ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿಯು ಭಾರತದ ಪ್ರಧಾನ ಕಚೇರಿಯನ್ನು ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ಕಂಪನಿಯು ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಶೋರೂಂ ತೆರೆಯಲು ನಿರ್ಧರಿಸಿದೆ.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಟೆಸ್ಲಾ ಕಂಪನಿಯ ಉತ್ಪಾದನಾ ಘಟಕವನ್ನು ತಮ್ಮ ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಉತ್ಪಾದನಾ ಘಟಕ ತೆರೆಯಲು ಟೆಸ್ಲಾ ಕಂಪನಿಗೆ ಗುಜರಾತ್ ಸರ್ಕಾರವು 1,000 ಎಕರೆ ಭೂಮಿ ನೀಡಲು ಮುಂದಾಗಿರುವ ಬಗ್ಗೆಇಂಡಿಯನ್ ಎಕ್ಸ್ ಪ್ರೆಸ್ವರದಿ ಮಾಡಿದೆ.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಈ ಬಗ್ಗೆ ಮಾತನಾಡಿರುವ ಗುಜರಾತ್ ಸರ್ಕಾರದ ಅಧಿಕಾರಿಯೊಬ್ಬರು ಟೆಸ್ಲಾ ಕಂಪನಿಯು ಗುಜರಾತ್‌ ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಲಿದೆಯೇ ಅಥವಾ ಬೆಂಗಳೂರಿನಲ್ಲಿ ಉತ್ಪಾದನಾ ಘಟಕವನ್ನುಆರಂಭಿಸಲಿದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲವೆಂದು ತಿಳಿಸಿದ್ದಾರೆ.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಗುಜರಾತ್‌, ಬೆಂಗಳೂರಿಗೆ ಸರಿ ಸಮವಾದ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಉತ್ಪಾದನಾ ಘಟಕದ ಬಗ್ಗೆ ಟೆಸ್ಲಾ ಕಂಪನಿಯು ಕರ್ನಾಟಕ ಹಾಗೂ ಗುಜರಾತ್ ಸರ್ಕಾರಗಳೊಂದಿಗೆ ಮಾತುಕತೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು 2021ರ ಜನವರಿ 8ರಂದು ಬೆಂಗಳೂರಿನಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ನೋಂದಣಿ ಮಾಡಿ ಕೊಳ್ಳುವ ಮೂಲಕ ಅಧಿಕೃತವಾಗಿ ಭಾರತಕ್ಕೆ ಕಾಲಿಟ್ಟಿತು.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಟೆಸ್ಲಾ ಕಂಪನಿಯನ್ನು ಕರ್ನಾಟಕ, ಗುಜರಾತ್ ಮಾತ್ರವಲ್ಲದೆ ಮಹಾರಾಷ್ಟ್ರ ಸರ್ಕಾರವೂ ಸಹ ತನ್ನತ್ತ ಸೆಳೆಯಲು ಮುಂದಾಗಿದೆ. ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದಲ್ಲಿ ಟೆಸ್ಲಾ ಕಂಪನಿಗೆ ಭೂಮಿ ನೀಡಲು ಸಿದ್ಧವಾಗಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಆದರೆ ಟೆಸ್ಲಾ ಕಂಪನಿಯು ಮಹಾರಾಷ್ಟ್ರ ಸರ್ಕಾರದೊಂದಿಗೆ ನಡೆಸಿದ ಮಾತುಕತೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ವರದಿಗಳ ಪ್ರಕಾರ ಟೆಸ್ಲಾ ಕಂಪನಿಯ ಅಧಿಕಾರಿಗಳು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅತಿದೊಡ್ಡ ಚಾರ್ಜಿಂಗ್ ಕೇಂದ್ರಗಳನ್ನು ಕೇಳುತ್ತಿದ್ದಾರೆ ಎಂದು ಹೇಳಲಾಗಿದೆ.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಹಡಗಿನಿಂದ ಕಾರುಗಳನ್ನು ಆಮದು ಮಾಡಿಕೊಳ್ಳಲಾಗುವ ಕಾರುಗಳನ್ನು ಇರಿಸಲು ಜವಾಹರಲಾಲ್ ನೆಹರೂ ಬಂದರಿನಲ್ಲಿಯೂ ಟೆಸ್ಲಾ ಕಂಪನಿಯು ಜಾಗವನ್ನು ಕೇಳುತ್ತಿದೆ ಎಂದು ವರದಿಯಾಗಿತ್ತು.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಭಾರತದಲ್ಲಿ ಟೆಸ್ಲಾ ಕಂಪನಿಯು ಪಾಲುದಾರಿಕೆ ಮಾಡಿಕೊಂಡಿರುವ 27 ಮಾರಾಟಗಾರರಲ್ಲಿ ಸುಮಾರು 20 ಮಂದಿ ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಈ ಮಾತುಕತೆ ನಡೆದ ಬಳಿಕ ಮಹಾರಾಷ್ಟ್ರ ಸರ್ಕಾರವು ಟೆಸ್ಲಾ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆದಿಲ್ಲ ಎಂದು ಹೇಳಲಾಗಿದೆ.

ಟೆಸ್ಲಾ ಕಂಪನಿಗೆ ಭೂಮಿ ನೀಡಲು ಮುಂದಾದ ಗುಜರಾತ್ ಸರ್ಕಾರ

ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು ವಿಶ್ವಾದಾದ್ಯಂತ ತನ್ನ ಕಾರುಗಳನ್ನು ಮಾರಾಟ ಮಾಡುತ್ತದೆ. ಕಂಪನಿಯ ಕಾರುಗಳು ವಿಶ್ವಾದಾದ್ಯಂತ ಜನಪ್ರಿಯತೆಯನ್ನು ಪಡೆದಿವೆ. ಆದರೆ ಕಂಪನಿಯು ಭಾರತದಲ್ಲಿ ಇದುವರೆಗೂ ತನ್ನ ಕಾರುಗಳನ್ನು ಬಿಡುಗಡೆಗೊಳಿಸಿಲ್ಲ.

Most Read Articles

Kannada
Read more on ಟೆಸ್ಲಾ tesla
English summary
Gujarat government offers 1000 acres land to Tesla company. Read in Kannada.
Story first published: Saturday, July 3, 2021, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X