ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ 2021ರ ಜೂನ್‌ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಎಂಜಿ ಮೋಟಾರ್ ಕಂಪನಿಯು 3,558 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

2021ರ ಮೇ ತಿಂಗಳಿನಲ್ಲಿ ಎಂಜಿ ಮೋಟಾರ್ ಕಂಪನಿಯು 1,016 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಬರೊಬ್ಬರಿ ಶೇ.250 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ದೇಶಾದ್ಯಂತ ಹಂತಹಂತವಾಗಿ ಅನಾ ಲಾಕ್ ಮಾಡುವುದರಿಂದ ಕಳೆದ ತಿಂಗಳು ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆಯುವಲ್ಲಿ ಸಹಾಯಮಾಡಿದೆ ಎಂದು ಎಂಜಿ ಮೋಟಾರ್ ಕಂಪನಿ ಹೇಳಿದೆ.

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಜೂನ್‌ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಸೆಮಿ ಕಂಡಕ್ಟರ್ ಚಿಪ್‌ಗಳ ಕೊರತೆಯಿಂದಾಗಿ ಕಾರುಗಳ ಉತ್ಪಾದನೆಗೆ ಪರಿಣಾಮ ಬೀರಿದೆ ಎಂದು ಕಂಪನಿಯು ಹೇಳಿದೆ. ಇದು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿಯೂ ಕೂಡ ಮುಂದುವರಿಯುತ್ತದೆ.

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

2021ರ ಎರಡನೇ ತ್ರೈಮಾಸಿಕದಲ್ಲಿ ಎಂಜಿ ಒಟ್ಟು 7,139 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಮಾರಾಟವಾದ 2,722 ಯುನಿಟ್‌ಗಳಿಗಿಂತ ಶೇ.162 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾದ ಮಾರಾಟ ನಿರ್ದೇಶಕ ರಾಕೇಶ್ ಅವರು ಮಾತನಾಡಿ, ನಾವು ಜೂನ್‌ ತಿಂಗಳಿನಿಂದ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೋಡುತ್ತಿದ್ದೇವೆ. ಕೆಲವು ಮಾರುಕಟ್ಟೆಗಳು ಇನ್ನೂ ಲಾಕ್‌ಡೌನ್ ಹಂತದಲ್ಲಿದ್ದರೂ, ವ್ಯಾಕ್ಸಿನೇಷನ್ ಡ್ರೈವ್‌ನ ಹೆಚ್ಚಳವು ನಮಗೆ ಭರವಸೆಯನ್ನು ನೀಡಿದೆ,

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಹಬ್ಬದ ಸೀಸನ್ ನಲ್ಲಿ ಬೇಡಿಕೆ ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನು ಕರೋನಾ ಮೂರನೇ ಅಲೆಯು ಬರುವ ಸಾಧ್ಯತೆಗಳು ಇರುವುದರಿಂದ ನಾವು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದರು,

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ 'ಎಂಜಿ ಕೇರ್ ಅಟ್ ಹೋಮ್' ಕಾರ್ಯಕ್ರಮವನ್ನು ಮತ್ತೆ ಪರಿಚಯಿಸಿತು, ಇದರ ಅಡಿಯಲ್ಲಿ ಕಂಪನಿಯು ಮನೆ ಬಾಗಿಲಿನ ವಾಹನ ಸೇವೆಯನ್ನು ನೀಡುತ್ತಿದೆ. ಕಾರ್ ರಿನಿಟೈಸೇಶನ್ ಮತ್ತು ಫ್ಯೂಮಿಗೇಶನ್, ಜನರಲ್ ಕಾರ್ ಚೆಕ್-ಅಪ್, ಮತ್ತು ಕಾರ್ ರಿಪೇರಿ ಮತ್ತು ಸಣ್ಣ ರಿಪೇರಿ ಮತ್ತು ಫಿಟ್‌ಮೆಂಟ್‌ಗಳ ಸೇವೆಯನ್ನು ನೀಡುತ್ತಿದೆ.

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಎಲೆಕ್ಟ್ರಿಕ್ ವೆಹಿಕಲ್ ಪೋರ್ಟ್ಫೋಲಿಯೊವನ್ನು ಹೊಸ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ವಿಸ್ತರಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಜೂನ್ ತಿಂಗಳಿನಲ್ಲಿ 3,558 ಕಾರುಗಳನ್ನು ಮಾರಾಟ ಮಾಡಿದ ಎಂಜಿ ಮೋಟಾರ್

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ವಿವರಗಳು ಇನ್ನು ಬಹಿರಂಗವಾಗಿಲ್ಲ. ಎಂಜಿ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಹೊಸ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಝಡ್ಎಸ್ ಎಸ್‍ಯುವಿಯ ಪೆಟ್ರೋಲ್ ಮಾದರಿಯಾಗಿದ್ದು, ಈಗಾಗಲೇ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

Most Read Articles

Kannada
English summary
MG Motor India Sold 3,558 Units In June 2021. Read In Kananda.
Story first published: Thursday, July 1, 2021, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X