2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಸರಕಾರಗಳಿಗೆ ತಲೆನೋವಾಗುತ್ತಿವೆ. ಅದರಲ್ಲೂ ಭಾರತದಂತಹ ಜನನಿಬಿಡ ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಯಾವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ವಾಹನ ತಯಾರಕ ಕಂಪನಿಗಳು ಸಹ ತಮ್ಮ ವಾಹನಗಳಲ್ಲಿ ಆಧುನಿಕ ಸುರಕ್ಷತಾ ಫೀಚರ್ ಗಳನ್ನು ನೀಡುತ್ತಿವೆ. ಹೋಂಡಾ (Honda) ಕಂಪನಿಯು ಸಹ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಂಪನಿಯು ಹೊಸ ತಂತ್ರಜ್ಞಾನಗಳನ್ನು ಅನ್ವೇಷಿಸಲು ಹಾಗೂ ಸಂಶೋಧಿಸಲು ಆರ್ ಅಂಡ್ ಡಿ ಕೇಂದ್ರವನ್ನು ಸಹ ಹೊಂದಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಈ ಮೂಲಕ ಭವಿಷ್ಯದ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅನ್ವೇಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ ಎಂದು ಹೋಂಡಾ ಮೋಟಾರ್ ಕಂಪನಿ ತಿಳಿಸಿದೆ. ಜಪಾನ್‌ ಮೂಲದ ಪ್ರಮುಖ ಆಟೋಮೊಬೈಲ್ ಕಂಪನಿಯಾದ ಹೋಂಡಾ 2050ರ ವೇಳೆಗೆ ವಿಶ್ವಾದ್ಯಂತ ತನ್ನ ದ್ವಿಚಕ್ರ ವಾಹನ ಹಾಗೂ ಕಾರುಗಳಿಂದ ಉಂಟಾಗುವ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಈಗಾಗಲೇ ಕೆಲಸ ಮಾಡಲು ಆರಂಭಿಸಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಇದರ ಭಾಗವಾಗಿ, ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಹೋಂಡಾ ತಿಳಿಸಿದೆ. ಅದರಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಕ ಸಹಾಯ ತಂತ್ರಜ್ಞಾನ, ಸುರಕ್ಷತೆ ಹಾಗೂ ಧ್ವನಿ ನೆಟ್‌ವರ್ಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಾಗಿ ಹೋಂಡಾ ಕಂಪನಿ ಮಾಹಿತಿ ಹಂಚಿಕೊಂಡಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಈ ತಂತ್ರಜ್ಞಾನದ ಮೂಲಕ ವಾಹನ ಚಾಲಕನಿಂದ ಆಗಬಹುದಾದ ಸಣ್ಣಪುಟ್ಟ ತಪ್ಪುಗಳನ್ನು ತಪ್ಪಿಸಲು ಹಾಗೂ ಅದರಿಂದ ಆಗಬಹುದಾದ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಸುರಕ್ಷತೆ ಹಾಗೂ ಸೌಂಡ್ ನೆಟ್‌ವರ್ಕ್ ತಂತ್ರಜ್ಞಾನವು ಚಾಲನೆಯಲ್ಲಿರುವ ವಾಹನ ಹಾಗೂ ಇತರ ವಾಹನಗಳು ಮತ್ತು ರಸ್ತೆಯಲ್ಲಿ ಪಾದಚಾರಿಗಳ ನಡುವೆ ಅಪಘಾತಗಳನ್ನು ಕಡಿಮೆ ಮಾಡುವ ರೀತಿಯಲ್ಲಿ ಸಂವಹನ ಮಾಡಲು ಸಾಧ್ಯವಾಗುತ್ತದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಇದರಿಂದ ಅನಿರೀಕ್ಷಿತ ಅಪಘಾತಗಳನ್ನು ತಡೆಯಬಹುದು. ಇದರ ಜೊತೆಗೆ ಅಪಘಾತಕ್ಕೂ ಮುನ್ನ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಘಾತದ ಬಗ್ಗೆ ಎಚ್ಚರಿಕೆ ನೀಡಲಾಗುವುದು. ಅಪಘಾತ ಮುಕ್ತ ಸಾರಿಗೆಯನ್ನು ಜಾರಿಗೆ ತರುವ ಪ್ರಯತ್ನದಲ್ಲಿ ತನ್ನ ಬಹುತೇಕ ವಾಹನಗಳಲ್ಲಿ ಸೆನ್ಸಿಂಗ್ 360 ತಂತ್ರಜ್ಞಾನವನ್ನು ಪರಿಚಯಿಸಲು ಹೊಂಡಾ ಕಂಪನಿ ಯೋಜಿಸಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಈ ಬಗ್ಗೆ ಸ್ವತಃ ಹೋಂಡಾ ಕಂಪನಿಯೇ ಈ ಹಿಂದೆ ಹೇಳಿ ಕೊಂಡಿತ್ತು. ಹೋಂಡಾ ಸೆನ್ಸಿಂಗ್ 360 ವ್ಯವಸ್ಥೆಯು ಒನ್ ವೇ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸಿಗ್ನಲ್‌ ಗುರುತಿಸುವಿಕೆ, ಚಾಲಕನಿಗೆ ಅಗೋಚರವಾಗಿರುವ ಪ್ರದೇಶಗಳ ಮೇಲ್ವಿಚಾರಣೆ, ಹಿಮ್ಮುಖವಾಗಿ ಚಲಿಸುವಾಗ ಮುಂಬರುವ ವಾಹನಗಳನ್ನು ಎಚ್ಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

