ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಅಮೆರಿಕ ಮೂಲದ ಫೋರ್ಡ್ ಕಂಪನಿಯು ಇತ್ತೀಚೆಗೆ ಎಫ್-150 ಲೈಟ್ನಿಂಗ್ ಪಿಕ್ಅಪ್ ಟ್ರಕ್ ಅನ್ನು ಕೆಲವೇ ವಾರಗಳ ಹಿಂದೆ ಪರಿಚಯಿಸಿದ್ದರು. ಇದೀಗ ಫೋರ್ಡ್ ತನ್ನ ಹೊಸ ಮಾವೆರಿಕ್ ಪಿಕ್ಅಪ್ ಟ್ರಕ್ ಅನ್ನು ಅನಾವಾಣಗೊಳಿಸಿದೆ. ಇದರಲ್ಲಿ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸ್ಟ್ಯಾಂಡರ್ಡ್‌ ಆಗಿ ನೀಡಲಾಗಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಈ ಹೊಸ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್ ಈ ವರ್ಷದ ಕೊನೆಯಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಮಾವೆರಿಕ್ ಪಿಕ್ಅಪ್ ಟ್ರಕ್ ಪೋರ್ಡ್ ಕಂಪನಿಯ ಐಕಾನಿಕ್ ಆಫ್-ರೋಡ್ ಬ್ರಾಂಕೊ ಸ್ಪೋರ್ಟ್ ಅನ್ನು ಆಧರಿಸಿದೆ. ಫೋರ್ಡ್ ಮಾವೆರಿಕ್ ಬ್ರ್ಯಾಂಡ್‌ನ ಪಿಕ್ಅಪ್ ಟ್ರಕ್ ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಕಾಂಪ್ಯಾಕ್ಟ್ ಪಿಕ್ಅಪ್ ಟ್ರಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಹೊಸ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್ ಹೆಕ್ಸಗನಲ್ ಬ್ಲ್ಯಾಕ್ ಗ್ರಿಲ್ ಮತ್ತು ಸಿ-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಪಿಕ್ಅಪ್ ಟ್ರಕ್ ಟ್ವಿನ್ ಕ್ರೋಮ್ ಅಸ್ಸೆಂಟ್ ಗಳು ಮತ್ತು ಬ್ಲೂ ಓವಲ್ ಬ್ಯಾಡ್ಜ್‌ನಿಂದ ಕನೆಕ್ಟ್ ಹೊಂದಿದ ಅಂಬರ್ ಲೈಟಿಂಗ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಇನ್ನು ಕೆಳಭಾಗದ ಸೆಂಟ್ರಲ್ ಏರ್ ಟೆಕ್ ಹೊರತಾಗಿ, ಫೋರ್ಡ್ ಮಾವೆರಿಕ್ ವ್ಹೀಲ್ ಆರ್ಚಾರ್, ಕ್ಲೀನ್ ಸೈಡ್ ಪ್ರೊಫೈಲ್, ರ್ಯಾಕ್ಡ್ ಫ್ರಂಟ್ ವಿಂಡ್ ಷೀಲ್ಡ್ ಮತ್ತು ಮಸ್ಕಲರ್ ಬಾನೆಟ್ ಅನ್ನು ಒಳಗೊಂಡಿದೆ. ಟ್ರಕ್ ಬೆಡ್ 1.37-ಮೀಟರ್ ಉದ್ದವನ್ನು ಹೊಂದಿದೆ .

