ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 13,003 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 8,508 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.52.83 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. 2021ರ ಅಕ್ಟೋಬರ್ ತಿಂಗಳಿನಲ್ಲಿ 12,440 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಾಸಿಕ ಮಾರಾಟದಲ್ಲಿ ಶೇ.4.53 ರಷ್ಟು ಹೆಚ್ಚಾಗಿದೆ. ಟೊಯೊಟಾ ಕಂಪನಿಯು ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಾಹನ ತಯಾರಕರು ಮಾರಾಟದಲ್ಲಿ ಕುಸಿತವನ್ನು ಕಂಡಿರುವಾಗ ಟೊಯೊಟಾ ಕಂಪನಿಯು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳ ಮಾರಾಟದಲ್ಲಿ ಟೊಯೊಟಾ ಕಂಪನಿಯ ಅರ್ಬನ್ ಕ್ರೂಸರ್, ಗ್ಲಾಂಝಾ, ಇನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ (ಫಾರ್ಚುನರ್ ಲೆಜೆಂಡರ್ ಸೇರಿದಂತೆ) ಮಾದರಿಗಳು ಹೆಚ್ಚಿನ ಕೊಡುಗೆಯನ್ನು ನೀಡಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ವಿಟಾರಾ ಬ್ರೆಝಾ ಮತ್ತು ಬಲೆನೊ ಮಾರುತಿ ಸುಜುಕಿ ಅರ್ಬನ್ ಕ್ರೂಸರ್ ಮತ್ತು ಬಲೆನೊ ಕಾರುಗಳ ರಿಬ್ಯಾಡ್ಜ್ ಆವೃತ್ತಿಗಳಾಗಿವೆ. ಟೊಯೊಟಾ ತನ್ನ ಲೈನ್‌ಅಪ್‌ಗೆ ಇನ್ನಷ್ಟು ರೀಬ್ಯಾಡ್ಜ್ ಮಾಡಲಾದ ಮಾರುತಿ ಕಾರುಗಳನ್ನು ಸೇರಿಸುವ ನಿರೀಕ್ಷೆಯಿದೆ. ತಯಾರಕರು ಭಾರತದಲ್ಲಿ ಯಾರಿಸ್ ಸೆಡಾನ್ ಅನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಬೆಲ್ಟಾ (ರೀಬ್ಯಾಡ್ಜ್ ಮಾಡಿದ ಸಿಯಾಜ್) ಅನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಇನ್ನು ಟೊಯೊಟಾ ಕಂಪನಿಯು ರೂಮಿಯನ್ ಎಂಪಿವಿಯನ್ನು ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಇದು 7-ಸೀಟರ್ ಮಾರುತಿ ಸುಜುಕಿ ಎರ್ಟಿಗಾದ ರಿಬ್ಯಾಡ್ಜ್ ಮಾದರಿಯಾಗಿದೆ. ಇದೀಗ ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೂಮಿಯನ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದರಿಂದ 7-ಸೀಟರ್ ಎಂಪಿವಿಯನ್ನು ಭಾರತದಲ್ಲಿ ಅದೇ ಹೆಸರಿನಲ್ಲಿ ಪರಿಚಯಿಸಲಾಗುವುದು ಎಂದು ತಿಳಿಯುತ್ತದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಆದರೆ ಟೊಯೊಟಾ ಕಂಪನಿಯು ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಎಂಪಿವಿಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಅಲ್ಲದೇ ಕೈಗೆಟುಕು ದರದಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿ ತಂತ್ರವನ್ನು ಹೊಂದಿರಬಹುದುಎ ಂದು ನಿರೀಕ್ಷಿಸುತ್ತೇವೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಇದನ್ನು ಸೇರಿಸುತ್ತಾ, ಕಂಪನಿಯು ದಕ್ಷಿಣ ಆಫ್ರಿಕಾದ ಸಿಯಾಜ್ ಆಧಾರಿತ ಬೆಲ್ಟಾ ಸೆಡಾನ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಟೊಯೊಟಾ ರೂಮಿಯನ್ ಮೂಲತಃ ಅಸ್ತಿತ್ವದಲ್ಲಿರುವ ಎರ್ಟಿಗಾದ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಇದನ್ನು 2018 ರಲ್ಲಿ ಪರಿಚಯಿಸಲಾಯಿತು. ಇಂಡಿಯಾ-ಸ್ಪೆಕ್ ಮಾದರಿಯು ಶೀಘ್ರದಲ್ಲೇ ಮಿಡ್-ಲೈಫ್ ಫೇಸ್ ಲಿಫ್ಟ್ ಅನ್ನು ಸ್ವೀಕರಿಸುವ ಸಾಧ್ಯತೆಗಳಿದೆ,