2030 ರ ವೇಳೆಗೆ ಪ್ರಮುಖ ದೇಶಗಳಲ್ಲಿರುವ ಎಲ್ಲಾ ಮಾದರಿಗಳಲ್ಲಿ ಈ ಚಾಲಕ ಸಹಾಯ ವ್ಯವಸ್ಥೆಯನ್ನು ತರಲು ಹೋಂಡಾ ಕಂಪನಿಯು ಕಾರ್ಯ ನಿರ್ವಹಿಸುತ್ತಿದೆ. ಹೋಂಡಾ ಕಂಪನಿಯು ತನ್ನ ಅತ್ಯಾಧುನಿಕ ಡ್ರೈವಿಂಗ್ ಸಿಸ್ಟಂಗಳ ಕಾರ್ಯವನ್ನು ನವೀಕರಿಸಲು ತಯಾರಿ ನಡೆಸುತ್ತಿದೆ. ಮುಂಬರುವ ವರ್ಷಗಳಲ್ಲಿ ತನ್ನ ಕಾರುಗಳಲ್ಲಿ ಮೊದಲ ಬಾರಿಗೆ ಮೋಟಾರ್‌ಸೈಕಲ್ ಗುರುತಿಸುವಿಕೆಯನ್ನು ಪರಿಚಯಿಸಲು ನಿರ್ಧರಿಸಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಚಾಲಕನಿಗೆ ಆತಂಕವನ್ನುಂಟು ಮಾಡುವ ಡ್ರೈವಿಂಗ್ ದೋಷಗಳ ಕಾರಣಗಳನ್ನು ಪತ್ತೆ ಹಚ್ಚಲು ಎಫ್‌ಎಂಆರ್‌ಐ (ಎಫ್‌ಎಂಆರ್‌ಐ - ಫಂಕ್ಷನಲ್ ಮ್ಯಾಗ್ನೆಟಿಕ್ ವೈಬ್ರೇಶನ್ ಇಮೇಜಿಂಗ್), ಹೊಸ ತಲೆಮಾರಿನ ಚಾಲಕ - ಸಹಾಯ ಕಾರ್ಯಾಚರಣೆಗಳ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಬಳಸಿಕೊಂಡು ಚಾಲನೆ ಮಾಡುವಾಗ ಜನರ ಆಲೋಚನಾ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವಂತಹ ತಂತ್ರಜ್ಞಾನಗಳನ್ನು ಹೋಂಡಾ ಕಂಪನಿಯು ಸಂಶೋಧಿಸುತ್ತಿದ್ದು, ಅಭಿವೃದ್ಧಿಪಡಿಸುತ್ತಿದೆ. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ವೈರಸ್ ವಿರುದ್ದ ಹೋರಾಡಲು ಹಲವಾರು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಭಾರತದಲ್ಲಿ ವೈರಸ್ ವಿರುದ್ದದ ಹೋರಾಡಲು ತನ್ನ ಗ್ರಾಹಕರಿಗೆ ಹೊಸ ಉತ್ಪನ್ನವೊಂದನ್ನು ಪರಿಚಯಿಸಿದೆ. ಈ ಮೂಲಕ ಕಾರು ಪ್ರಯಾಣವನ್ನು ಸುರಕ್ಷಿತವಾಗಿಸಲು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಿಡಿಭಾಗಗಳ ಪೂರೈಕೆ ಕಂಪನಿಗಳೊಂದಿಗೆ ಜೊತೆಗೂಡಿ ಹೊಸದಾಗಿ ಆ್ಯಂಟಿ ವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಉತ್ಪನ್ನವನ್ನು ಪರಿಚಯಿಸಿದೆ. ಈ ಹೊಸ ಏರ್ ಫಿಲ್ಟರ್ ಕಾರಿನ ಕ್ಯಾಬಿನ್ ಅನ್ನು ಕೆಲವೇ ನಿಮಿಷಗಳಲ್ಲಿ ಶುದ್ದಗೊಳಿಸಿ ಅಪಾಯಕಾರಿ ವೈರಸ್‌ಗಳನ್ನು ಮಟ್ಟಹಾಕಬಲ್ಲದು.