪ್ರಯತ್ನಿಸುವ ಮೂಲಕ ನಿರ್ಗಮನದ ಹೊರತಾಗಿಯೂ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದೆ ಆದರೆ ಒಪ್ಪಂದ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕಂಪನಿ ಹೇಳಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಈ ಎಂಡೀವರ್ ಎಸ್‍ಯುವಿಯು 2003ರಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ ಫೋರ್ಡ್‌ನ ಮೊದಲ ಎಸ್‌ಯುವಿ ಕೊಡುಗೆಯಾಗಿತ್ತು ಮತ್ತು ಎರಡನೇ ತಲೆಮಾರಿನವರು 2016 ರಲ್ಲಿ ಬಿಡುಗಡೆಗೊಂಡಿತ್ತು. ಫೋರ್ಡ್ ಸ್ಥಳೀಯ ಉತ್ಪಾದನೆಯನ್ನು ಮುಚ್ಚುವುದಾಗಿ ಘೋಷಿಸಿದ ಸಂದರ್ಭದಲ್ಲಿ, ಭಾರತದಲ್ಲಿ ಎಂಡೀವರ್ ಮಾರಾಟವು ಮಾದರಿಯ ಜಾಗತಿಕ ಮಾರಾಟದ 37 ಪ್ರತಿಶತದಷ್ಟಿತ್ತು.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

2021ರ ಸೆಪ್ಟೆಂಬರ್ ಹೊತ್ತಿಗೆ, ಇದು ಪೂರ್ಣ-ಗಾತ್ರದ ಪ್ರೀಮಿಯಂ ಎಸ್‌ಯುವಿ ಜಾಗದಲ್ಲಿ ಶೇಕಡಾ 44 ಕ್ಕಿಂತಲೂ ಹೆಚ್ಚಿದೆ, ಎರಡನೇ ತಲೆಮಾರಿನ ಎಂಡೀವರ್ ವಾರ್ಷಿಕ 10,000 ರಿಂದ 12,000 ಯುನಿಟ್‌ಗಳ ಸರಾಸರಿ ಮಾರಾಟವನ್ನು ಹೊಂದಿದೆ ಎಂದು ಫೋರ್ಡ್ ಹೇಳಿದೆ,

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಎಂಡೀವರ್ ಮಾರುಕಟ್ಟೆಯಲ್ಲಿ ಬ್ರಾಂಡ್‌ನ ದೀರ್ಘಾವಧಿಯ ಮೋನಿಕರ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಹೊಸ ಸ್ಪರ್ಧಿಗಳ ಆಗಮನದ ಹೊರತಾಗಿಯೂ ಇದು ವಿಭಾಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟವನ್ನು ಮುಚ್ಚುವ ಫೋರ್ಡ್‌ನ ನಿರ್ಧಾರವು ಕಳೆದ ಹತ್ತು ವರ್ಷಗಳಲ್ಲಿ 2 ಶತಕೋಟಿ ಡಾಲರ್‌ಗಳಷ್ಟು ನಷ್ಟವೇ ಪ್ರಮುಖ ಕಾರಣವಾಗಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಸುಮಾರು 25 ವರ್ಷಗಳ ಕಾಲ ಭಾರತದಲ್ಲಿ ಇದ್ದರೂ, ಫೋರ್ಡ್ ಮಾದರಿಗಳು ಪ್ರಯಾಣಿಕರ ಕಾರು ಮಾರುಕಟ್ಟೆಯ ಶೇಕಡಾ 2 ಕ್ಕಿಂತ ಕಡಿಮೆ. ಅವರ ಮಾದರಿಗಳು ಅವರ ನಿರ್ಮಾಣ ಮತ್ತು ಕಾರ್ಯಕ್ಷಮತೆಗಾಗಿ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಇನ್ನು ಭಾರತದಲ್ಲಿ ಎಂಡೀವರ್ ಎಸ್‍‍ಯುವಿಯಲ್ಲಿ ಮಾತ್ರ ಸಿಂಗಲ್ ಟರ್ಬೂ ಎಂಜಿನ್ ಅನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಎಂಡೀವರ್ ನಲ್ಲಿ ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ. ಭಾರತದಲ್ಲಿ ಪ್ರೀಮಿಯಂ ಎಸ್‌ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನು ಫೋರ್ಡ್ ಕಂಪನಿಯು ಎಂಡೀವರ್ ಸ್ಪೋರ್ಟ್ ಮಾದರಿಯನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯು ಟೈಟಾನಿಯಂ ಪ್ಲಸ್ ಮಾದರಿಯನ್ನು ಆಧರಿಸಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಎಂಡೀವರ್ ಸ್ಪೋರ್ಟ್ ಹೊರಭಾಗದಲ್ಲಿ ಬ್ಲ್ಯಾಕ್ ಕಾಸ್ಮೆಟಿಕ್ ಅಂಶಗಳನ್ನು ಒಳಗೊಂಡಿದೆ, ಇದು ಈ ಎಂಡೀವರ್ ಸ್ಪೋರ್ಟ್ ಎಸ್‍ಯುವಿಗೆ ಮತ್ತಷ್ಟು ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ. ಇದರಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಬ್ಲ್ಯಾಕ್ ಲೋ ಬಂಪರ್, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ಹೆಚ್ಚುವರಿಯಾಗಿ ನೇಮ್-ಪ್ಲೇಟ್ ಮತ್ತು ಒಆರ್‌ವಿಎಂಗಳಲ್ಲಿ ಬ್ಲ್ಯಾಕ್ ಅಂಶಗಳು ಹೊಂದಿದೆ.

ಉತ್ಪಾದನೆಯನ್ನು ನಿಲ್ಲಿಸುವ ಮೊದಲು Endeavour ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾದ Ford

ಎಂಡೀವರ್ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಫೋರ್ಡ್ ಎಂಡೀವರ್ ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಅಫ್-ರೋಡ್ ವಿಭಾಗದಲ್ಲಿಯು ಫೋರ್ಡ್ ಎಂಡೀವರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಸ್‍ಯುವಿಯಾಗಿದೆ.ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡಿದೆ. ಎ

Most Read Articles

Kannada
Read more on ಫೋರ್ಡ್ ford
English summary
Ford tried to save the endeavour full size suv before closing production details
Story first published: Tuesday, September 21, 2021, 12:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X