ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಬಹುತೇಕ ಗ್ರಾಹಕ ಸೇವೆಗಳು ಇದೀಗ ಅವಶ್ಯಕತೆಗೆ ಅನುಗುಣವಾಗಿ ಬೇಡಿಕೆಯಿರುವ ಸ್ಥಳಗಳಿಗೆ ಪೂರೈಕೆ ಮಾಡುವಂತಹ ಸೌಲಭ್ಯ ಹೊಂದಿದ್ದು, ಇತ್ತೀಚೆಗೆ ಹಲವಾರು ಸ್ಟಾರ್ಟ್ ಅಪ್ ಕಂಪನಿಗಳು ವಿವಿಧ ಉತ್ಪನ್ನಗಳನ್ನು ಗ್ರಾಹಕರ ಮನೆಬಾಗಿಲಿಗೆ ಪೂರೈಸುವ ನಿಟ್ಟಿನಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಠಿಗೆ ಕಾರಣವಾಗಿದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಇತ್ತೀಚೆಗೆ ಆರಂಭಗೊಂಡಿರುವ ಗೊಫ್ಯೂಲ್ ಪ್ರವೈಟ್ ಲಿಮಿಟೆಡ್ ಸ್ಟಾರ್ಟ್ ಅಪ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ಇಂಧನವನ್ನು ಮನೆಬಾಗಿಲಿಗೆ ತಲುಪಿಸುವ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಇಂಧನ ಪೂರೈಕೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಗೊಫ್ಯೂಲ್ ಹೊಸ ಯೋಜನೆಯು ಗ್ರಾಹಕನ್ನು ಸೆಳೆಯಲಿದೆ. ದೇಶಾದ್ಯಂತ ಈಗಾಗಲೇ ವಿವಿಧ ಕಂಪನಿಗಳು ಮನೆಬಾಗಿಲಿಗೆ ಇಂಧನ ಪೂರೈಕೆ ಮಾಡುವ ಯೋಜನೆಗಳಿಗೆ ಚಾಲನೆ ನೀಡಿದ್ದು, ಗೊಫ್ಯೂಲ್ ಕೂಡಾ ತನ್ನದೆ ಆದ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರ ಸೇವೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲಿದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಇಂಧನ ಪೂರೈಕೆಗೆ ಅಗತ್ಯತೆಗೆ ಅನುಗುಣವಾಗಿ ಹಲವಾರು ಪೆಟ್ರೋಲ್ ಬಂಕ್‌ಗಳು ಲಭ್ಯವಿದ್ದರೂ ಕೂಡಾ ಅನೇಕ ಬಾರಿ ಮಾರ್ಗ ಮಧ್ಯದಲ್ಲಿ ಇಂಧನ ಅಗತ್ಯತೆಯು ವಾಹನ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ಸಂದರ್ಭಗಳು ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಅಗತ್ಯ ಸ್ಥಳಗಳಿಗೆ ಇಂಧನ ಪೂರೈಕೆಯು ಸಾಕಷ್ಟು ಅಗತ್ಯವಾಗಿರುತ್ತದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಗ್ರಾಹಕರ ಮನೆ ಬಾಗಿಲಿಗೆ ಹೈ-ಸ್ಪೀಡ್ ಡೀಸೆಲ್ (ಎಚ್‌ಎಸ್‌ಡಿ) ಪೂರೈಸಲಿರುವ ಗೊಫ್ಯೂಲ್ ಪ್ರವೈಟ್ ಲಿಮಿಟೆಡ್ ಕಂಪನಿಯು ವ್ಯಯಕ್ತಿಕ ಬಳಕೆಯ ವಾಹನಗಳ ಜೊತೆಗೆ ಕೈಗಾರಿಕಾ ವಲಯದ ಚಟುವಟಿಕೆಗಳಿಗೂ ಡೀಸೆಲ್ ಪೂರೈಕೆ ಮಾಡುತ್ತಿದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಸ್ಥಿರ ಗ್ರಾಹಕರಾದ ಕೈಗಾರಿಕಾ ಚಟುವಟಿಕೆಗಳಿಗೆ, ಜನರೇಟರ್ಸ್ ಮತ್ತು ಕೃಷಿ ಅವಂಬಿತ ಕೈಗಾರಿಕಾ ಚಟುವಟಿಕೆಗಳಿಗೆ ನಿಗದಿತ ಸಮಯದಲ್ಲಿ ಇಂಧನ ಪೂರೈಕೆಯು ಸಾಕಷ್ಟು ಅವಶ್ಯತೆಯಿದ್ದು, ಗ್ರಾಹಕರ ಬೇಡಿಕೆಯೆಂತೆ ಗೊಫ್ಯೂಲ್ ಹೈ-ಸ್ಪೀಡ್ ಡೀಸೆಲ್ ಪೂರೈಕೆಗೆ ಚಾಲನೆ ನೀಡಿದೆ. ಗೊಫ್ಯೂಲ್ ಕಂಪನಿಯು ದೇಶದ ಪ್ರಮುಖ ಮೂರು ಇಂಧನ ಪೂರೈಕೆ ಕಂಪನಿಗಳಿಂದ ಮನೆ ಬಾಗಿಲಿಗೆ ಇಂಧನ ಪೂರೈಸಲು ಅಗತ್ಯ ಪರವಾನಿಗೆ ಪಡೆದುಕೊಂಡ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಅವಧಿಯಲ್ಲಿ ಇಂಧನ ಪೂರೈಕೆ ಸೇವೆಗಳನ್ನು ಪೂರೈಕೆ ಮಾಡಲಿದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಹೊಸ ಸೌಲಭ್ಯವು ಕೈಗಾರಿಕಾ ಕಂಪನಿಗಳು ಮತ್ತು ಜನರೇಟರ್ ನಿರ್ವಹಣೆಗಾಗಿ ಪ್ರತ್ಯೇಕ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿದ್ದು, ದಿನದ 24 ಗಂಟೆ ಮತ್ತು ವಾರದ ಏಳು ದಿನವು ಈ ಸೇವೆಯು ಲಭ್ಯವಿರುತ್ತದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಇಂಧನ ಪೂರೈಕೆ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಮತ್ತು ತಂತ್ರಜ್ಞಾನ ಪರಿಹಾರಗಳನ್ನು ಹೊಂದಿರುವ ಗೊಫ್ಯೂಲ್ ಕಂಪನಿಯು ಒಟಿಪಿ ಮೂಲಕವೇ ಇಂಧನ ಪೂರೈಕೆ ಮಾಡಲಿದ್ದು, ಇಲ್ಲಿ ಮೋಸದ ವ್ಯವಹಾರಗಳಿಗೆ ಯಾವುದೇ ಅವಕಾಶವಿಲ್ಲದಂತೆ ಹೊಸ ಸೇವೆಯನ್ನು ತೆರೆಯಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಗೊಫ್ಯೂಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇಂಧನ ಪೂರೈಕೆ ಸೇವೆಗಾಗಿ ಮನವಿ ಮಾಡಿದ ನಂತರ ನಿಗದಿತ ಅವಧಿಯಲ್ಲಿ ಸೇವೆಯು ಲಭ್ಯವಾಗಲಿದ್ದು, ಹಣ ಸಂದಾಯ ಮಾಡಿದ ನಂತರ ಲಭ್ಯವಾಗುವ ಒಟಿಪಿ(ಒನ್ ಟೈಮ್ ಪಾಸ್‌ವರ್ಡ್) ಮೂಲಕ ಮುಂದಿನ ಸೇವಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ.