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಪಿ.ಎಂ 2.5 ಏರ್ ಫಿಲ್ಟರ್ ಸೌಲಭ್ಯವು ಕಾರಿನ ಕ್ಯಾಬಿನ್‌ನಲ್ಲಿರುವ ಹಾನಿಕಾರಕ ಅನಿಲಗಳನ್ನು ಯಶಸ್ವಿಯಾಗಿ ಫಿಲ್ಟರ್ ಮಾಡಿ, ಅಜೈವಿಕ, ಸಾವಯವ ಕಣಗಳನ್ನು ಹಾಗೂ ಏರೋಸಾಲ್‌ಗಳನ್ನು ಕಡಿಮೆ ಮಾಡುತ್ತದೆ. ಈ ಏರ್ ಫಿಲ್ಟರ್‌ನಲ್ಲಿರುವ ವಿವಿಧ ಪದರಗಳು ಧೂಳಿನ ಕಣಗಳನ್ನು ಹಾಗೂ ವೈರಸ್ ಅನ್ನು ಆಕರ್ಷಿಸುವ ಮೂಲಕ ನಿಷ್ಕ್ರಿಯಗೊಳಿಸುತ್ತವೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಈ ಮೂಲಕ ಕ್ಯಾಬಿನ್ ಗಾಳಿಯ ಗುಣಮಟ್ಟವನ್ನು ಹೆಚ್ಚಿಸುವ ಹೊಸ ಏರ್ ಫಿಲ್ಟರ್ ಸೌಲಭ್ಯವು ಕಾರು ಪ್ರಯಾಣದ ವೇಳೆ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಿದೆ. ಹೊಸ ಏರ್ ಫಿಲ್ಟರ್ ಸೌಲಭ್ಯವು ಹೋಂಡಾ ಕಾರ್ಸ್ ಅಧಿಕೃತ ಶೋರೂಂಗಳಲ್ಲಿ ಖರೀದಿಗೆ ಲಭ್ಯವಿದೆ.

2050ರ ವೇಳೆಗೆ ಶೂನ್ಯ ಅಪಘಾತದ ಗುರಿ ಹೊಂದಿದ Honda

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಸುರಕ್ಷಿತ ಕಾರು ಮಾರಾಟಕ್ಕಾಗಿ ಪ್ರತ್ಯೇಕವಾದ ಪ್ಲ್ಯಾಟ್‌ಫಾರಂ ತೆರೆದಿದೆ. ಇದರಿಂದ ಗ್ರಾಹಕರು ಶೋರೂಂಗಳಿಗೆ ತೆರಳದೇ ತಮ್ಮ ಇಷ್ಟದ ಕಾರು ಮಾದರಿಯನ್ನು ಆನ್‌ಲೈನ್ ಮೂಲಕವೇ ವೀಕ್ಷಣೆ ಮಾಡಬಹುದು.

Most Read Articles

Kannada
Read more on ಹೋಂಡಾ honda
English summary
Honda aims for zero accident deaths by 2050 video details
Story first published: Monday, November 29, 2021, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X