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

2x4 ಅಥವಾ 2x6 ಗಳನ್ನು ಸ್ಟ್ಯಾಂಪ್ ಮಾಡಿದ ಬೆಡ್‌ಸೈಡ್‌ಗಳು, ನಾಲ್ಕು ಡಿ ರಿಂಗ್ಸ್, ಮಲ್ಟಿಪಲ್ ಟೈ-ಡೌನ್ ಅನ್ನು ಹೊಂದಿದೆ. ಇನ್ನು ಈ ಹೊಸ ಪಿಕ್ಅಪ್ ಟ್ರಕ್ ಅಲ್ಯೂಮಿನಿಯಂ ರೈಲ್ ಗಳನ್ನು ಪಡೆಯುತ್ತದೆ. ಇದರಲ್ಲಿ 400 ಡಬ್ಲ್ಯು ಪವರ್ ಹೊಂದಿರುವ 110 ವಿ ಪವರ್ ಔಟ್ ಲೆಟ್ ಅನ್ನು ಪಡೆಯುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್ ಒಟ್ಟಾರೆ 5,072 ಎಂಎಂ ಉದ್ದ ಮತ್ತು 3,076 ಎಂಎಂ ಉದ್ದದ ವ್ಹೀಲ್‌ಬೇಸ್ ಹೊಂದಿದೆ. ಹ್ಯುಂಡೈ ಕಂಪನಿಯ ಹೊಸ ಸಾಂತಾ ಕ್ರೂಜ್ ಪಿಕ್ಅಪ್ ಟ್ರಕ್ ಗಿಂತ ಮವೆರಿಕ್ 101 ಎಂಎಂ ಉದ್ದ ಮತ್ತು 61 ಎಂಎಂ ಉದ್ದದ ವ್ಹೀಲ್‌ಬೇಸ್ ಹೆಚ್ಚು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಎಂಟ್ರಿ ಲೆವೆಲ್ ಫೋರ್ಡ್ ಮಾವೆರಿಕ್ 2.5-ಲೀಟರ್ ಇನ್ಲೈನ್ ನಾಲ್ಕು-ಸಿಲಿಂಡರ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 191 ಬಿಹೆಚ್‍ಪಿ ಪವರ್ ಮತ್ತು 210 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್ ಬಾಕ್ಸ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಈ ಫೋರ್ಡ್ ಮಾವೆರಿಕ್ ಕಾಂಪ್ಯಾಕ್ಟ್ ಪಿಕಪ್ ಟ್ರಕ್ 907 ಕೆಜಿ ವರೆಗಿನ ಟೋಯಿಂಗ್ ಸಾಮರ್ಥ್ಯವನ್ನು ಹೊಂದಿದ್ದು, 680 ಕೆಜಿ ವರೆಗೆ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹೈಬ್ರಿಡ್‌ ಎಂಜಿನ್ ಹೊಂದಿರುವ ಮಾದರಿಯಲ್ಲಿ ಎಡಬ್ಲ್ಯೂಡಿ ಸಿಸ್ಟಂ ಅನ್ನು ನೀಡುವುದಿಲ್ಲ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಮತ್ತೊಂದು ಎಂಜಿನ್ ಆಯ್ಕೆ ಇದೆ. ಅದು 2.0-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್ ಆಗಿದೆ. ಈ ಎಂಜಿನ್ 250 ಬಿಹೆಚ್‍ಪಿ ಪವರ್ ಮತ್ತು 375 ಎನ್ಎಂ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಎಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರುತ್ತದೆ. ಜೊತೆಗೆ ನಾರ್ಮಲ್, ಸ್ಪೋರ್ಟ್, ಸ್ಲಿಪರಿ, ಟೋ/ಹಾಲ್ ಮತ್ತು ಇಕೋ ಎಂಬ ಡ್ರೈವ್ ಮೋಡ್ ಗಳನ್ನು ಪಡೆಯಬಹುದು.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಫೋರ್ಡ್ ಮಾವೆರಿಕ್ ಪಿಕ್ಅಪ್ ಟ್ರಕ್

ಫೋರ್ಡ್ ಮಾವೆರಿಕ್ ಪಿಕಪ್ ಟ್ರಕ್ ಇಂಟಿರಿಯರ್ ನಲ್ಲಿ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಬ್ರ್ಯಾಂಕ್ ಸ್ಪೋರ್ಟ್‌ನೊಂದಿಗೆ ಸಾಕಷ್ಟು ಸಾಮಾನ್ಯವಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ, ಎಇಬಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಸೆಂಟರಿಂಗ್, ಕ್ರಾಸ್-ಟ್ರಾಫಿಕ್ ಅಲರ್ಟ್‌ನೊಂದಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಇತ್ಯಾದಿ ಫೀಚರ್ಸ್ ಗಳನ್ನು ಹೊಂದಿವೆ.

Most Read Articles

Kannada
Read more on ಫೋರ್ಡ್ ford
English summary
Ford Maverick Compact Pickup Truck Revealed. Read In Kannada.
Story first published: Wednesday, June 9, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X