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿಯು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ, ಬಹುಶಃ ಮುಂದಿನ ವರ್ಷದ ಆರಂಭದಲ್ಲಿ. ಭಾರತ-ಸ್ಪೆಕ್ ಮಾದರಿಯು ನವೀಕರಿಸಿದ ಎರ್ಟಿಗಾವನ್ನು ಆಧರಿಸಿರಬಹುದು. ಈ ಹೊಸ ರಿಬ್ಯಾಡ್ಜ್ ಮಾದರಿಯು ಕೂಡ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಇನ್ನು ಟೊಯೊಟಾ ಪ್ರಸ್ತುತ ಇನ್ನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯುತ್ತಮ-ಮಾರಾಟದ ಮಾದರಿಗಳಾಗಿ ಹೊಂದಿದೆ. ಫಾರ್ಚುನರ್ ಪೂರ್ಣ-ಗಾತ್ರದ ಎಸ್‍ಯುವಿ ವಿಭಾಗವನ್ನು ಸುಲಭವಾಗಿ ಮುನ್ನಡೆಸುತ್ತದೆ ಮತ್ತು ಫೋರ್ಡ್‌ನ ಎಂಡೀವರ್‌ನ ನಿರ್ಗಮನವು ಖಂಡಿತವಾಗಿ ನೆರವಾಗಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಇನ್ನು ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇನೋವಾ ಕ್ರಿಸ್ಟಾ ಕಾರು ಮಾದರಿಯ ಮೂಲಕ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಟೊಯೊಟಾ ಕಂಪನಿಯು ವಿಶೇಷವಾಗಿ ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಅನ್ನು ಇತ್ತೀಚೆಗೆ ಪರಿಚಯಿಸಿತ್ತು.

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

ಈ ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿದ್ದರೂ ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಈ ಹೊಸ ಕಾರಿನಲ್ಲಿ ಕಂಪನಿಯು ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಹೊಸ ಮಾದರಿಯ ಡಿಸ್‌ಪ್ಲೇ ಮತ್ತು ಅಡ್ವಾನ್ಸ್ ಕನೆಕ್ಟಿವಿಟಿ ಸೌಲಭ್ಯದ ಜೊತೆಗೆ ಮಲ್ಟಿ ಟೆರೇನ್ ಮಾನಿಟರ್ ಸಿಸ್ಟಂ(360 ಡಿಗ್ರಿ ಕ್ಯಾಮೆರಾ), ವರ್ಚುವಲ್ ಬರ್ಡ್ ಐ ವ್ಯೂ, ಹೆಡ್ಸ್ ಅಪ್ ಡಿಸ್‌ಪ್ಲೇ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್, ಡೋರ್ ಎಡ್ಜ್ ಲೈಟಿಂಗ್ ಅನ್ನು ಹೊಂದಿದೆ,

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಈ ತನಕವು ಎಂಪಿವಿ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.ಹೊಸ ತಲೆಮಾರಿನೊಂದಿಗೆ ಮಾರಾಟವಾಗುತ್ತಿರುವ ಇನೋವಾ ಕ್ರಿಸ್ಟಾ ಎಂಪಿವಿ 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿತ್ತು. ಇ

ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ Toyota

2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹಳೆಯ ಆವೃತ್ತಿಗಿಂತಲೂ ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇನ್ನು ಒಟ್ಟಾರೆಯಾಗಿ ಟೊಯೊಟಾ ಕಾರುಗಳು ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Fortuner innova get high demand toyota shared november 2021 sales report details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X