ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕಾರುಗಳ ಮಾರಾಟವು ಜೋರಾಗಿದೆ. ಕಾರು ಮಾರಾಟದಲ್ಲಿ ಎನ್‌ಸಿಆರ್ ಪ್ರಥಮ ಸ್ಥಾನದಲ್ಲಿದೆ. ಕಾರು ಮಾರಾಟದಲ್ಲಿ ದೆಹಲಿಯು ಬೆಂಗಳೂರು ಹಾಗೂ ಹೈದರಾಬಾದ್‌ನಂತಹ ನಗರಗಳನ್ನು ಹಿಂದಿಕ್ಕಿದೆ.

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಭಾರತದಲ್ಲಿ ಮಾರಾಟವಾಗುವ ಪ್ರತಿ 3 ಕಾರುಗಳಲ್ಲಿ 1 ಕಾರುಗಳು ಈ ಪ್ರಮುಖ ಹತ್ತು ನಗರಗಳಲ್ಲಿ ಮಾರಾಟವಾಗುತ್ತವೆ. ಪ್ರಥಮ ಸ್ಥಾನದಲ್ಲಿರುವ ಎನ್‌ಸಿಆರ್'ನಲ್ಲಿ 2021ರ ಹಣಕಾಸು ವರ್ಷದಲ್ಲಿ 1,36,869 ಯುನಿಟ್ ಕಾರುಗಳು ಮಾರಾಟವಾಗಿವೆ. ಎನ್‌ಸಿಆರ್'ನ ಮಾಸಿಕ ಮಾರಾಟ ಸರಾಸರಿ 12,443 ಯುನಿಟ್‌ಗಳಾಗಿದೆ.

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಎರಡನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ತಿಂಗಳಿಗೆ ಸರಾಸರಿ 11,719 ಯುನಿಟ್‌ಗಳನ್ನು ಹಾಗೂ ವಾರ್ಷಿಕವಾಗಿ ಒಟ್ಟು 1,28,907 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಒಟ್ಟು 1,08,870 ಯುನಿಟ್ ಕಾರುಗಳು ಮಾರಾಟವಾಗಿವೆ. ಬೆಂಗಳೂರಿನ ಮಾಸಿಕ ಸರಾಸರಿ ಕಾರು ಮಾರಾಟ 9897 ಯುನಿಟ್'ಗಳಾಗಿದೆ.

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ದಕ್ಷಿಣ ಭಾರತದಲ್ಲಿ ಹ್ಯುಂಡೈ ಹಾಗೂ ಕಿಯಾ ಕಂಪನಿಗಳ ಕಾರು ಮಾರಾಟವು ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್ ನಗರದಲ್ಲಿ 1,02,691 ಯುನಿಟ್ ಅಂದರೆ ತಿಂಗಳಿಗೆ ಸರಾಸರಿ 9936 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

1,01,681 ಯುನಿಟ್ ಕಾರುಗಳ ಮಾರಾಟದೊಂದಿಗೆ ದೇಶದ ಆರ್ಥಿಕ ರಾಜಧಾನಿ ಮುಂಬೈ ಐದನೇ ಸ್ಥಾನದಲ್ಲಿದೆ. ಮುಂಬೈನ ಮಾಸಿಕ ಸರಾಸರಿ ಕಾರು ಮಾರಾಟ 9,244 ಯುನಿಟ್'ಗಳಾಗಿದೆ.

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಅಹಮದಾಬಾದ್ ನಗರವು ಮಾಸಿಕ ಸರಾಸರಿ 7026 ಯುನಿಟ್ ಹಾಗೂ ವಾರ್ಷಿಕ 77,283 ಯುನಿಟ್ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ. ಪುಣೆಯಲ್ಲಿ ವಾರ್ಷಿಕ 77,090 ಯುನಿಟ್ ಹಾಗೂ ಮಾಸಿಕ ಸರಾಸರಿ 7008 ಯುನಿಟ್ ಕಾರುಗಳು ಮಾರಾಟವಾಗಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಚೆನ್ನೈ ನಗರದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 62,660 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಮೂರನೇ ಒಂದು ಭಾಗದಷ್ಟು ವಾಹನ ತಯಾರಕ ಕಂಪನಿಗಳು ಸಮೀಪದಲ್ಲಿದ್ದರೂ ಚೆನ್ನೈ ನಗರವು ಮಾರಾಟದಲ್ಲಿ ಎಂಟನೇ ಸ್ಥಾನದಲ್ಲಿದೆ.

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ದಕ್ಷಿಣ ಭಾರತದ ನಗರಗಳ ಪಟ್ಟಿಯಲ್ಲಿ ಚೆನ್ನೈ ಮೂರನೇ ಸ್ಥಾನದಲ್ಲಿದೆ. ಒಂಭತ್ತನೇ ಸ್ಥಾನದಲ್ಲಿರುವ ಕೋಲ್ಕತ್ತಾ ನಗರವು ದೇಶದ ಪೂರ್ವ ಭಾಗದಲ್ಲಿ ಅತಿದೊಡ್ಡ ಕಾರು ಮಾರಾಟ ಮಾಡುವ ನಗರವಾಗಿ ಹೊರಹೊಮ್ಮಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕೋಲ್ಕತ್ತಾ ನಗರದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 53,580 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕೋಲ್ಕತ್ತಾ ನಗರದ ಮಾಸಿಕ ಸರಾಸರಿ ಮಾರಾಟವು 4871 ಯುನಿಟ್'ಗಳಾಗಿದೆ.

ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಈ ಪಟ್ಟಿಯಲ್ಲಿ ಕೊನೆಯ ಅಂದರೆ ಹತ್ತನೇ ಸ್ಥಾನದಲ್ಲಿರುವ ಲಕ್ನೋ ನಗರದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 51,148 ಯುನಿಟ್ ಕಾರುಗಳು ಮಾರಾಟವಾಗಿವೆ.ಲಕ್ನೋ ಉತ್ತರ ಭಾರತದ ಪ್ರಮುಖ ನಗರವಾಗಿದೆ. ಲಕ್ನೋದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ 4650 ಯುನಿಟ್ ಕಾರುಗಳು ಮಾರಾಟವಾಗಿವೆ.

ಮೂಲ: ಆಟೋಪಂಡಿಟ್ಜ್

Most Read Articles

Kannada
English summary
Highest car selling cities in India. Read in Kannada.
Story first published: Wednesday, April 21, 2021, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X