ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಗ್ರಾಹಕರು ಹೊಸ ಕಾರು ಖರೀದಿಸುವಾಗ ಕಾರು ಪ್ರತಿ ಲೀಟರ್ ಪೆಟ್ರೋಲ್ ಅಥವಾ ಡೀಸೆಲ್'ಗೆ ನೀಡುವ ಮೈಲೇಜ್ ಬಗ್ಗೆ, ಆ ಕಾರುಗಳಲ್ಲಿರುವ ಹಲವಾರು ಫೀಚರ್'ಗಳ ಬಗ್ಗೆ ಗಮನ ಹರಿಸುತ್ತಾರೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಈ ಲೇಖನದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹಾಗೂ ಎಸ್‌ಯುವಿಗಳಲ್ಲಿ ಲಭ್ಯವಿರುವ ಬೂಟ್ ಸ್ಪೇಸ್ ವಿವರಗಳನ್ನು ನೋಡೋಣ. ಈ ಲೇಖನದಿಂದ ಹೆಚ್ಚು ಲಗೇಜ್ ಸಂಗ್ರಹಿಸಲು ಹೆಚ್ಚು ಬೂಟ್ ಸ್ಪೇಸ್ ಇರುವ ಕಾರನ್ನು ಹುಡುಕುತ್ತಿರುವವರಿಗೆ ಅನುಕೂಲವಾಗುತ್ತದೆ ಎಂಬುದು ನಮ್ಮ ಭಾವನೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಹೋಂಡಾ ಜಾಝ್ - 354 ಲೀಟರ್

ಹೋಂಡಾ ಜಾಝ್ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ವಿಶಾಲವಾದ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಐವರು ವಯಸ್ಕರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಹ್ಯಾಚ್‌ಬ್ಯಾಕ್‌ ಕಾರು 354 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಟಾಟಾ ಆಲ್ಟ್ರೋಜ್ - 345 ಲೀಟರ್

ಟಾಟಾ ಆಲ್ಟ್ರೋಜ್ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್'ನಲ್ಲಿ ಪೂರ್ಣ 5 ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ ಕಾರುಗಳಲ್ಲಿ ಒಂದು. ಹೆಚ್ಚು ಸುರಕ್ಷಿತವಾದ ಈ ಹ್ಯಾಚ್‌ಬ್ಯಾಕ್ ಕಾರು 345 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ ಆರ್ - 340 ಲೀಟರ್

ವ್ಯಾಗನ್ ಆರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ಕಂಪನಿಯ ಕಾರುಗಳಲ್ಲಿ ಒಂದಾಗಿದೆ. ವಿಶಾಲವಾದ ಕ್ಯಾಬಿನ್ ಹೊಂದಿರುವ ಈ ಹ್ಯಾಚ್‌ಬ್ಯಾಕ್ ಕಾರು 340 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಮಾರುತಿ ಸುಜುಕಿ ಬಲೆನೊ - 339 ಲೀಟರ್

ವ್ಯಾಗನ್ ಆರ್ ಕಾರಿನಂತೆ ಬಲೆನೊ ಕಾರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಸೂಕ್ತವಾದ ಕ್ಯಾಬಿನ್ ಹಾಗೂ ದಕ್ಷ ಎಂಜಿನ್ ಹೊಂದಿರುವ ಈ ಕಾರಿನಲ್ಲಿ 5 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಮಾರುತಿ ಸುಜುಕಿ ಬಲೆನೊ ಕಾರು 339 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಹ್ಯುಂಡೈ ಐ 20 - 311 ಲೀಟರ್

ಹ್ಯುಂಡೈ ಕಂಪನಿಯು ತನ್ನ ಹೊಸ ತಲೆಮಾರಿನ ಐ 20 ಹ್ಯಾಚ್‌ಬ್ಯಾಕ್ ಕಾರ್ ಅನ್ನು 2020ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಹಳೆಯ ಮಾದರಿಗೆ ಹೋಲಿಸಿದರೆ ಈ ಹೊಸ ಕಾರು ಹೆಚ್ಚು ವ್ಹೀಲ್‌ಬೇಸ್ ಹೊಂದಿದೆ. ಈ ಕಾರು ಹಳೆಯ ಮಾದರಿಗೆ ಹೋಲಿಸಿದರೆ 26 ಲೀಟರ್ ಹೆಚ್ಚು ಅಂದರೆ 311 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಕಿಯಾ ಸೊನೆಟ್ - 392 ಲೀಟರ್

ಕಿಯಾ ಸೊನೆಟ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಕಿಯಾ ಸೊನೆಟ್ 392 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದರಿಂದ ಹೆಚ್ಚು ಲಗೇಜ್ ಸಾಗಿಸಬಹುದು.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಹ್ಯುಂಡೈ ವೆನ್ಯೂ - 350 ಲೀಟರ್

ಕಿಯಾ ಸೊನೆಟ್ ಕಾರಿನ ಪ್ರಮುಖ ಸ್ಪರ್ಧಿಗಳಲ್ಲಿ ಹ್ಯುಂಡೈ ವೆನ್ಯೂ ಸಹ ಸೇರಿದೆ. ಈ ಕಾರು 350 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ವೆನ್ಯೂ ಕಾರು ಪ್ರತಿ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಕಾರುಗಳಿವು

ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ - 433 ಲೀಟರ್

ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರುಗಳು 433 ಲೀಟರ್ ಬೂಟ್ ಸ್ಪೇಸ್ ಹೊಂದಿವೆ. ಈ ಎರಡೂ ಕಾರುಗಳು ಭಾರತದ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿವೆ.

Most Read Articles

Kannada
English summary
Hatchback cars and SUV with big boot space in Indian market. Read in Kannada.
Story first published: Thursday, June 24, 2021, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X