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಐಒಟಿ ಸಂಪರ್ಕದೊಂದಿಗೆ ಐ-ಲಾಕ್ ಕಾರ್ಯವಿಧಾನವು ಗ್ರಾಹಕರ ಬೇಡಿಕೆ ಮೇರೆಗೆ ಒಟಿಪಿ ಆಧಾರಿತ ಪೂರೈಕೆ ಖಾತ್ರಿಗೊಳಿಸುವ ಕಂಪನಿಯು ಇಲ್ಲಿ ಕಂಪನಿಗೆ ಮತ್ತು ಗ್ರಾಹಕರಿಗೆ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಮನೆ ಬಾಗಿಲಿಗೆ ಡೀಸೆಲ್ ಪೂರೈಸುವ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಗೊಫ್ಯೂಲ್

ಸದ್ಯ ಚೈನ್ನೈ ನಗರದಲ್ಲಿ ಮಾತ್ರ ಅಧಿಕೃತ ಸೇವೆಯನ್ನು ಆರಂಭಿಸಿರುವ ಗೊಫ್ಯೂಲ್ ಕಂಪನಿಯು ಮುಂದಿನ ಒಂದು ವರ್ಷದಲ್ಲಿ ದೇಶದ ಸುಮಾರು 20 ನಗರಗಳಲ್ಲಿ ಹೊಸ ಸೇವೆ ಆರಂಭಿಸುವ ಗುರಿಹೊಂದಿದ್ದು, ಕೈಗಾರಿಕೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು, ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಬ್ಯಾಂಕ್‌ಗಳು ಮತ್ತು ಗೋದಾಮು ನಿರ್ವಹಣೆ ಮಾಡುವ ಗ್ರಾಹಕರಿಂದ ಉತ್ತಮ ಬೇಡಿಕೆಯ ನಿರೀಕ್ಷೆಯಿದೆ.

Most Read Articles

Kannada
English summary
GoFuel starts doorstep fuel delivery. Read in Kannada.
Story first published: Saturday, January 30, 2021, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X